ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳಿನ ಸ್ಟಾರ್ ವಿಜಯ್ ಜತೆ ಮೋದಿ

By Mahesh
|
Google Oneindia Kannada News

ಚೆನ್ನೈ, ಏ.17: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ ಮೇಲೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮತ್ತೊಬ್ಬ ಸ್ಟಾರ್ ವಿಜಯ್ ಅವರನ್ನು ಕಳೆದ ರಾತ್ರಿ ಭೇಟಿ ಮಾಡಿದ್ದಾರೆ. ರಜನಿ ಭೇಟಿ ಚಿತ್ರವನ್ನು ಮೋದಿ ಅವರು ತಕ್ಷಣವೇ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಹಾಕಿದ ರೀತಿಯಲ್ಲೆ ವಿಜಯ್ ಜತೆಪಿನ ಚಿತ್ರವನ್ನು ಮೋದಿ ಟ್ವೀಟ್ ಮಾಡಿದ್ದಾರೆ.

ಇಳೆಯದಳಪತಿ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ವಿಜಯ್ ಅವರು ರಾಜಕೀಯದಿಂದ ದೂರವಾಗೇನೂ ಉಳಿದಿಲ್ಲ. ರಜನಿಕಾಂತ್ ನಂತರ ಕಮಲ್,ಅಜಿತ್, ಸೂರ್ಯರಂತೆ ವಿಜಯ್ ಕೂಡಾ ತನ್ನದೇ ಆದ ಅಭಿಮಾನಿಗಳ ಸಮೂಹವನ್ನು ಹೊಂದಿದ್ದಾರೆ. ಈ ಹಿಂದೆ ಡಿಎಂಕೆ, ಕಾಂಗ್ರೆಸ್, ಎಐಎಡಿಎಂಕೆ ಪಕ್ಷದ ಕದತಟ್ಟಿದ್ದು ಸುಳ್ಳಲ್ಲ. ಈಗ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರ ಜತೆ ಮಾತುಕತೆ ನಡೆಸಿರುವುದು ತಮಿಳುನಾಡಿನ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.[ಮೋದಿ ಜತೆಯಲ್ಲಿ ಸೂಪರ್ ಸ್ಟಾರ್ ರಜನಿ]

ರಜನಿ ಕಾಂತ್ ಅವರ ಭೇಟಿ ಮಾದರಿಯಲ್ಲೇ ಇದು ಕೂಡಾ ಸೌಹಾರ್ದಯುತ ಭೇಟಿ ಎಂದು ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅದರೆ, ರಾಜಕೀಯ ಪಂಡಿತರು ಬೇರೆಯದ್ದೇ ಲೆಕ್ಕಾಚಾರ ಹಾಕುತ್ತಿದ್ದಾರೆ. ವಿಜಯ್ ಭೇಟಿ ನಂತರ ಅಲ್ಲಸಂಖ್ಯಾತರ ಓಲೈಕೆ ಮಾಡುವುದು ಬಿಜೆಪಿಗೆ ಸುಲಭವಾಗಲಿದೆ. ತಮಿಳುನಾಡಿನಲ್ಲಿ ಬಿಜೆಪಿ ತನ್ನ ಬುನಾದಿ ಹಾಕಲು ಬಲ ಸಿಗಲಿದೆ ಎನ್ನಲಾಗಿದೆ.ವಿಜಯ್ ಅವರ ಜತೆ ಮೋದಿ ಭೇಟಿ ಚಿತ್ರಗಳು ಇಲ್ಲಿವೆ ನೋಡಿ

ವಿಜಯ್ ಅವರ ಜತೆ ಮೋದಿ ಭೇಟಿ ಚಿತ್ರಗಳು

ವಿಜಯ್ ಅವರ ಜತೆ ಮೋದಿ ಭೇಟಿ ಚಿತ್ರಗಳು

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ ಮೇಲೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮತ್ತೊಬ್ಬ ಸ್ಟಾರ್ ವಿಜಯ್ ಅವರನ್ನು ಕಳೆದ ರಾತ್ರಿ ಭೇಟಿ ಮಾಡಿದ್ದಾರೆ. ರಜನಿ ಭೇಟಿ ಚಿತ್ರವನ್ನು ಮೋದಿ ಅವರು ತಕ್ಷಣವೇ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಹಾಕಿದ ರೀತಿಯಲ್ಲೆ ವಿಜಯ್ ಜತೆಪಿನ ಚಿತ್ರವನ್ನು ಮೋದಿ ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನ ಜನಪ್ರಿಯ ವ್ಯಕ್ತಿ ಜತೆ

ತಮಿಳುನಾಡಿನ ಜನಪ್ರಿಯ ವ್ಯಕ್ತಿ ಜತೆ ಫೊಟೊ ಎಂದು ಮೋದಿ ಟ್ವೀಟ್

ಮತ್ತೆ ಟ್ವಿಟ್ಟರ್ ನಲ್ಲಿ ಮೋದಿ ಟ್ವೀಟ್ ಅಲೆ

ಮತ್ತೆ ಟ್ವಿಟ್ಟರ್ ನಲ್ಲಿ ಮೋದಿ ಟ್ವೀಟ್ ಅಲೆ

ಮತ್ತೆ ಟ್ವಿಟ್ಟರ್ ನಲ್ಲಿ ಮೋದಿ ಟ್ವೀಟ್ ಅಲೆ ಎದ್ದಿದ್ದು, ವಿಜಯ್ ಜತೆ ಮೋದಿ ಚಿತ್ರ ಟ್ವೀಟ್ ಮಾಡಿರುವುದು 1716 ಬಾರಿ ರೀಟ್ವಿಟ್, 1655 ಫೇವರೀಟ್ಸ್ ಆಗಿದೆ.

ಸರಳ ವ್ಯಕ್ತಿ ಎಂದು ವಿಜಯ್ ಗೆ ಪ್ರಶಂಸೆ

ಸರಳ ವ್ಯಕ್ತಿ ಎಂದು ವಿಜಯ್ ಗೆ ಪ್ರಶಂಸೆ

ಸಕ್ರಿಯ ರಾಜಕೀಯ ಪ್ರವೇಶಕ್ಕೆ ಉತ್ಸುಕರಾಗಿರುವ ವಿಜಯ್ ಅವರಿಗೆ ಮೋದಿ ಆಹ್ವಾನ ನೀಡಿದ್ದಾರೆ ಎಂಬ ಸುದ್ದಿಯೂ ಇದೆ

ರಾಜಕೀಯ ಸಮಾವೇಶಗಳ ನಡುವೆ ಮೋದಿ

ರಾಜಕೀಯ ಸಮಾವೇಶಗಳ ನಡುವೆ ಮೋದಿ

ರಾಜಕೀಯ ಸಮಾವೇಶಗಳ ನಡುವೆ ಮೋದಿ ಅವರು ತಮಿಳುನಾಡಿನ ಸೆಲೆಬ್ರಿಟಿಗಳ ಜತೆ ಮಾತುಕತೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

 ಕಾಂಗ್ರೆಸ್ ಪರ ಕಾಣಿಸಿಕೊಂಡಿದ್ದ ವಿಜಯ್

ಕಾಂಗ್ರೆಸ್ ಪರ ಕಾಣಿಸಿಕೊಂಡಿದ್ದ ವಿಜಯ್

ವಿಜಯ್ ಅವರು ಕ್ರೈಸ್ತ ಸಮುದಾಯ ಅನುಯಾಯಿಯಾಗಿದ್ದು, ಅಲ್ಪಸಂಖ್ಯಾತ ಮೀಸಲು ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲೇ ಸ್ಪರ್ಧಿಸಲು ಬಯಸಿದ್ದರು ಆದರೆ, ಟಿಕೆಟ್ ಸಿಕ್ಕಿರಲಿಲ್ಲ. ಇತ್ತೀಚಿನ ಅವರ ಮಾಸ್ ಚಿತ್ರಗಳು ಅವರ ಸಕ್ರಿಯ ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆದಿವೆ ಎನ್ನಬಹುದು.

ತಮಿಳುನಾಡಿನ ಸಮಾವೇಶ ಚಿತ್ರಗಳು

ಕೊಯಮತ್ತೂರಿನಲ್ಲಿ ನಡೆದ ಸಮಾವೇಶದ ಚಿತ್ರ ಟ್ವೀಟ್ ಮಾಡಿರುವ ಮೋದಿ

English summary
Politics and Vijay seem like inseparable. After having connections with the parties like the Congress, DMK and AIADMK, now, the Illayathalapathy Vijay has met BJP's Prime Ministerial candidate Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X