ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೊಬೈಲುಗಳು ವಿದ್ಯಾರ್ಥಿಗಳ ಕೈಯಲ್ಲಿ ಬಾಂಬುಗಳಿದ್ದಂತೆ'

By Srinath
|
Google Oneindia Kannada News

ಚೆನ್ನೈ, ಏ.18: ಆಧುನಿಕ ತಂತ್ರಜ್ಞಾನದ ಕೊಡುಗೆಗಳಲ್ಲೊಂದಾದ ಮೊಬೈಲ್ ಫೋನುಗಳು ವಿದ್ಯಾರ್ಥಿಗಳ ಕೈಯಲ್ಲಿದ್ದರೆ ಅವು ಅತ್ಯಂತ ಅಪಾಯಕಾರಿ; ಬಾಂಬುಗಳಿದ್ದಂತೆ ಎಂದು ಮದ್ರಾಸ್ ಹೈಕೋರ್ಟ್ ಗುರುವಾರ ಎಚ್ಚರಿಸಿದೆ.

ಮೊಬೈಲುಗಳು ಯುವಜನತೆಗೆ ಅಪಾಯದ ಹೆಬ್ಬಾಗಿಲು ಆಗಿದೆ. ಆದರೂ ಅಸಹಾಯಕ ಪೋಷಕರು ತಮ್ಮ ಮಕ್ಕಳಿಗೆ ಮಹಾಮಾರಿ ಮೊಬೈಲುಗಳನ್ನು ಕೊಡಿಸುತ್ತಿದ್ದಾರೆ' ಎಂದು ಕೋರ್ಟ್ ವಿಷಾದ ಮಿಶ್ರಿತ ಎಚ್ಚರಿಕೆ ನೀಡಿದೆ.

Vel Tech group institute ಎಂಬ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ಹಾಸ್ಟೆಲ್ ವಾರ್ಡನ್ ಗೆ ಜಾಮೀನು ನೀಡಿದ ನ್ಯಾಯಮೂರ್ತಿ ಪಿ ದೇವದಾಸ್ ಅವರು ಈ ಮಾತುಗಳನ್ನು ಹೇಳಿದ್ದಾರೆ. ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ದಿವ್ಯಾ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಪ್ರಕರಣದಲ್ಲಿ ಹಾಸ್ಟೆಲ್ ವಾರ್ಡನ್ ಕೌಶಿಕಾ ಅವರನ್ನು ಕಳೆದ ಮಾರ್ಚ್ 20ರಂದು ಬಂಧಿಸಲಾಗಿತ್ತು.

ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಸ್ವಾಗತಾರ್ಹ- ಜಸ್ಟೀಸ್ ದೇವದಾಸ್:

Mobile phones are like bombs in the hands of students says Madras HC
ವಿದ್ಯಾರ್ಥಿನಿ ದಿವ್ಯಾ ಕೈಯಲ್ಲಿ ಮೊಬೈಲ್ ಇತ್ತೆಂದು ವಾರ್ಡನ್ ಕೌಶಿಕಾ ಅವರು ದಿವ್ಯಾಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದಾದ ಮಾರನೆಯ ದಿನವೇ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಸದರಿ ಕಾಲೇಜಿನಲ್ಲಿ ನಿರ್ದಿಷ್ಟ ಅವಧಿಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ.

ವಿದ್ಯಾರ್ಥಿಗಳು ದಿನದಲ್ಲಿ ಹೆಚ್ಚಿನ ಸಮಯವನ್ನು ಮೊಬೈಲ್ ಜತೆ ಕಳೆಯುತ್ತಿದ್ದಾರೆ. ಇದರಿಂದ ಅವರು ತಮ್ಮ ಅಮೂಲ್ಯ ಸಮಯವನ್ನು ಕಾಲಹರಣ ಮಾಡುತ್ತಿದ್ದಾರೆ. ಇನ್ನು ಮಕ್ಕಳು ಮೊಬೈಲಿಗಾಗಿ ರಂಪಾಟ ಮಾಡುತ್ತಾರೆ ಎಂದು ಪೋಷಕರೂ ಮಕ್ಕಳ ಮನಸ್ಸಿಗೆ ಮಣಿದು, ಕೊಡಿಸಿಬಿಡುತ್ತಾರೆ. ಇದು ಅನಾಹುತಗಳನ್ನು ಸೃಷ್ಟಿಸುತ್ತಿದೆ' ಎಂದು ಅವರು ನ್ಯಾಯಮೂರ್ತಿ ಪಿ ದೇವದಾಸ್ ಅವರು ವಿಷಾದಿಸಿದ್ದಾರೆ.

ವಿದ್ಯಾರ್ಥಿಗಳು ತುಂಬಾ ಸೂಕ್ಷ್ಮಮತಿಗಳಾಗುತ್ತಿದ್ದಾರೆ. ಅವರನ್ನು ಎಚ್ಚರಿಕೆ ಮತ್ತು ಜಾಣ್ಮೆಯಿಂದ ನಿಭಾಯಿಸಬೇಕು. ವಾರ್ಡನ್ ಆದವರು ಮಕ್ಕಳ ಪಾಲಿಗೆ ತಾಯಿ, ಸೋದರಿ ಮತ್ತು ಪಾಲಕಿಯೂ ಆಗಿರುತ್ತಾಳೆ. ಈ ಸೂಕ್ಷ್ಮವನ್ನು ಅರಿತಿರಬೇಕು ಎಂದು ಜಾಮೀನು ನೀಡುವ ಮುನ್ನ ವಾರ್ಡನ್ ಕೌಶಿಕಾಗೆ ನ್ಯಾಯಮೂರ್ತಿಗಳು ತಿಳಿಯಹೇಳಿದ್ದಾರೆ.

English summary
Mobile phones are like bombs in the hands of students says Madras HC. While granting bail to a female warden of a private engineering college's hostel, Justice P Devadass said,"They are doors of danger for youth and parents still buy them for their wards because they are helpless." On 20th March, 2014, Kousika, the hostel warden was arrested for 'inciting' Divya, a first year student for a suicide. The charge against her is that she had yelled at Divya on 18th March 2014, for being in possession of a cellphone. The very next day, Divya had taken the extreme decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X