ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲೇ ನಾರ್ಮಲ್ ಹೆರಿಗೆಯಾಯ್ತು!

By Srinath
|
Google Oneindia Kannada News

Andhra Pradesh Woman Radha gives birth on flight from Kuwait
ಚೆನ್ನೈ, ಜ.30: ವಿದೇಶದಲ್ಲಿದ್ದ ಆ ಮಹಿಳೆಗೆ ತನ್ನ ಹುಟ್ಟೂರಿನಲ್ಲೇ ಮಗುವಿಗೆ ಜನ್ಮ ನೀಡಬೇಕು ಎಂಬ ಬಯಕೆಯಿತ್ತು. ಆದರೆ ಆ ಬ್ರಹ್ಮ ಮಾಡಿದ್ದೇ ಬೇರೆ. ಆಕೆ ವಿದೇಶದಿಂದ ಬರುತ್ತಿರುವಾಗ ವಿಮಾನದಲ್ಲಿಯೇ ತನ್ನ ಮಗುವಿಗೆ ಜನ್ಮ ನೀಡಿದ್ದಾರೆ. ಅದೂ ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ನಾರ್ಮಲ್ ಡೆಲಿವರಿ ಮೂಲಕ! ಹೀಗೆ ಸುಸೂತ್ರ ಹೆರಿಗೆಗೆ ಸಹಾಯ ಹಸ್ತ ನೀಡಿದವರು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ವೈದ್ಯರು. ಮಗು-ಬಾಣಂತಿ ಆರೋಗ್ಯವಾಗಿದ್ದಾರೆ.

ಏನಾಯಿತೆಂದರೆ ಆಂಧ್ರ ಪ್ರದೇಶದ ರಾಧಾ ಎಂಬ 37 ವರ್ಷದ ಮಹಿಳೆ ನಿನ್ನೆ ಬುಧವಾರ ಬೆಳಗಿನ ಜಾವ ಕುವೈಟ್ ಏರ್ ಲೈನ್ಸ್ ವಿಮಾನದಲ್ಲಿ ಚೆನ್ನೈಗೆ ಬಂದಿಳಿದಿದ್ದಾರೆ. ಆದರೆ ಅದಕ್ಕೆ 15 ನಿಮಿಷಗಳ ಮುನ್ನ (ಬೆಳಗ್ಗೆ 4.16ರಲ್ಲಿ) ವಿಮಾನ ಆಗಸದಲ್ಲಿ ತೇಲುತ್ತಿದ್ದಾಗ ಪ್ರಸವ ವೇದನೆ ತಾಳದೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಎಂಟೂವರೆ ತಿಂಗಳ ತುಂಬು ಗರ್ಭಿಣಿ ರಾಧಾ ತನ್ನ ಮಗುವಿಗೆ ಹುಟ್ಟೂರಿನಲ್ಲಿ ಜನ್ಮ ನೀಡಬೇಕೆಂಬ ಧಾವಂತದಲ್ಲಿ ವಿಮಾನವೇರಿದ್ದರು. ಸಾಮಾನ್ಯವಾಗಿ ವಿಮಾನ ಯಾನ ಕಂಪನಿಗಳು ಗರ್ಭಿಣಿಯರಿಗೆ ವಿಮಾನವೇರಲು ಬಿಡುವುದಿಲ್ಲ. ಆದರೆ ಗರ್ಭಿಣಿ ಮಹಿಳೆ ಒತ್ತಾಯ ಮಾಡಿದರೆ ವಿಮಾನ ಯಾನಕ್ಕೆ ಅನುಮತಿ ನೀಡಲಾಗುತ್ತದೆ.

ರಾಧಾ, ಆಂಧ್ರದ ಕಡಪಾ ಜಿಲ್ಲೆಯ ಪುಲಪತರು ರಾಜಂಪೇಟ ಮೂಲದ ಸುಬ್ರಮಣಿ ಜತೆ ವಿವಾಹವಾಗಿದ್ದಾರೆ. ರಾಧಾ-ಸುಬ್ರಮಣಿ ದಂಪತಿ ಉದ್ಯೋಗವನ್ನರಸಿ ಒಂದು ವರ್ಷದ ಹಿಂದೆ ಕುವೈಟ್ ಗೆ ತೆರಳಿದ್ದರು. ಆದರೆ ಅಲ್ಲಿ ರಾಧಾಗೆ ಮಾತ್ರ ಉದ್ಯೋಗ ಸಿಕ್ಕಿತ್ತು. ಒಳ್ಳೆಯ ಉದ್ಯೋಗ ಸಿಗಲಿಲ್ಲವೆಂದು ಸುಬ್ರಮಣಿ ಇತ್ತೀಚೆಗೆ ಭಾರತಕ್ಕೆ ಮರಳಿಬಂದಿದ್ದರು.

English summary
Andhra Pradesh Woman gives birth to baby boy on flight from Kuwait on wednesday (Jan 29). Women giving birth on planes though not unheard of Airlines oblige pregnant women for flying. Radha and her husband Subramani, from Pulapatharu Rajampet village near Kadapa in Andhra Pradesh, had gone to Kuwait to seek work last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X