ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಮ್ಮ' ನಾಡಲ್ಲಿ 53 ಮಹಿಳೆಯರು ಮಾತ್ರ ಕಣಕ್ಕೆ

By Mahesh
|
Google Oneindia Kannada News

ಚೆನ್ನೈ, ಏ.20: ಮಹಿಳಾ ಸಬಲೀಕರಣ, ಮೀಸಲಾತಿ ಬಗ್ಗೆ ಕಾಂಗ್ರೆಸ್, ಬಿಜೆಪಿ ನಾಯಕರು ಉದ್ದುದ್ದಾ ಭಾಷಣ ಬಿಗಿದರೂ ಚುನಾವಣೆ ಪ್ರಶ್ನೆ ಬಂದರೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಲ್ಲಿ ಮಾತ್ರ ಹಿಂದೇಟು ಹಾಕುತ್ತಾರೆ. ಜಯಲಲಿತಾ ಆಡಳಿತಾರೂಢ ತಮಿಳುನಾಡಿನಲ್ಲೂ ಪರಿಸ್ಥಿತಿ ಬದಲಾಗಿಲ್ಲ, ಶೇ 7ರಷ್ಟು ಮಾತ್ರ ಮಹಿಳಾ ಅಭ್ಯರ್ಥಿಗಳು ಕಣದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಸುಮಾರು 845 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಈ ಪೈಕಿ 53 ಮಂದಿ ಅಥವಾ ಶೇ 7 ರಷ್ಟು ಮಾತ್ರ ಮಹಿಳಾ ಅಭ್ಯರ್ಥಿಯಾಗಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ಹಾಗೂ ತಮಿಳುನಾಡು ಎಲೆಕ್ಷನ್ ವಾಚ್(ಟಿಎನ್ ಇಡಬ್ಲ್ಯೂ) ವರದಿ ನೀಡಿದೆ.

ಅಭ್ಯರ್ಥಿಗಳ ಹಿನ್ನೆಲೆ, ಕ್ರಿಮಿನಲ್ ಚಟುವಟಿಕೆ, ಆರ್ಥಿಕ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಿ ವರದಿ ಮಾಡುವ ಎಡಿಆರ್ 2009ರ ಲೋಕಸಭೆ ಚುನಾವಣೆಯಲ್ಲಿ 48 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು ಈ ಬಾರಿ ಹೆಚ್ಚಿನ ಸುಧಾರಣೆ ಕಂಡು ಬಂದಿಲ್ಲ. ಅಮ್ಮ ಎಂದು ಕರೆಸಿಕೊಳ್ಳುವ ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ ಅವರ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿಯುವ ನೀರಿಕ್ಷೆ ಇತ್ತು. ಆದರೆ, ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ ಎನ್ನಲಾಗಿದೆ.

Only seven per cent women candidates in TN poll fray

ಈ ಬಾರಿ ಸುಮಾರು 103 ಅಭ್ಯರ್ಥಿಗಳು ಅಥವಾ ಶೇ 12ರಷ್ಟು ಮಂದಿ ಕ್ರಿಮಿನಲ್ ಕೇಸ್ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. 2009ರಲ್ಲಿ ಈ ಸಂಖ್ಯೆ 63ರಷ್ಟಿತ್ತು. ಕೊಲೆ, ಕೊಲೆ ಪ್ರಯತ್ನ, ಕಿಡ್ನಾಪ್ ಸೇರಿದಂತೆ ತೀವ್ರವಾದ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಸಂಖ್ಯೆ 53ರಷ್ಟಿದೆ.

ಪಕ್ಷವಾರು ಲೆಕ್ಕ ಹಾಕಿದರೆ ಕಾಂಗ್ರೆಸ್ 39 ಅಭ್ಯರ್ಥಿಗಳ ಪೈಕಿ 9 ಅಭ್ಯರ್ಥಿಗಳು ಕ್ರಿಮಿನಲ್ ಕೇಸು ಎದುರಿಸುತ್ತಿದ್ದಾರೆ. ಬಿಜೆಪಿಯ 9 ಅಭ್ಯರ್ಥಿಗಳಲ್ಲಿ ಇಬ್ಬರು, ಎಐಎಡಿಎಂಕೆಯ 39 ಅಭ್ಯರ್ಥಿಗಳಲ್ಲಿ 7 ಮಂದಿ, ಡಿಎಂಕೆಯ 34 ಅಭ್ಯರ್ಥಿಗಳ ಪೈಕಿ 6 ಮಂದಿ, ಡಿಎಂಡಿಕೆಯ 14 ಅಭ್ಯರ್ಥಿಗಳ ಪೈಕಿ 5 ಜನ ಕ್ರಿಮಿನಲ್ ಕೇಸ್ ಹೊಂದಿದ್ದಾರೆ. ಅಚ್ಚರಿ ಎಂದರೆ ಎಎಪಿಯ 23 ಅಭ್ಯರ್ಥಿಗಳಲ್ಲಿ 4 ಜನ ಕ್ರಿಮಿನಲ್ ಕೇಸು ಎದುರಿಸುತ್ತಿದ್ದಾರೆ.

ತಮಿಳುನಾಡಿನ 39 ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ 178 ಮಂದಿ ಕೋಟ್ಯಧಿಪತಿಗಳು ಕಾಣಿಸಿಕೊಂಡಿದ್ದಾರೆ. 2009ರಲ್ಲಿ 98 ಮಂದಿ ಕೋಟ್ಯಧಿಪತಿಗಳಿದ್ದರು.

ವಿದ್ಯಾರ್ಹತೆ ವಿಷಯಕ್ಕೆ ಬಂದರೆ ಶೇ 47 ಮಂದಿ 12th(ಪಿಯುಸಿ) ಪಾಸ್ ಅಥವಾ ಅದಕ್ಕಿಂತ ಕಡಿಮೆ ಓದಿದವರಾಗಿದ್ದರೆ ಶೇ 45 ಮಂದಿ ಪದವೀಧರರಿದ್ದಾರೆ. ಸುಮಾರು 21 ಅಭ್ಯರ್ಥಿಗಳು ತಾವು ಅನಕ್ಷರಸ್ಥರು ಎಂದು ಘೋಷಿಸಿಕೊಂಡಿದ್ದಾರೆ. ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಿಗೆ ಏ.24ರಂದು ಮತದಾನ ನಡೆಯಲಿದೆ. (ಪಿಟಿಐ)

English summary
Of the total 845 candidates in the fray for April 24 Lok Sabha elections in Tamil Nadu, just 53, mere seven per cent, are women candidates, according to an analysis by the Association for Democratic Reforms (ADR) and TN Election Watch (TNEW).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X