ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಂಡೊಲಿನ್ ಶ್ರೀನಿವಾಸ್ ಗೆ ಸಂಗೀತ ನಮನ

By Mahesh
|
Google Oneindia Kannada News

ಚೆನೈ, ಸೆ.19: ಖ್ಯಾತ ಮ್ಯಾಂಡೊಲಿನ್ ವಾದಕ ಯು.ಶ್ರೀನಿವಾಸ್ ಅವರು ಶುಕ್ರವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮ್ಯಾಂಡೋಲಿನ್ ಮಾಂತ್ರಿಕ ಶ್ರೀನಿವಾಸ್ ಅವರ ಹಠಾತ್ ನಿಧನಕ್ಕೆ ಅಭಿಮಾನಿಗಳು ಸಂಗೀತಜ್ಞರು ಅಪಾರ ಶೋಕ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಪಲಕೋಳ್ ನಲ್ಲಿ 1969 ಫೆ.28ರಂದು ಜನಿಸಿದ ಶ್ರೀನಿವಾಸ್ ಅವರು 6ನೇ ವಯಸ್ಸಿನಲ್ಲೇ ತಂದೆ ಸತ್ಯನಾರಾಯಣ ಅವರ ಮ್ಯಾಂಡೊಲಿನ್ ಬಾರಿಸಲು ಆರಂಭಿಸಿದರು. [ಮ್ಯಾಂಡೊಲಿನ್ ಮಾಂತ್ರಿಕನ ಅಗಲಿಕೆಗೆ ಪ್ರಧಾನಿ ಕಂಬನಿ]

ಅಪ್ಪನಿಂದ ಸಂಗೀತದ ಮೊದಲ ಪಾಠ ಕಲಿತ ಬಾಲಕ ಶ್ರೀನಿವಾಸ್ ಅವರಿಗೆ ರುದ್ರರಾಜು ಸುಬ್ಬರಾಜು ಅವರು ತಮ್ಮ ಗಾಯನದ ಮೂಲಕ ಮ್ಯಾಂಡೊಲಿನ್ ವಾದಕನ ಶ್ರುತಿ ಲಯ ಶುದ್ಧಿ ಮಾಡಿದ್ದು ವಿಶೇಷವಾಗಿತ್ತು. ಸುಬ್ಬರಾಜು ಅವರಿಗೆ ಮ್ಯಾಂಡೋಲಿನ್ ನುಡಿಸಲು ಬರುತ್ತಿರಲಿಲ್ಲವಾದರೂ ಶ್ರೀನಿವಾಸ್ ಅವರ ಮ್ಯಾಂಡೊಲಿನ್ ಕಲಿಕೆಗೆ ಅವರ ಬೋಧನೆ ಅಡಿಪಾಯವಾಯಿತು.

1978ರಲ್ಲಿ ಮೊದಲಬಾರಿಗೆ ಸಾರ್ವಜನಿಕವಾಗಿ ತ್ಯಾಗರಾಜ ಆರಾಧನೆ ಮಹೋತ್ಸವದಲ್ಲಿ ಮ್ಯಾಂಡೊಲಿನ್ವಾದನ ಮಾಡಿದ ಶ್ರೀನಿವಾಸ್ ಅವರು ಹಿಂತಿರುಗಿ ನೋಡಲಿಲ್ಲ. ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ, ನೈಋಉತ್ಯ ಏಷ್ಯಾ, ಅಮೆರಿಕ, ಕೆನಡಾ ಸೇರಿದಂತೆ ಹಲವಾರು ದೇಶಗಳಲ್ಲಿ ಸಂಗೀತ ಕಚೇರಿ ನೀಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀನಿವಾಸ್ ಕೀರ್ತಿ ಪತಾಕೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀನಿವಾಸ್ ಕೀರ್ತಿ ಪತಾಕೆ

ಉಪ್ಪಲಪು ಶ್ರೀನಿವಾಸ್ ಅವರು ತಮ್ಮ ಎಲೆಕ್ಟ್ರಿಕ್ ಮ್ಯಾಂಡೋಲಿನ್ ವಾದ್ಯದ ಮೂಲಕ ಜಾನ್ ಮೆಕ್ ಲಾಫ್ಲಿನ್, ಮೈಕಲ್ ನಿಮನ್, ಮೈಕಲ್ ಬ್ರೂಕ್ ಅವರ ಜೊತೆಗೂಡಿ ಅನೇಕ ಕಚೇರಿಗಳನ್ನು ನೀಡಿದ್ದಾರೆ. ಬಾರ್ಸಿಲೋನದಲ್ಲಿ 1992ರಲ್ಲಿ ಒಲಿಂಪಿಕ್ಸ್ ಕಲಾ ಉತ್ಸವದಲ್ಲಿ ಮೆಕ್ಸಿಕೋದ ಕಲಾ ಉತ್ಸವದಲ್ಲಿ ಮ್ಯಾಂಡೋಲಿನ್ ವಾದನ ಮಾಡಿದ ಸಾಧನೆ ಮಾಡಿದರು.

ಸತ್ಯ ಸಾಯಿಬಾಬಾ ಅವರ ಪರಮಭಕ್ತ ಶ್ರೀನಿವಾಸ್

ಸತ್ಯ ಸಾಯಿಬಾಬಾ ಅವರ ಪರಮಭಕ್ತ ಶ್ರೀನಿವಾಸ್

ಸತ್ಯ ಸಾಯಿಬಾಬಾ ಅವರ ಪರಮಭಕ್ತರಾಗಿದ್ದ ಶ್ರೀನಿವಾಸ್ ಅವರಿಗೆ 1998ರಲ್ಲಿ ಪದ್ಮಶ್ರೀ, 2010ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ಸಂಗೀತ ರತ್ನ, ಸನಾತನ ಸಂಗೀತ ಪುರಸ್ಕಾರ, ಮೈಸೂರು ಟಿ ಚೌಡಯ್ಯ ಪ್ರಶಸ್ತಿ, ರಾಜೀವ್ ಗಾಂಧಿ ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ, ಕಾಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಗೌರವಕ್ಕೆ ಪಾತ್ರರಾಗಿದ್ದರು.

ದಾಂಪತ್ಯ ಗೀತೆ ಸರಾಗವಾಗಿ ಸಾಗಲಿಲ್ಲ

1994ರ ನವೆಂಬರ್ 19ರಂದು ಐಎಎಸ್ ಅಧಿಕಾರಿಯೊಬ್ಬರ ಮಗಳು ಶ್ರೀ ಅವರನ್ನು ವಿವಾಹವಾಗಿದ್ದರು. ಅದರೆ, ದಾಂಪತ್ಯ ಗೀತೆ ಸರಾಗವಾಗಿ ಸಾಗಲಿಲ್ಲ. ಕಳೆದ 16 ವರ್ಷಗಳಿಂದ ಶ್ರೀನಿವಾಸ್ ಅವರನ್ನು ತೊರೆದು ಜೀವಿಸುತ್ತಿದ್ದಾರೆ.

ಇವರ ಜೊತೆಗೆ ಅಪ್ಪ ಹಾಗೂ ಸೋದರನನ್ನು ಶ್ರೀನಿವಾಸ್ ಅಗಲಿದ್ದಾರೆ. ಶ್ರೀನಿವಾಸ್ ಅವರ ತಂದೆ ಹಾಗೂ ಸೋದರ ಯು. ರಾಜೇಶ್ ಅವರು ಕೂಡಾ ಮ್ಯಾಂಡೊಲಿನ್ ವಾದಕರಾಗಿದ್ದಾರೆ.

ಶ್ರೀನಿವಾಸ್ ಅವರು ಬಾಲಕರಾಗಿದ್ದಾಗಲೇ

ಮ್ಯಾಂಡೋಲಿನ್ ಶ್ರೀನಿವಾಸ್ ಅವರು ಬಾಲಕರಾಗಿದ್ದಾಗಲೇ ಸಂಗೀತ ಜಗತ್ತಿನಲ್ಲಿ ಸಂಚಲನ ಮೂಡಿಸಿದ ಅಪರೂಪದ ವಿಡಿಯೋ ಇಲ್ಲಿದೆ

 ಅಪರೂಪದ ಮುದ್ರಿಕೆಗಳ ಸಂಗ್ರಹ ವಿಡಿಯೋ

ಅಪರೂಪದ ಮುದ್ರಿಕೆಗಳ ಸಂಗ್ರಹ ವಿಡಿಯೋ

ಮ್ಯಾಂಡೊಲಿನ್ ಶ್ರೀನಿವಾಸ್ ಅವರ ಅಪರೂಪದ ಮುದ್ರಿಕೆಗಳ ಸಂಗ್ರಹ ವಿಡಿಯೋಗಳು ಇಲ್ಲಿವೆ. ಸಂಗೀತಾಸಕ್ತರು ಯೂಟ್ಯೂಬ್ ಲಿಂಕ್ ಕ್ಲಿಕ್ಕಿಸಿ

English summary
Rest In Peace : Renowned Mandolin Player, legendary Uppalapu Shrinivas passes away. He was 45. U Srinivas breathed his last at Apollo Hospitals, Chennai on Friday morning. A Musical tribute to Child Prodigy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X