ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳರ ವಿರೋಧ: ಮೋದಿ ಪದಗ್ರಹಣಕ್ಕೆ ರಜನಿ ಬರ್ತಿಲ್ಲ

By Mahesh
|
Google Oneindia Kannada News

ನವದೆಹಲಿ, ಮೇ.26 : ತಮಿಳು ಚಿತ್ರರಂಗದ ಆರಾಧ್ಯ ದೈವ ಸೂಪರ್ ಸ್ಟಾರ್ ರಜನಿಕಾಂತ್ ಅವರು ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಶುಭ ಸಂದರ್ಭದಲ್ಲಿ ಜತೆಗಿರುವುದಿಲ್ಲ ಎಂಬ ಸುದ್ದಿ ಬಂದಿದೆ. ರಜನಿ ಅವರು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಕಾರಣ ನೀಡಲಾಗಿದೆಯಾದರೂ ತಮಿಳರ ವಿರೋಧ ಕಟ್ಟಿಕೊಳ್ಳಲು ತಯಾರಿಲ್ಲದ ರಜನಿ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಅವರು ಮೋದಿ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದನ್ನು ತಮಿಳುನಾಡಿನ ಬಹುತೇಕ ಪಕ್ಷಗಳು ವಿರೋಧಿಸಿವೆ. ತಮಿಳರ ವಿರೋಧಿ ರಾಜಪಕ್ಸೆ ಅವರು ಆಗಮನ ವಿರೋಧಿಸಿ ಕಳೆದ ಎರಡು ಮೂರು ದಿನಗಳಿಂದ ವಿವಿಧ ಸಂಘಟನೆಗಳು ನವದೆಹಲಿಯಲ್ಲೂ ಪ್ರತಿಭಟನೆ ನಡೆಸಿವೆ. ಎನ್ಡಿಎ ಮಿತ್ರಪಕ್ಷದ ನಾಯಕ ವೈಕೋ ಕೂಡಾ ರಾಜಪಕ್ಸೆ ಆಗಮನವನ್ನು ವಿರೋಧಿಸಿದ್ದಾರೆ.

Rajnikanth not to attend Narendra Modi swearing-in ceremony

ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಸೂಪರ್ ಸ್ಟಾರ್ ರಜನಿ ಅವರು ಮೋದಿ ಅವರ ಪದಗ್ರಹಣ ಸಮಾರಂಭಕ್ಕೆ ಗೈರು ಹಾಜರಾಗುತ್ತಿದ್ದಾರೆ. ಎಐಎಡಿಎಂಕೆ, ಡಿಎಂಕೆ ಪಕ್ಷಗಳು ಮೋದಿ ಪದಗ್ರಹಣ ಸಮಾರಂಭಕ್ಕೆ ಬಹಿಷ್ಕಾರ ಹಾಕಿವೆ. ತಮಿಳುನಾಡಿನ ಸಿಎಂ ಜಯಲಲಿತಾ ಅವರು ಗೈರುಹಾಜರಾಗುತ್ತಿದ್ದಾರೆ. ಹೀಗಾಗಿ ತಮಿಳರಿಗೆ ಬೇಡವಾದ ಸಮಾರಂಭಕ್ಕೆ ಹಾಜರಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ರಜನಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.[ಪ್ರಮಾಣ ವಚನ ಸ್ವೀಕಾರಕ್ಕೆ 'ಅಮ್ಮ' ಬರ್ತಿಲ್ಲ]

ಮೈಸೂರು ಪ್ರಾಂತ್ಯದಲ್ಲಿ ರಜನಿ ಅವರ ಲಿಂಗಾ ಚಿತ್ರದ ಶೂಟಿಂಗ್ ಜಾರಿಯಲ್ಲಿರುವುದು ನಿಜ. ಜತೆಗೆ ಕೊಚ್ಚಡಯಾನ್ ಚಿತ್ರ ಈಗಷ್ಟೇ ಬಿಡುಗಡೆಯಾಗಿದೆ. ಆದರೆ, ಪ್ರಧಾನಿಯಾಗಿ ಮೋದಿ ಅಧಿಕಾರ ವಹಿಸಿಕೊಳ್ಳುವ ಸಮಾರಂಭಕ್ಕೆ ಆಗಮಿಸಲು ಬಂದಿರುವ ಆಹ್ವಾನವನ್ನು ರಜನಿ ತಿರಸ್ಕರಿಸುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ರಜನಿಕಾಂತ್ ಜತೆಗೆ ಭಾರತ ರತ್ನ ಲತಾ ಮಂಗೇಷ್ಕರ್ ಹಾಗೂ ಬಿಗ್ ಬಿ ಅಮಿತಾಬ್ ಅವರಿಗೂ ಮೋದಿ ಪ್ರಧಾನಿ ಪದಗ್ರಹಣ ಸಮಾರಂಭಕ್ಕೆ ಆಹ್ವಾನ ಕಳಿಸಲಾಗಿದೆ.

ಸಮಾರಂಭದಲ್ಲಿ ಭಾಗವಹಿಸುವಂತೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ಆಹ್ವಾನ ಬಂದಿದೆಯಾದರೂ ರಾಜ್ಯದಲ್ಲಿ ನಿಗದಿಯಾಗಿರುವ ಕಾರ್ಯಕ್ರಮಗಳ ಒತ್ತಡದ ಕಾರಣ ತನಗೆ ಭಾಗವಹಿಸಲು ಸಾಧ್ಯವಿಲ್ಲ ಎಂದು ಚಾಂಡಿ ಮೋದಿಗೆ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ಹೇಳಿವೆ. ಸಮಾರಂಭದಲ್ಲಿ ಭಾಗವಹಿಸುವುದರಿಂದ ತಪ್ಪಿಸಿಕೊಳ್ಳುವ ಚಾಂಡಿ ನಿರ್ಧಾರ ದುರದೃಷ್ಟಕರ ಎಂದು ಕೇರಳದ ಹಿರಿಯ ಬಿಜೆಪಿ ನಾಯಕ ಒ.ರಾಜಗೋಪಾಲ್ ಹೇಳಿದ್ದಾರೆ.(ಪಿಟಿಐ)

English summary
Tamil superstar Rajnikanth, who had been invited to attend the swearing-in ceremony of Narendra Modi on Monday, will not attend the function, sources close to the actor said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X