ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿಗರನ್ನು ಸೆಳೆಯಲು ವೀಸಾ ನಿಯಮ ಸರಳ

By Mahesh
|
Google Oneindia Kannada News

Visa-on-arrival facility for all but 8 countries from September
ಬೆಂಗಳೂರು, ಫೆ.6: ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ಎಲ್ಲಾ ರಾಷ್ಟ್ರಗಳ ಪ್ರವಾಸಿಗರಿಗೆ ವೀಸಾ ಆನ್ ಅರೈವಲ್ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, 8 ದೇಶಗಳಿಗೆ ಮಾತ್ರ ಈ ಸೌಲಭ್ಯ ಲಭ್ಯವಿರುವುದಿಲ್ಲ.

ಇ-ವೀಸಾ ಸೌಲಭ್ಯ ವಂಚಿತ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ, ಸೂಡನ್, ಆಫ್ಘಾನಿಸ್ತಾನ, ಇರಾನ್, ಇರಾಕ್, ನೈಜೀರಿಯಾ, ಶ್ರೀಲಂಕಾ ಹಾಗೂ ಸೋಮಾಲಿಯಾ ದೇಶಗಳಿವೆ. ನ್ಯೂಜಿಲೆಂಡ್, ಸಿಂಗಪುರ, ಲಕ್ಸೆಂಬರ್ಗ್, ಜಪಾನ್ ಹಾಗೂ ಫಿನ್ಲೆಂಡ್ ಸೇರಿದಂತೆ ಇ ವೀಸಾ ಸೌಲಭ್ಯ ಮೊಟ್ಟ ಮೊದಲ ಬಾರಿಗೆ 11 ರಾಷ್ಟ್ರಗಳ ಪ್ರಜೆಗಳಿಗೆ ನೀಡಲಾಯಿತು. ಈ ಸೌಲಭ್ಯ ವಿಸ್ತರಣೆ ಮೂಲಕ ಜಗತ್ತಿನ ನಂ.1 ಪ್ರವಾಸೋದ್ಯಮ ರಾಷ್ಟ್ರ ಎನಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

2013ರಲ್ಲಿ ವಿದೇಶಿ ಪ್ರವಾಸಿಗರ ಆಗಮನ ಅಂಕಿ ಅಂಶದಂತೆ 6.84 ಮಿಲಿಯನ್ ನಷ್ಟಿತ್ತು, ಪ್ರವಾಸೋದ್ಯಮ ಇಲಾಖೆಗೆ ಫೊರೆಕ್ಸ್ ವಿನಿಮಯ ಆದಾಯ ಶೇ 2.2 ರಷ್ಟು ಏರಿಕೆ ಕಂಡು ವರ್ಷದಿಂದ ವರ್ಷಕ್ಕೆ 18.1 ಬಿಲಿಯನ್ ಡಾಲರ್ ಗೇರಿತು ಎಂದು ಯೋಜನಾ ಆಯೋಗ ರಾಜ್ಯ ಸಚಿವ ರಾಜೀವ್ ಶುಕ್ಲಾ ಹೇಳಿದ್ದಾರೆ.

ಬಿಸಿನೆಸ್ ವೀಸಾ ಸೌಲಭ್ಯದಲ್ಲೂ ಬದಲಾವಣೆ ನಿರೀಕ್ಷಿಸಬಹುದು. ದೇಶದ ಪ್ರಮುಖ 26 ವಿಮಾನ ನಿಲ್ದಾಣಗಳಲ್ಲಿ ವೀಸಾ ಸೌಲಭ್ಯ ಒದಗಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಒಂದೇ ಒಂದು ಅರ್ಜಿ ಭರ್ತಿ ಮಾಡಿ ಶುಲ್ಕ ಪಾವತಿಸಿ ಎಲೆಕ್ಟ್ರಾನಿಕ್ ಪ್ರವಾಸಿ ಅಧಿಕೃತ ರಹದಾರಿ ಪತ್ರವನ್ನು ಮೂರು ದಿನಗಳಲ್ಲಿ ಪಡೆಯಬಹುದಾಗಿದೆ.

English summary
India will extend the visa-on-arrival facility to all countries except eight with effect from September. With this decision, India expects to become the world's number-one tourist destination, according to a government official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X