ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಯೂಟ್ಯೂಬ್ ವಿಡಿಯೋ ಫ್ರೀಯಾಗಿ ಇಳಿಸ್ಕೊಳ್ಳಿ

By Mahesh
|
Google Oneindia Kannada News

ಬೆಂಗಳೂರು, ಸೆ.17: ಆಂಡ್ರಾಯ್ಡ್ ಒನ್ ಆಪರೇಟಿಂಗ್ ಸಿಸ್ಟಮ್ ಮೂಲಕ ಗ್ರಾಹಕ ಸ್ನೇಹಿ ಸಾಧನಗಳನ್ನು ತರಲು ಯೋಜನೆ ಹಾಕಿಕೊಂಡಿರುವ ಗೂಗಲ್ ಈಗ ಮತ್ತೊಂದು ಮಹತ್ವದ ಯೋಜನೆಗೆ ಕೈ ಹಾಕಿದೆ. ಭಾರತದಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ಆಫ್ ಲೈನ್ ನಲ್ಲಿ ನೀಡಲು ಗೂಗಲ್ ಮುಂದಾಗಿದೆ.

ಎಲ್ಲರಿಗೂ ತಿಳಿದಿರುವಂತೆ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಫೋನ್ ಗಳಲ್ಲಿ ವಿಡಿಯೋ ಡೌನ್ ಲೋಡ್ ಮಾಡಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಯೂಟ್ಯೂಬ್ ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಗೂಗಲ್ ಇದುವರೆವಿಗೂ ನೀಡಿರಲಿಲ್ಲ. ಡೆಸ್ಕ್ ಟಾಪ್ ಬಳಸುವಾಗ ಹಾಗೂ ಹೀಗೂ ಒಂದಷ್ಟು ಸಾಫ್ಟ್ ವೇರ್ ಬಳಸಿ ಎಚ್ ಡಿ ಗುಣಮಟ್ಟದ ಯೂಟ್ಯೂಬ್ ವಿಡಿಯೋಗಳನ್ನು ಇಳಿಸಿಕೊಳ್ಳಬಹುದಾಗಿತ್ತು.[ಗೂಗಲ್ ಮೇಲೆ ಸಿಬಿಐ ಸರ್ಚ್]

YouTube videos to be available offline & free in India

ಈಗ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಗೂಗಲ್ ಅಂಡ್ರಾಯ್ಡ್ ಒನ್ ಮೂಲಕ ಯೂಟ್ಯೂಬ್ ವಿಡಿಯೋ ಬಳಕೆ ಹೆಚ್ಚಳಕ್ಕೆ ಮುಂದಾಗಿದೆ. ಇದಕ್ಕಾಗಿ ಹೈ ಸ್ಪೀಡ್ ಇಂಟರ್ನೆಟ್ ಬಳಸುವ ಭಾರತೀಯ ಮೊಬೈಲ್ ಗ್ರಾಹಕರು ಯೂಟ್ಯೂಬ್ ವಿಡಿಯೋಗಳನ್ನು ತಮ್ಮ ಮೊಬೈಲಿಗೆ ಡೌನ್ ಲೋಡ್ ಮಾಡಿಕೊಂಡು ನಂತರ ಇಂಟರ್ನೆಟ್ ಸಂಪರ್ಕವಿಲ್ಲದೆ ವಿಡಿಯೋ ವೀಕ್ಷಿಸಬಹುದಾಗಿದೆ.

ಇನ್ನು ಕೆಲವು ದಿನಗಳಲ್ಲಿ ಹೀಗೊಂದು ಸೌಲಭ್ಯವನ್ನು ಗೂಗಲ್ ಕಲ್ಪಿಸಲಿದೆ. ಮೊಬೈಲ್ ನಲ್ಲಿ ಯೂಟ್ಯೂಬ್ ವಿಡಿಯೋ ಡೌನ್ ಲೋಡ್ ಮಾಡಿಕೊಂಡು ಆಫ್ ಲೈನ್ ವೀಕ್ಷಿಸಬಹುದಾಗಿದೆ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯವಿರಲಿದೆ. ತಮ್ಮ ಗ್ರಾಹಕರಿಗೆ ಈ ಸೌಲಭ್ಯ ಇಷ್ಟವಾಗಲಿದೆ ಎಂಬ ಆಶಯವಿದೆ ಎಂದು ಗೂಗಲ್ ಸಂಸ್ಥೆಯ ಪ್ರಾಡೆಕ್ಟ್ ಮ್ಯಾನೇಜ್ಮೆಂಟ್ ನಿರ್ದೇಶಕ ಸೀಸರ್ ಸೇನ್ ಗುಪ್ತ ಹೇಳಿದ್ದಾರೆ. [ಗೂಗಲ್ ಆಂಡ್ರಾಯ್ಡ್ ಒನ್ ಲಾಂಚ್]

ಒಟ್ಟಾರೆ, ಇನ್ಮುಂದೆ ಯೂಟ್ಯೂಬಿನಿಂದ ವಿಡಿಯೋ, ಹಾಡು, ಸಿನಿಮಾಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಲೈಸನ್ಸ್ ಭಾರತೀಯರಿಗೆ ಸಿಗಲಿದೆ. ಅದರೆ, ಇದು ಸಂಪೂರ್ಣ ಉಚಿತವಾಗಿ ಸಿಗಲಿದೆಯೇ? ಗೊತ್ತಿಲ್ಲ. ವಿವರಗಳು ಇನ್ನೂ ಲಭ್ಯವಾಗಿಲ್ಲ. ಮಾಧ್ಯಮಗಳ ವರದಿ ಪ್ರಕಾರ ಡೇಟಾ ಚಾರ್ಜಸ್(ಇಂಟರ್ನೆಟ್ ಸಂಪರ್ಕ ವೆಚ್ಚ) ಹೊರತುಪಡಿಸಿ ಬೇರೆ ಯಾವುದೇ ಶುಲ್ಕ ಪಾವತಿ ಅಗತ್ಯವಿರುವುದಿಲ್ಲ ಎನ್ನಲಾಗಿದೆ. ಅದರೆ,ಮೊದಲು ಉಚಿತವಾಗಿ ನೀಡಿ ನಂತರ ಪ್ರತಿ ತಿಂಗಳು 9.99 ಯುಎಸ್ ಡಾಲರ್ ನಂತೆ ಚಂದಾದರರನ್ನು ಕಟ್ಟಿಹಾಕಲು ಗೂಗಲ್ ಯೋಜಿಸುತ್ತಿದೆ ಎಂಬ ಮಾತೂ ಇದೆ. ಏನಾಗುತ್ತೋ ನೋಡೋಣ.

English summary
YouTube will be available offline in India in the coming weeks. This means you can download YouTube videos when connected to a high speed network, and watch it later without using Internet connection
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X