ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳಯಾನ: 300 ದಿನ ಯಶಸ್ವಿ, 23 ದಿನ ಬಾಕಿ

By Mahesh
|
Google Oneindia Kannada News

ಚೆನ್ನೈ, ಸೆ.3: ಮಂಗಳ ಗ್ರಹದೆಡೆಗೆ ಸಾಗುತ್ತಿರುವ ಮಂಗಳಯಾನ (ಮಾರ್ಸ್‌ ಅರ್ಬಿಟರ್ ಮಿಷನ್) ಬಾಹ್ಯಾಕಾಶ ನೌಕೆಯು ಬಾಹ್ಯಾಕಾಶದಲ್ಲಿ 300 ದಿನಗಳನ್ನು ಪೂರೈಸಿದ್ದು, ಇನ್ನು ಕೇವಲ 23 ದಿನಗಳಲ್ಲಿ ಮಂಗಳ ಗ್ರಹದ ಕಕ್ಷೆಗೆ ತಲುಪುವ ನಿರೀಕ್ಷೆ ಇದೆ. ಮಂಗಳನ ಅಂಗಳದಲ್ಲಿ ಭಾರತೀಯ ಆಕಾಶಕಾಯವೊಂದು ಸ್ಪರ್ಶಿಸುವ ಕ್ಷಣಕ್ಕಾಗಿ ವಿಜ್ಞಾನಿಗಳು ಕಾತುರದಿಂದ ಕಾದಿದ್ದಾರೆ.

‘ಮಂಗಳಯಾನವು ಬಾಹ್ಯಾಕಾಶದಲ್ಲಿ 300 ದಿನಗಳನ್ನು ಪೂರೈಸಿದೆ. ಇನ್ನು ಕೇವಲ 23 ದಿನಗಳಲ್ಲಿ ಮಂಗಳ ಗ್ರಹವನ್ನು ತಲುಪಲಿದೆ' ಎಂದು ತನ್ನ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಬಾಹ್ಯಾಕಾಶ ಸಂಸ್ಥೆ ಇಸ್ರೋ ಪ್ರಕಟಿಸಿದೆ.

Mars Orbiter Mission completes 300 days in space! Awaiting the big landing?

ಮಂಗಳ ಗ್ರಹದೆಡೆಗಿನ ತನ್ನ ಯಾನದಲ್ಲಿ ಬಾಹ್ಯಾಕಾಶ ನೌಕೆಯು 622 ದಶಲಕ್ಷ ಕಿ.ಮೀ. ಪ್ರಯಾಣ ಮಾಡಿದೆ. ಬಾಹ್ಯಾಕಾಶ ನೌಕೆಯು ಸೆಕೆಂಡಿಗೆ 22.33 ಕಿ.ಮೀ. ವೇಗದಲ್ಲಿ ಪ್ರಯಾಣ ಮಾಡುತ್ತಿದೆ ಎಂದು ಇಸ್ರೋ ತಿಳಿಸಿದೆ.

ಸುಮಾರು 450 ಕೋಟಿ ರೂಪಾಯಿ ವೆಚ್ಚದ ಮಂಗಳಯಾನ ಯೋಜನೆಯ ಅಡಿಯಲ್ಲಿ 2013ರ ನವೆಂಬರ್ 5ರಂದು ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಈ ಮಹತ್ವದ ನೌಕೆಯನ್ನು ಉಡಾವಣೆ ಮಾಡಲಾಗಿತ್ತು.

2014ರ ಸೆಪ್ಟಂಬರ್ 24ರಂದು ಬಾಹ್ಯಾಕಾಶ ನೌಕೆಯು ಮಂಗಳ ಗ್ರಹದ ಕಕ್ಷೆಯನ್ನು ತಲುಪಲಿದೆ. ಆ ನಂತರ 160 ದಿನಗಳ ಕಾಲ ಉಪಗ್ರಹ ಮಂಗಳನ ಸುತ್ತ ಸುತ್ತಲಿದೆ. ಬಾಹ್ಯಾಕಾಶ ನೌಕೆಯು ತನ್ನ ಪ್ರಯಾಣದ ಶೇಕಡ 90ರಷ್ಟು ಭಾಗವನ್ನು ಪೂರ್ಣಗೊಳಿಸಿದೆ. ಸೆಪ್ಟಂಬರ್ 24ರಂದು ಬಾಹ್ಯಾಕಾಶ ನೌಕೆಯ ಲಿಕ್ವಿಡ್ ಇಂಜಿನನ್ನು ಮತ್ತೆ ಚಾಲನೆ ಮಾಡುವ ಸವಾಲಿನ ಕೆಲಸವನ್ನು ಇಸ್ರೋ ವಿಜ್ಞಾನಿಗಳು ಕೈಗೊಳ್ಳುತ್ತಾರೆ. ಕಳೆದ 10 ತಿಂಗಳಿಂದ ಈ ಇಂಜಿನ್ ಚಾಲನೆಯಲ್ಲಿರಲಿಲ್ಲ.

ಮಂಗಳಯಾನದ ಬಗ್ಗೆ ಒಂದಿಷ್ಟು ಮಾಹಿತಿ

ಮಂಗಳಯಾನದ ಬಗ್ಗೆ ಒಂದಿಷ್ಟು ಮಾಹಿತಿ

* ಸೌರಮಂಡಲದ ಗ್ರಹವೊಂದಕ್ಕೆ ಭಾರತ ಕಳುಹಿಸುತ್ತಿರುವ ಮೊದಲ ಕೃತಕ ಉಪಗ್ರಹ * ಇದುವರೆಗೆ ವಿಶ್ವಾದ್ಯಂತ ಮಂಗಳಯಾನಕ್ಕೆ ವಿವಿಧ ದೇಶಗಳು 51 ಬಾರಿ ಯತ್ನಿಸಿದ್ದು ಈ ಪೈಕಿ 21 ಯತ್ನ ಮಾತ್ರ ಸಫಲ
* ಉಪಗ್ರಹದ ಮೇಲೆ ಬೆಂಗಳೂರಿನ ಬ್ಯಾಲಾಳು, ಅಂಡಮಾನ್-ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ , ಮಲೇಷ್ಯಾದ ಬ್ರೂನೈ ಇಸ್ರೋ ಕೇಂದ್ರ, ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಭಾರತದ ಎರಡು ಹಡಗುಗಳು ಯಮುನಾ ಹಾಗೂ ನಳಂದ ನಿಗಾ ಇಡಲಿವೆ.
* ಯುರೋಪಿಯನ್ ಸ್ಪೇಸ್ ಏಜೆನ್ಸಿ(ESA), ನಾಸಾ ಹಾಗೂ ರಷ್ಯಾದ ಬಾಹ್ಯಾಕಾಶ ಸಂಸ್ಥೆ ಮಾತ್ರ ಮಂಗಳಯಾನ ಯೋಜನೆಯಲ್ಲಿ ಯಶ ಕಂಡಿವೆ.

ಉಪಗ್ರಹ ಭೂಮಿಯ ಆಚೆ 372 ಕಿ.ಮೀ.

ಉಪಗ್ರಹ ಭೂಮಿಯ ಆಚೆ 372 ಕಿ.ಮೀ.

ಬಾಹ್ಯಾಕಾಶ ನೌಕೆ ಮೂಲಕ ಹಾರಿಬಿಡುವ ಉಪಗ್ರಹ ಭೂಮಿಯ ಆಚೆ 372 ಕಿ.ಮೀ. ದೂರದಲ್ಲಿ ಸಂಚರಿಸುತ್ತ ಮಂಗಳನತ್ತ ಸಾಗಲಿದೆ. ಮಂಗಳನ ಕಕ್ಷೆಯಲ್ಲಿ 272 ಕಿ.ಮೀ.ನಿಂದ 80 ಸಾವಿರ ಕಿ.ಮೀ. ಅಂತರದಲ್ಲಿ ಪರಿಭ್ರಮಿಸುವ ಉಪಗ್ರಹ ತನ್ನ ಮೊದಲ ಪೂರ್ಣ ಪ್ರಮಾಣದ ಚಿತ್ರವನ್ನು 9 ತಿಂಗಳ ಬಳಿಕ(ಸೆ.21, 2014) ಭೂಮಿಗೆ ರವಾನಿಸಲಿದೆ.

ಮೀಥೇನ್ ಇರುವಿಕೆ ಪತ್ತೆಗೆ ಸಾಧಕಗಳು

ಮೀಥೇನ್ ಇರುವಿಕೆ ಪತ್ತೆಗೆ ಸಾಧಕಗಳು

* ಈ ಯೋಜನೆಯ ಒಟ್ಟು ವೆಚ್ಚ 450 ಕೋಟಿ ರೂಪಾಯಿ. ಈ ಪೈಕಿ 150 ಕೋಟಿ ರೂ. ಬಾಹ್ಯಾಕಾಶ ನೌಕೆ ನಿರ್ಮಾಣಕ್ಕೆ, 110 ಕೋಟಿ ರೂ. ಉಡಾವಣಾ ವಾಹಕಕ್ಕೆ ಬಳಸಿಕೊಳ್ಳಲಾಗಿದೆ.
* ಮೀಥೇನ್ ಇರುವಿಕೆ ಪತ್ತೆಗೆ ಎಂಎಸ್‌ಎಂ ಹೆಸರಿನ ವೈಜ್ಞಾನಿಕ ಉಪಕರಣವನ್ನು ಉಪಗ್ರಹದಲ್ಲಿದೆ.
* ಮಂಗಳದ ಮೇಲ್ಮೈ ರಚನೆ ಸೆರೆ ಹಿಡಿಯಲು ಕ್ಯಾಮೆರಾ(ಎಂಸಿಸಿ), ಟಿಐಎಸ್, ಎಲ್ ಎಪಿ ಹಾಗೂ ಎಂಇಎನ್ ಸಿಎ ಉಪಕರಣವಿದೆ.
* ಉಪಗ್ರಹದ ತೂಕ 1,340 ಕೆ.ಜಿ. ಇದು ಮಂಗಳನ ಕಕ್ಷೆಗೆ ಸೇರಿದಾಗ 582 ಕೆ.ಜಿ.ಗೆ ಕುಗ್ಗಲಿದೆ.

ಬಾನಬಂಡಿಯಲ್ಲಿನ ಸಲಕರಣೆಗಳು ಏನು ಮಾಡಲಿವೆ

ಬಾನಬಂಡಿಯಲ್ಲಿನ ಸಲಕರಣೆಗಳು ಏನು ಮಾಡಲಿವೆ

ಬಾನಬಂಡಿಯನ್ನು ನಡೆಸಲು ಬೇಕಾದ ಕಸುವು ನೀಡುವ ನೇಸರ ಪಟ್ಟಿಗಳು, ಉರುವಲು ತೊಟ್ಟಿ ಮತ್ತು ಇಸ್ರೋ ನೆಲೆಯೊಂದಿಗೆ ಒಡನಾಡಲು ಬೇಕಾದ ನಿಲುಕುಗಳ ಜತೆಗೆ ಬಾನಬಂಡಿಯಲ್ಲಿ ಕೆಳಗಿನ ಸಲಕರಣೆಗಳನ್ನು ಅಳವಡಿಸಲಾಗಿದೆ. ಅಚ್ಚಕನ್ನಡದ ಆಡುಭಾಷೆಯಲ್ಲ್ಲಿ ವಿವರಣೆ ಇಲ್ಲಿದೆ ಓದಿ

English summary
The Mars Orbiter Mission (Mangalyaan), on its way to the red planet, has completed 300 days of its journey in space and is just 23 days away from reaching its intended orbit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X