ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಮಾನವತಾವಾದಿ ಪ್ರಶಸ್ತಿ ಹೊಸ್ತಿಲಲ್ಲಿ ಇಂಡಿಯನ್

By Mahesh
|
Google Oneindia Kannada News

ವಾಷಿಂಗ್ಟನ್, ಜು.28: ಮಾನವ ಹಿತಕ್ಕಾಗಿ ದುಡಿದವರಿಗೆ ನೀಡಲಾಗುವ ಹುನ್‌ಮಾನಿಟೇರಿಯನ್ ಪ್ರಶಸ್ತಿಗಾಗಿ ನಡೆದ ಆಯ್ಕೆಯಲ್ಲಿ ಚೆನ್ನೈ ಮೂಲದ ಒಬ್ಬ ಭಾರತೀಯರೊಬ್ಬರು ಆಯ್ಕೆಯಾಗಿದ್ದಾರೆ.

ಒಂದು ಮಿಲಿಯನ್ ಡಾಲರ್ ಮೊತ್ತದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಈಶಾನ್ಯ ಅಮೆರಿಕ ಗೊನ್ಜಾಗಾ ವಿಶ್ವವಿದ್ಯಾನಿಲಯ ಬರುವ ಅಕ್ಟೋಬರ್‌ನಲ್ಲಿ ನೀಡಲಿದೆ ಎಂದು ವಿವಿಯ ಮೂಲಗಳು ತಿಳಿಸಿವೆ. ಯಾವುದೇ ವ್ಯಕ್ತಿ ಸಾಮಾಜಿಕವಾಗಿ ಮಾಡುವ ಮಾನವಹಿತದ ಸೇವೆಗಾಗಿ ಓಪನ್ ಪ್ರೈಜ್ ಫೌಂಡೇಷನ್ ಪರವಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

Indian among the pre-finalists to receive humanitarian award

ಕಷ್ಟಕರ ಸನ್ನಿವೇಶದಲ್ಲಿ ಸ್ಥಳಗಳಲ್ಲಿ ಮಾನವ ಸೇವೆ ಮಾಡುವವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರೊ.ಮೈಕೆಲ್ ಹರ್‍ಜೋಗ್ ಹೇಳಿದ್ದಾರ. ಗೊಲ್ಲಪಲ್ಲಿ ಇಸ್ರೇಲ್ ಎಂಬ ಭಾರತೀಯ ಬಾಪ್ಟಿಸ್ಟ್ ಪಾದ್ರಿ ತಮಿಳುನಾಡಿನಲ್ಲಿ ಜನೋದಯಂ ಸೋಷಿಯಲ್ ಎಜುಕೇಷನ್ ಸೆಂಟರ್ ಸಂಸ್ಥೆ ಮೂಲಕ ದೀನ ದಲಿತರ ಸೇವೆ ಮಾಡುತ್ತಿರುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದು 11ನೇ ವರ್ಷದ ವಾರ್ಷಿಕ ಪ್ರಶಸ್ತಿಯಾಗಿದ್ದು, ಓಪಸ್ ಪ್ರೈಜ್ ಫೌಂಡೇಷನ್ ವರ್ಷದಿಂದ ವರ್ಷಕ್ಕೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ರೀತಿ ಪ್ರಶಸ್ತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಬಹುದಾಗಿದೆ.ಗೊನ್ಜಾಗಾದಲ್ಲಿ ನಾವು ಸಾಮಾಜಿಕ ನ್ಯಾಯ ಹಾಗೂ ಸೇವೆಯ ಬಗ್ಗೆ ಬರೀ ಉಪನ್ಯಾಸವನ್ನು ನೀಡುವುದಿಲ್ಲ. ಬದಲಿಗೆ ಒಂದು ಸರ್ಕಾರೇತರ ಸಂಸ್ಥೆ ಸ್ಥಾಪಿಸಿ ಅದನ್ನು ಕಳಂಕವಿಲ್ಲದೆ ಮುನ್ನಡೆಸುವುದು ಎಷ್ಟು ಕಷ್ಟ ಎಂಬುದರ ಅರಿವು ಮೂಡಿಸುತ್ತೇವೆ ಎಂದು ಸಂಸ್ಥೆಯ ನಿರ್ದೇಶಕ ಜೆರಾಲ್ಡ್ ಹೇಳಿದ್ದಾರೆ.

English summary
An Indian humanist is among the pre-finalists of a humanitarian award worth USD 1 million to be handed over by Gonzaga University of northwestern United States in October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X