ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಗೇಡ್ ಗ್ರೂಪ್ ನಿಂದ ಟವರ್ ಬರ್ಗಂಡಿ ಸಿದ್ಧ

By Rajendra
|
Google Oneindia Kannada News

ಬೆಂಗಳೂರು, ಸೆ.17: ಬ್ರಿಗೇಡ್ ಗ್ರೂಪ್ ಸಂಸ್ಥೆ ತನ್ನ ಬ್ರಿಗೇಡ್ ಎಕ್ಸೋಟಿಕಾದಲ್ಲಿ ಬರ್ಗಂಡಿ ವಸತಿ ಸಮುಚ್ಚಯ ನಿರ್ಮಾಣ ಮಾಡಿದೆ. ಇದರ ವಿಶೇಷವೆಂದರೆ, ಸಂಪೂರ್ಣ ಪರಿಸರ ಸ್ನೇಹಿಯಾಗಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಈ ಅಪಾರ್ಟ್ ಮೆಂಟ್ ಗೆ ದೇಶದ ಪ್ರತಿಷ್ಠಿತ ಸಂಸ್ಥೆಯಾದ ದಿ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಗೋಲ್ಡ್ ರೇಟೆಡ್ ಗ್ರೀನ್ ಬಿಲ್ಡಿಂಗ್ ಎಂದು ಪ್ರಮಾಣಪತ್ರ ನೀಡಿದೆ.

ಇಂತಹ ಗೌರವಕ್ಕೆ ಪಾತ್ರವಾದ ದೇಶದ ಮೊದಲ ವಸತಿ ಸಮುಚ್ಚಯ ಇದಾಗಿದೆ. 10 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಹಚ್ಚ ಹಸಿರಿನ ಮನೆಗಳ ಸಂಕೀರ್ಣ ಸದಾ ತಂಗಾಳಿಯ ತಾಣವಾಗಿದೆ. ಪರಿಸರ ಕಾಳಜಿ ಉಳ್ಳ ದೇಶದ ಕೆಲವೇ ಕೆಲವು ಐಷಾರಾಮಿ ವಸತಿ ಸಮುಚ್ಚಯದಲ್ಲಿ ಈ ಬ್ರಿಗೇಡ್ ಎಕ್ಸೋಟಿಕಾ ಒಂದಾಗಿದೆ.

Tower Burgundy at Brigade Exotica Bangalore1

ಹಳೆ ಮದ್ರಾಸ್ ರಸ್ತೆಯಲ್ಲಿ ಬ್ರಿಗೇಡ್ ಎಕ್ಸೋಟಿಕಾದಲ್ಲಿ ಬರ್ಗಂಡಿ ನಿರ್ಮಾಣವಾಗಿದ್ದು, ಶೇ. 80 ರಷ್ಟು ಜಾಗವನ್ನು ಸಂಪೂರ್ಣ ಖಾಲಿ ಇಡಲಾಗಿದ್ದು, ಉಳಿದ ಕೇವಲ ಶೇ. 20 ರಷ್ಟುವನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಮನೆಗಳ ಕೆಳಗಿನ ಜಾಗದಲ್ಲಿ ಒಂದು ಚಿಕ್ಕ ಕಾಡಿನ ತರಹ ನಿರ್ಮಾಣ ಮಾಡಲಾಗಿದೆ.

ಇಲ್ಲಿ ಅನೇಕ ಗಿಡ, ಮರ ಹಾಗೂ ಅದಕ್ಕೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಈ ಜಾಗದಲ್ಲಿ ಉತ್ತಮ ಗಾಳಿಯ ವ್ಯವಸ್ಥೆ ಸಿಗಲಿದೆ ಎಂದು ವಿಶ್ವ ಪ್ರತಾಪ್ ದೇಸು ಮಾರ್ಕೆಟಿಂಗ್ ಉಪಾಧ್ಯಕ್ಷ ತಿಳಿಸಿದರು.

ಮನೆಯ ಮಾಲೀಕರಿಗೆ ಏನೆಲ್ಲಾ ಸೌಲಭ್ಯ ಇಲ್ಲಿದೆ?
ಪ್ರತಿಯೊಂದು ಮನೆಗೂ ಇಲ್ಲಿ ಉತ್ತಮ ಗಾಳಿ, ಬೆಳಕು ಸೌಲಭ್ಯ ಇದ್ದು, ಹೆಚ್ಚು ವಿದ್ಯುತ್ತಿನ ಅಗತ್ಯವಾಗಲಿ ಅಥವಾ ಹೆಚ್ಚು ಹವಾನಿಯಂತ್ರಣ ಪರಿಕರಗಳಾಗಲಿ ಅಗತ್ಯವಿಲ್ಲ. ಅಪಾರ್ಟ್ ಮೆಂಟ್ ಗಳಾದರೂ ಪ್ರತಿಯೊಂದು ಮನೆಗೆ ಸರಿಯಾದ ಗಾಳಿ, ಬೆಳಕು ಸಿಗಬೇಕು ಅನ್ನುವ ನಿಟ್ಟಿನಲ್ಲಿ ಇಲ್ಲಿ ಮನೆಗಳನ್ನು ಕಟ್ಟಲಾಗಿದೆ.

Tower Burgundy at Brigade Exotica Bangalore2

ಈ ಮೂಲಕ ಪ್ರಾಕೃತಿಕ ಗಾಳಿ, ಬೆಳಕಿಗೆ ಯಾವುದೇ ತೊಂದರೆ ಇಲ್ಲ. ಸೋಲಾರ್ ದೀಪಗಳ ವ್ಯವಸ್ಥೆ ಇಲ್ಲಿದ್ದು, ಸೋಲಾರ್ ಗೀಸರ್ ಗಳನ್ನೂ ಪ್ರತಿಯೊಂದು ಮನೆಗೆ ಅಳವಡಿಸಲಾಗಿದೆ. ಈ ಮೂಲಕ ಮನೆಯ ಮಾಲೀಕರು ವಿದ್ಯುತ್ತಿನ ಮೇಲೆ ಹೆಚ್ಚು ಅವಲಂಬಿಸುವ ಪ್ರಮೇಯವಿಲ್ಲ. ಬೆಳಕು ಪ್ರತಿಯೊಂದು ಕೋಣೆಯಲ್ಲೂ ದೊಡ್ಡ ಕಿಟಕಿಗಳನ್ನು ಅಳವಡಿಸಲಾಗಿದ್ದು, ಇದರಿಂದ ಉತ್ತಮ ಗಾಳಿ ಸಿಗಲಿದೆ.

ಆರೋಗ್ಯಕರ ವಾತಾವರಣ ಈ ಹಸಿರು ಮನೆಗಳಲ್ಲಿದೆ. ಮನೆಯನ್ನು ಖರೀದಿಸುವವರು ಪ್ರಕೃತಿದತ್ತವಾಗಿ ಬರುವ ಗಾಳಿ, ಬೆಳಕನ್ನು ಪಡೆಯುವುದರಿಂದ ಅವರ ಆರೋಗ್ಯ ಮಟ್ಟವೂ ಸುಧಾರಿಸಲಿದೆ. ಭಾರತೀಯ ಮನೆಗಳ ಪರಿಕಲ್ಪನೆಯಂತೆ ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ವಿಶಾಲವಾದ ಕೇಂದ್ರಿತ ಪ್ರಾಂಗಣ ಇರುವುದರಿಂದ ಹೆಚ್ಚಿನ ಗಾಳಿ, ಬೆಳಕು ಬರಲು ನೆರವಾಗಲಿದೆ.

ಈ ಮೂಲಕ ಬಿಗೇಡ್ ಎಕ್ಸೋಟಿಕಾದಲ್ಲಿರುವ ಬರ್ಗಂಡಿಯಲ್ಲಿನ ಮನೆಗಳು ಕೃತಕ ಬೆಳಕು ಮತ್ತು ಗಾಳಿಯ ಮೇಲೆ ಅವಲಂಬನೆಯಾಗುವುದಿಲ್ಲ ಎಂದು ಮಂಜುನಾಥ್ ಪ್ರಸಾದ್, ಸಿಓಓ, ಬ್ರಿಗೇಡ್ ಗ್ರೂಪ್ ವಿವರ ನೀಡಿದರು. ಅತ್ಯುತ್ತಮವಾದ ತ್ಯಾಜ್ಯ ನೀರು ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಶುದ್ಧೀಕರಿಸಿದ ನೀರನ್ನು ಉದ್ಯಾನವನಗಳು ಮತ್ತು ಲ್ಯಾಂಡ್ ಸ್ಕೇಪ್ ಗಳಿಗೆ ಪೂರೈಸಲಾಗುತ್ತದೆ.

Tower Burgundy at Brigade Exotica Bangalore3

ಬ್ರಿಗೇಡ್ ಎಕ್ಸೋಟಿಕಾದಲ್ಲಿನ ಟವರ್ ಬರ್ಗಂಡಿ 35 ಮಹಡಿಗಳ ವಸತಿ ಸಮುಚ್ಚಯವಾಗಿದ್ದು ಇದು ಓಲ್ಡ್ ಮದ್ರಾಸ್ ರಸ್ತೆಯಲ್ಲಿದೆ. ಸಿಬಿಡಿ, ಒಆರ್‍ಆರ್ ಮತ್ತು ವೈಟ್ ಫೀಲ್ಡ್ ನಲ್ಲಿರುವ ಐಟಿ ಕ್ಷೇತ್ರಕ್ಕೆ ಸಂಪರ್ಕ ಹೊಂದಿದೆ. ಟವರ್ ಬರ್ಗಂಡಿಯ 227 ಮನೆಗಳು ಹವಾ ನಿಯಂತ್ರಿತವಾಗಿದ್ದು, ವಿದೇಶಿ ಮಾರ್ಬಲ್ ಬಳಸಲಾಗಿದೆ.

ಇಲ್ಲಿ ಮನೆಗಳಿಗೆ ವಿಡಿಯೋ ಫೋನ್, ಸೆಕ್ಯೂರಿಟಿ ಕಂಟ್ರೋಲ್ ಬಝರ್ ಮತ್ತು ಇಂಟರ್‍ಕಾಂ ವ್ಯವಸ್ಥೆ ಕಲ್ಪಿಸಲಾಗಿದೆ. ಬ್ರಿಗೇಡ್ ಎಕ್ಸೋಟಿಕಾ 3 ಮತ್ತು 4 ಬೆಡ್ರೋಗಳ ಅಪಾರ್ಟ್ ಮೆಂಟ್ ಆಗಿದ್ದು, ಕ್ರಮವಾಗಿ 245.26 ಚದರ ಮೀಟರ್ ಮತ್ತು 450.58 ಚದರ ಮೀಟರ್ ವಿಸ್ತೀರ್ಣ ಹೊಂದಿವೆ.

ಈ ಅಪಾರ್ಟ್ ಮೆಂಟ್ ಗಳು ಅಜರ್ ಮತ್ತು ಬರ್ಗಂಡಿ ಹೆಸರಿನಲ್ಲಿದ್ದು, ಗಗನಚುಂಬಿಸುವಂತಿವೆ. ಅಜ್ಯುರ್ ಮತ್ತು ಬರ್ಗಂಡಿ ಟವರ್ ಅಜ್ಯುರ್ ಸದ್ಯಕ್ಕೆ ಮುಕ್ತಾಯದ ಹಂತದಲ್ಲಿದೆ. ಮಕ್ಕಳಿಗಾಗಿ ಆಟದ ಮೈದಾನ, ಕ್ಲಬ್ ಹೌಸ್, ಜಿಮ್ನಾಸಿಯಂ, ಒಳಾಂಗಣ ಆಟಗಳ ಕೋಣೆ, ರೀಡಿಂಗ್ ರೂಂ, ಬಹಪಯೋಗಿ ಹಾಲ್, ಈಜುಕೊಳ ಮತ್ತು ಬ್ಯಾಂಡ್‍ಮಿಂಟನ್ ಕೋರ್ಟ್ ಸೇರಿದಂತೆ ಮತ್ತಿತರೆ ಸೌಲಭ್ಯಗಳೂ ಇಲ್ಲಿವೆ. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)

English summary
The launch of Tower Burgundy at Brigade Exotica a pre-certified, GOLD rated Green Building by IGBC Green Homes, located on Old Madras Road. Bangalore’s exculsive high-rise home with IGBC pre-certification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X