ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಕರರಾಮನ್‌ ಕೊಲೆ ಪ್ರಕರಣ: ಕಂಚಿಶ್ರೀಗಳಿಗೆ ಮುಕ್ತಿ

By Mahesh
|
Google Oneindia Kannada News

ಪುದುಚೇರಿ, ಸೆ.14:ಶಂಕರರಾಮನ್‌ ಕೊಲೆ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳಾಗಿದ್ದ ಕಂಚಿ ಮಠದ ಹಿರಿಯ ಹಾಗೂ ಕಿರಿಯ ಸ್ವಾಮೀಜಿಗಳು ಖುಲಾಸೆಯಾಗಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ಕೇಂದ್ರಾಡಳಿತ ಪ್ರದೇಶ ಪುದುಚೇರಿ ನಿರ್ಧರಿಸಿದೆ. ಇದರಿಂದಾಗಿ ಕಂಚಿಶ್ರೀಗಳು ಹಾಗೂ ಭಕ್ತಾದಿಗಳು ಸಂತಸಭರಿತರಾಗಿದ್ದಾರೆ. ಸುಮಾರು 10 ವರ್ಷಗಳ ಕಾಲ ಕಂಚಿಶ್ರೀಗಳಿಗೆ ಕಾಟ ಕೊಟ್ಟ ಈ ಕೊಲೆ ಪ್ರಕರಣ ಈ ರೀತಿ ಮುಕ್ತಾಯ ಕಂಡಿದೆ.

ಕಂಚಿ ಮಠದ ಹಿರಿಯ ಶ್ರೀ ಜಯೇಂದ್ರ ಸರಸ್ವತಿ ಹಾಗೂ ಕಿರಿಯ ಶ್ರೀ ವಿಜಯೇಂದ್ರ ಸರಸ್ವತಿ ಅವರನ್ನು ಖುಲಾಸೆಗೊಳಿಸಿ ಎಂಟು ತಿಂಗಳ ಹಿಂದೆ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದೆ ಇರಲು ಪುದುಚೇರಿ ಸರ್ಕಾರ ನಿರ್ಧರಿಸಿದೆ. ತೀರ್ಪನ್ನು ಪ್ರಶ್ನಿಸದಂತೆ ವಿಶೇಷ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿ ಪುದುಚೇರಿ ಸರ್ಕಾರ ಆದೇಶ ಹೊರಡಿಸಿದೆ.

Puducherry government Not to Appeal in Sankararaman Case

ಏನಿದು ಪ್ರಕರಣ?: ಕಾಂಚಿಪುರಂನ ವರದರಾಜ ಪೆರುಮಾಳ್‌ ದೇಗುಲದಲ್ಲಿ 2004ರ ಸೆ.3ರಂದು ಉದ್ಯೋಗಿ ಶಂಕರರಾಮನ್‌ ಭೀಕರವಾಗಿ ಕೊಲೆಯಾಗಿದ್ದರು. ಈ ಸಂಬಂಧ ಕಂಚಿ ಹಿರಿಯಶ್ರೀಗಳಾದ ಜಯೇಂದ್ರ ಸರಸ್ವತಿ ಹಾಗೂ ವಿಜಯೇಂದ್ರ ಸರಸ್ವತಿ ಅವರನ್ನು ಅದೇ ವರ್ಷದ ನವೆಂಬರ್‌ನಲ್ಲಿ ಬಂಧಿಸಲಾಗಿತ್ತು. ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ಈ ಪ್ರಕರಣದ ವಿಚಾರಣೆಯನ್ನು ತಮಿಳುನಾಡಿನಿಂದ ಪುದುಚೇರಿಗೆ ವರ್ಗಾಯಿಸಲಾಗಿತ್ತು. ಕಂಚಿ ಮಠದ ಶ್ರೀಗಳು ಸೇರಿದಂತೆ 21 ಜನ ಆರೋಪಿಗಳು ಈ ಪ್ರಕರಣದಲ್ಲಿ ಖುಲಾಸೆಯಾಗಿದ್ದರು.

ಖುಲಾಸೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಪುದುಚೇರಿ ಗರ್ವರ್ನರ್ ಲೆ. ವಿರೇಂದ್ರ ಕಟಾರಿಯಾ ಅವರು ಸರ್ಕಾರಕ್ಕೆ ಅನುಮತಿ ನೀಡಿದ್ದರು. ಆದರೆ, ಕಟಾರಿಯಾ ಅವರು ರಾಜೀನಾಮೆ ನೀಡಿ ರಾಜ್ಯಪಾಲ ಹುದ್ದೆ ತೊರೆದ ಈ ಬೆಳವಣಿಗೆ ನಡೆದಿದೆ. ಪುಚುಚೇರಿಯ ಕಾನೂನು ವಿಭಾಗದ ಅಭಿಪ್ರಾಯ ಸಂಗ್ರಹಿಸಿ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಲಾಯಿತು ಎಂದು ಅಟರ್ನಿ ಜನರಲ್ ಮುಕುಲ್ ರೊಹ್ಟಕಿ ಹೇಳಿದ್ದಾರೆ.

English summary
It is almost the end of the road for the decade-old Sankararaman murder case, in which the two sankaracharyas of Kanchi mutt - Sri Jayendra Saraswathi and Sri Vijayendra Saraswathi — had been cited as accused. Puducherry government has decided not to file any appeal in the High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X