ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೊ Q1 ಡಲ್, ಷೇರು ಕೊಂಚ ಕುಸಿತ

By Mahesh
|
Google Oneindia Kannada News

ಬೆಂಗಳೂರು, ಜು.25: ಭಾರತೀಯ ಸಾಫ್ಟ್ ವೇರ್ ರಫ್ತು ಸೇವೆಗಳ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ವಿಪ್ರೋ ಪ್ರಸಕ್ತ ಹಣಕಾಸು ವರ್ಷದ ತನ್ನ ಮೊದಲ ತ್ರೈಮಾಸಿಕ ಪ್ರಗತಿಯಲ್ಲಿ ರು. 21 ಸಾವಿರ ಕೋಟಿ ನಿವ್ವಳ ಆದಾಯ ಸಾಧಿಸಿದೆ.ಆದರೆ, ನಿರೀಕ್ಷಿತ ಫಲಿತಾಂಶ ಹೊರಹಾಕಲು ವಿಫಲವಾಗಿದೆ. ಹೀಗಾಗಿ ಶುಕ್ರವಾರ ವಿಪ್ರೋ ಸಂಸ್ಥೆ ಷೇರುಗಳು ಶೇ 6-8 ರಷ್ಟು ಇಳಿಮುಖವಾಗಿವೆ.

2013ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಪ್ರಗತಿಗೆ ಹೋಲಿಕೆ ಮಾಡಿದರೆ, ಈ ಬಾರಿ ನಿವ್ವಳ ಆದಾಯದಲ್ಲಿ ಶೇಕಡ 1.2 ರಷ್ಟು ಏರಿಕೆ ಕಂಡಿದೆ. ಜೊತೆಗೆ ವಾರ್ಷಿಕ ಗಳಿಕೆಯಲ್ಲೂ ಕೂಡ ಶೇ. 14ರಷ್ಟು ಪ್ರಗತಿಯಾಗಿದೆ. 2014 ಜೂನ್ ಅಂತ್ಯದ ಹೊತ್ತಿಗೆ ವಿಪ್ರೋ ವಿವಿಧ ಮೂಲಗಳಿಕೆಯಲ್ಲಿ ರು. 111.4 ಸಾವಿರ ಕೋಟಿ(1.9 ಬಿಲಿಯನ್ ಡಾಲರ್) ತಲುಪಿದೆ.[ಇನ್ಫೋಸಿಸ್ ಗೆ ಲಾಭ,ಹೂಡಿಕೆದಾರರಿಗೆ ಸಂತಸ]

ವಿಪ್ರೋ ಸಂಸ್ಥೆ ಷೇರುಗಳು ಬಿಎಸ್ ಇನಲ್ಲಿ ಶುಕ್ರವಾರ ಸಂಜೆ ವೇಳೆಗೆ 550.35 ರು ನಂತೆ 26.45 ರು ಕಳೆದುಕೊಂಡು ಶೇ 4.59 ರಷ್ಟು ಇಳಿಮುಖ ಕಂಡಿತ್ತು. ದಿನದ ಆರಂಭದಲ್ಲಿ 528.00 ರಂತೆ ಆರಂಭವಾದ ಷೇರುಗಳು ಆರಂಭದಲ್ಲಿ ಏರಿಕೆ ಕಂಡರೂ ನಂತರ ಹೆಚ್ಚಿನ ಚೇತರಿಕೆ ಕಾಣಲಿಲ್ಲ.

ಇದೇ ವೇಳೆ ಎನ್ ಎಸ್ ಇನಲ್ಲಿ 551.05 ರು ನಂತೆ 25.80 ರು ಕಳೆದುಕೊಂಡು ಶೇ 4.47 ರಷ್ಟು ಇಳಿಕೆ ಕಂಡಿದೆ. ಓಪನಿಂಗ್ ದರ 530ರಷ್ಟಿತ್ತು. ವಿಪ್ರೋ ಷೇರು ಏರಿಳಿತ ತಾತ್ಕಾಲಿಕವಾಗಿದ್ದು, ಹೂಡಿಕೆದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸ್ಥೆ ಹೇಳಿದೆ.

Wipro shares slide 6% as markets not impressed with Q1 numbers

ಇದೇ ವೇಳೆ, ವಿಪ್ರೋ ತನ್ನ ಹೊರಗುತ್ತಿಗೆ ಸೇವೆಗೆ ಕೆನಡಾದ ಪ್ರತಿಷ್ಠಿತ ಎಟಿಸಿಒ ಕಂಪನಿಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಳ್ಳುವ ಮೂಲಕ ವಿದೇಶಿ ವಹಿವಾಟಿನ ಪ್ರಗತಿಯಲ್ಲಿ ಮಹತ್ತರವಾದ ಮೈಲುಗಲ್ಲು ಸಾಧಿಸಿದೆ. ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ವಿಪ್ರೋ ಕ್ಯಾಂಪಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೆ. ಕುರಿಯನ್, ತ್ರೈಮಾಸಿಕ ವಹಿವಾಟಿನ ವಿವರ ನೀಡಿದರು.

ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದೇಶದ ಐಟಿ ಸೇವೆಯಲ್ಲಿ ಹೊಸ ಭರವಸೆ ಮೂಡಿದೆ. ವಿಶೇಷವಾಗಿ ದೇಶಿಯ ಮಾರುಕಟ್ಟೆಯಲ್ಲಿ ಮಹತ್ವದ ವಹಿವಾಟಿನ ನಿರೀಕ್ಷೆ ಮೂಡಿದೆ ಎಂಬುದಾಗಿ ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ನೀಡಿದ ಹೇಳಿಕೆಯನ್ನು ಅವರು ಪ್ರಸ್ತಾಪಿಸಿದರು.

English summary
Shares in Wipro fell as much as 6 per cent in trade, as the company's Q1 revenues failed to match expectations, after peers like Infosys and TCS reported a strong growth for the quarter ending June 30, 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X