ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚ ನೀಡಿದ ಎಚ್ ಪಿ ಸಾಫ್ಟ್ ವೇರ್ ಕಂಪನಿಗೆ ದಂಡ

By Mahesh
|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಸೆ.12: ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಹ್ಯೂಲೆಟ್ ಪ್ಯಾಕರ್ಡ್ ತನ್ನ ಅಂಗ ಸಂಸ್ಥೆಗಳ ಮೂಲಕ ಲಂಚ ನೀಡಿರುವುದು ಸಾಬೀತಾಗಿದೆ. ಹೀಗಾಗಿ ಎಚ್ ಪಿ ಸಂಸ್ಥೆ 108 ಮಿಲಿಯನ್ ಯುಎಸ್ ಡಾಲರ್ ದಂಡ ಕಟ್ಟಬೇಕು ಎಂದು ಅಮೆರಿಕದ ಪ್ರಾಧಿಕಾರ ಸೂಚಿಸಿದೆ.

ಎಚ್ ಪಿ ಸಂಸ್ಥೆಯ ರಷ್ಯಾ, ಪೋಲ್ಯಾಮ್ಡ್ ಹಾಗೂ ಮೆಕ್ಸಿಕೋದಲ್ಲಿನ ವಿಭಾಗಗಳಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ಈ ಬಗ್ಗೆ ಕ್ಯಾಲಿಫೋರ್ನಿಯಾದ ನ್ಯಾಯಾಧೀಶದ ಮುಂದೆ ರಷ್ಯಾ ವಿಭಾಗದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಯುಎಸ್ ವಿದೇಶಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ಎಚ್ ಪಿ ಸಂಸ್ಥೆ ರಷ್ಯಾದ ತನ್ನ ವಿಭಾಗದಲ್ಲಿ ಒಂದಷ್ಟು ನಿಧಿ ಶೇಖರಿಸಿಟ್ಟುಕೊಂಡಿತ್ತು. ಈ ಹಣವನ್ನು ರಷ್ಯಾದ ಅಧಿಕಾರಿಗಳಿಗೆ ಲಂಚ ರೂಪದಲ್ಲಿ ನೀಡಲು ಬಳಸಲಾಗಿತ್ತು. ಇದರಿಂದ ಎಚ್ ಪಿ ಸಂಸ್ಥೆ ರಷ್ಯಾ ಸರ್ಕಾರದ ಕಡೆಯಿಂದ ಲಕ್ಷಾಂತರ ಡಾಲರ್ ಮೌಲ್ಯದ ಗುತ್ತಿಗೆ ಸಿಕ್ಕಿತ್ತು.

US fines HP $108 mn for bribery in Russia, Poland, Mexico

ಈ ಬಗ್ಗೆ ತನಿಖೆ ನಡೆಸಿದ ಅಮೆರಿಕದ ಅಧಿಕಾರಿಗಳು ಕ್ಯಾಲಿಫೋರ್ನಿಯಾ ಮೂಲದ ಎಚ್ ಪಿ ಸಂಸ್ಥೆ ರಷ್ಯಾದ ತನ್ನ ಅಂಗ ಸಂಸ್ಥೆಯಲ್ಲಿ ಭ್ರಷ್ಟಾಚಾರ ಎಸಗಿದೆ ಎಂದು ವರದಿ ಮಾಡಿದ್ದರು. ಇದಕ್ಕಾಗಿ 58.7 ಮಿಲಿಯನ್ ಯುಎಸ್ ಡಾಲರ್ ಪಾವತಿಸುವಂತೆ ನೋಟಿಸ್ ನೀಡಲಾಗಿತ್ತು.

ತನಿಖೆ ಮುಂದುವರೆಸುತ್ತಿದ್ದಂತೆ ರಷ್ಯಾದಲ್ಲಿ ನಡೆದ ಭ್ರಷ್ಟಾಚಾರ ಮೆಕ್ಸಿಕೋ ಹಾಗೂ ಪೋಲ್ಯಾಂಡ ನಲ್ಲೂ ಕಂಡು ಬಂದಿದೆ. ಒಟ್ಟಾರೆ 108 ಮಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ. ಮೆಕ್ಸಿಕೋದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಪೆಮೆಕ್ಸ್ ಗೆ ಎಚ್ ಪಿ ಸಂಸ್ಥೆ ಲಂಚ ನೀಡಿದೆ. ಪೋಲ್ಯಾಂಡ್ ನಲ್ಲಿ ಅಲ್ಲಿನ ಪೊಲೀಸ್ ಸಂಸ್ಥೆಗೆ ಎಚ್ ಪಿ ಅಧಿಕಾರಿಗಳು ಲಂಚ ನೀಡಿರುವುದು ಸಾಬೀತಾಗಿದೆ.

ಐಟಿ ಕಂಪನಿಗಳಾದ ಮಾತ್ರಕ್ಕೆ ಗುಪ್ತವಾದ ಖಾತೆ ಹೊಂದುವುದು, ಸುಳ್ಳು ದಾಖಲೆ ಮೂಲಕ ಅವ್ಯವಹಾರ ಮಾಡುವುದು ಲಕ್ಷಾಂತರ ಡಾಲರ್ ಮೊತ್ತವನ್ನು ಲಂಚರೂಪದಲ್ಲಿ ನೀಡಿ ಗುತ್ತಿಗೆ ಪಡೆದುಕೊಳ್ಳುವುದು ಮುಂತಾದ ನಿಷಿದ್ಧ ಕಾರ್ಯಕ್ಕೆ ಮುಂದಾಗುವುದು ತರವಲ್ಲ ಎಂದು ಫೆಡರಲ್ ಪ್ರಾಸಿಕ್ಯೂಟರ್ ಮಾರ್ಷಲ್ ಮಿಲ್ಲರ್ ಹೇಳಿದ್ದಾರೆ. ಎಚ್ ಪಿ ಸಂಸ್ಥೆ ವಿರುದ್ಧದ ಈ ಆದೇಶ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿನ ಭ್ರಷ್ಟಾಚಾರಿಗಳ ಕೆನ್ನೆಗೆ ಹೊಡೆದ್ದಂತಾಗಿದೆ ಎಂದು ಹಲವಾರು ಮಂದಿ ಸ್ವಾಗತಿಸಿದ್ದಾರೆ.(ಐಎಎನ್ಎಸ್/ಇಎಫ್ ಇ)

ಈ ಹಿಂದೆ ಎಚ್ ಪಿ ಸಂಸ್ಥೆಯಲ್ಲಿ ಸುಮಾರು 8.8 ಬಿಲಿಯನ್ ಡಾಲರ್ ವಂಚನೆಯಾಗಿರುವುದು ಪತ್ತೆಯಾಗಿತ್ತು. 2011ರಲ್ಲಿ ಬ್ರಿಟಿಷ್ ಮೂಲದ ಸಾಫ್ಟ್ ವೇರ್ ಸಂಸ್ಥೆ autonomy ಖರೀದಿ ಸಂದರ್ಭದಲ್ಲಿ ಅವ್ಯವಹಾರ ನಡೆದಿದ್ದು ಸಾಬೀತಾಗಿತ್ತು. [ವಿವರ ಓದಿ]

English summary
US authorities have ordered information technology giant Hewlett-Packard (HP) to pay a fine of $108 million after finding the company guilty of paying bribes through its subsidiaries in Russia, Poland and Mexico.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X