ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭಕೋಣಂ ಶಾಲಾ ಅಗ್ನಿ ದುರಂತ: 10 ಜನ ಅಪರಾಧಿಗಳು

By Mahesh
|
Google Oneindia Kannada News

ತಂಜಾವೂರು, ಜು.30: 2004ರಲ್ಲಿ ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದ 94 ಮಕ್ಕಳು ಸುಟ್ಟು ಕರಕಲಾದ ತಮಿಳುನಾಡಿನ ಕುಂಭಕೋಣಂ ಶಾಲೆಯ ಅಗ್ನಿ ದುರಂತ ಪ್ರಕರಣ ಸಂಬಂಧ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಅಪರಾಧಿಗಳು ಎಂದು ನ್ಯಾಯಾಲಯ ಹೆಸರಿಸಿದೆ.ಅಪರಾಧಿಗಳ ಶಿಕ್ಷೆ ಪ್ರಮಾಣ ಗುರುವಾರ ಪ್ರಕಟಗೊಳ್ಳಲಿದೆ.

ದೇಶವನ್ನು ಬೆಚ್ಚಿ ಬೀಳಿಸಿದ್ದ ಈ ದಾರುಣ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಮಾಲೀಕ ಪಿ ಪಳನಿಸ್ವಾಮಿ(84) ಹಾಗೂ ಆತನ ಪತ್ನಿ ಸರಸ್ವತಿ, ಮುಖ್ಯೋಪಾಧ್ಯಾಯಿನಿ ಶಾಂತಲಕ್ಷ್ಮಿ(ಶಾಲಾ ಸ್ಥಾಪಕರ ದತ್ತು ಪುತ್ರಿ), ಶಿಕ್ಷಣ ಇಲಾಖೆ ಅಧಿಕಾರಿ ದೊರೈರಾಜ್, ಮಧ್ಯಾಹ್ನದ ಊಟದ ಉಸ್ತುವಾರಿ ವಿಜಯಲಕ್ಷ್ಮಿ, ಅಡುಗೆ ಮಾಡುತ್ತಿದ್ದ ವಾಸಂತಿ, ನಗರ ಪಾಲಿಕೆ ಇಂಜಿನಿಯರ್ ಜಯಚಂದ್ರನ್ ಸೇರಿದಂತೆ 10 ಜನರನ್ನು ಅಪರಾಧಿಗಳು ಎಂದು ನ್ಯಾಯಾಲಯ ಘೋಷಿಸಿದೆ. ಆರೋಪಿಗಳ ಪೈಕಿ 11 ಜನರನ್ನು ಆರೋಪಮುಕ್ತಗೊಳಿಸಲಾಗಿದೆ. ಈ ಪೈಕಿ ಮೂವರು ಶಿಕ್ಷಕರೂ ಇದ್ದಾರೆ.

Kumbakonam school fire tragedy: 10 convicted including owner, head mistress and principal

ಪ್ರಕರಣದಲ್ಲಿ 21 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು, 5 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ಜು.17ಕ್ಕೆ ಮುಕ್ತಾಯಗೊಂಡಿದ್ದು, ತೀರ್ಪನ್ನು ನ್ಯಾಯಾಧೀಶರು ಜು.30ಕ್ಕೆ ಕಾದಿರಿಸಿದ್ದರು.

ಅಡುಗೆ ಕೋಣೆಯಲ್ಲಿ ಹೊತ್ತಿಕೊಂಡಿದ್ದ ಬೆಂಕಿಯಿಂದಾಗಿ ಶಾಲೆಯ ಮೊದಲ ಮಹಡಿ ಬೆಂಕಿಗಾಹುತಿಯಾಗಿದ್ದು, ಮಕ್ಕಳು ದಾರುಣವಾಗಿ ಮೃತಪಟ್ಟಿದ್ದರು. ಕುಂಭಕೋಣಂನ ಕಾಸಿರಾಮನ್‌ ರಸ್ತೆಯಲ್ಲಿ ಶ್ರೀಕೃಷ್ಣ ಅನುದಾನಿತ ಖಾಸಗಿ ಶಾಲೆ, ಸರಸ್ವತಿ ನರ್ಸರಿ ಮತ್ತು ಶ್ರೀಕೃಷ್ಣ ಪ್ರಾಥಮಿಕ ಮತ್ತು ಬಾಲಕಿಯರ ಪ್ರೌಢಶಾಲೆ ಒಂದಕ್ಕೊಂದು ತಾಗಿಕೊಂಡಂತಿದ್ದು, ಯಾವುದೇ ಸುರಕ್ಷತೆ ಇರಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿತ್ತು.

English summary
A Thanjavur district court on Wednesday delivered its verdict in the Kumbakonam school fire tragedy case, which claimed the lives of 94 school children and injured 18 others nearly a decade ago. The owner of a school and its principal are among 10 people found guilty
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X