ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಟಾಪ್ ಸಿಇಒಗಳ ಜೊತೆ ಮೋದಿ ಮೀಟಿಂಗ್

By Mahesh
|
Google Oneindia Kannada News

ನ್ಯೂಯಾರ್ಕ್‌, ಸೆ.30: ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಪ್ರಮುಖ 11 ಕಂಪನಿಗಳ ಸಿಇಒಗಳ ಜತೆ ಮಹತ್ವದ ಸಭೆ ನಡೆಸಿದರು.ನಂತರ ನ್ಯೂಯಾರ್ಕ್ ನಲ್ಲಿ ಐದಾರು ಪ್ರಮುಖ ಕಂಪನಿಗಳ ಪ್ರತಿನಿಧಿಗಳ ಜೊತೆ ಮುಖಾ ಮುಖಿ ಚರ್ಚೆ ನಡೆಸಿದರು. ಭಾರತದಲ್ಲಿ ಹೂಡಿಕೆ ಈಗ ಸರಳವಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸಿಇಒಗಳಿಗೆ ಮೋದಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಮೋದಿ ಅವರೊಂದಿಗಿನ ಸಭೆಯಲ್ಲಿ ಪೆಪ್ಸಿಕೋ ಕಂಪನಿಯ ಮುಖ್ಯಸ್ಥೆ, ಭಾರತೀಯ ಮೂಲದ ಇಂದ್ರಾ ನೂಯಿ ಹಾಗೂ ಮಾಸ್ಟರ್‌ಕಾರ್ಡ್ ಸಿಇಒ ಅಜಯ್ ಬಂಗ, ಗೂಗಲ್‌ ಕಂಪನಿ ಅಧ್ಯಕ್ಷ ಎರಿಕ್‌ ಸ್ಮಿತ್‌, ಸಿಟಿ ಗ್ರೂಪ್‌ನ ಮುಖ್ಯಸ್ಥ ಮೆಕಲ್‌ ಕಾರ್ಬಟ್‌ ಸೇರಿ ಅವರು ಹಲವಾರು ಪ್ರಮುಖ ಉದ್ಯಮಿಗಳು ಪಾಲ್ಗೊಂಡಿದ್ದರು.[ವಿಶ್ವದ ಕಲ್ಯಾಣ ನಮ್ಮಿಬ್ಬರ ಹೆಗಲ ಮೇಲಿದೆ]

ಭಾರತವು ಮುಕ್ತ ಮನಸ್ಸಿನ ರಾಷ್ಟ್ರವಾಗಿದೆ. ನಾವು ಬದಲಾವಣೆಯನ್ನು ಬಯಸುತ್ತೇವೆ. ಬದಲಾವಣೆ ಎಂಬುದು ಏಕಪಕ್ಷೀಯವಲ್ಲ. ನಾನು ನಾಗರಿಕರು, ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರೊಂದಿಗೆ ಚರ್ಚಿಸಿದ್ದೇನೆ ಎಂದು ಮೋದಿ ಹೇಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿ ಅಕ್ಬರುದ್ದೀನ್ ಮಾಧ್ಯಮಗಳಿಗೆ ತಿಳಿಸಿದರು. ಮೋದಿ ಜೊತೆ ಸಿಇಒಗಳ ಚಿತ್ರ ಸಂಪುಟ ಇಲ್ಲಿದೆ

ಮೋದಿ ಜೊತೆ ಪೆಪ್ಸಿಕೋ ಸಿಇಒ ಇಂದ್ರಾ ನೂಯಿ

ಮೋದಿ ಜೊತೆ ಪೆಪ್ಸಿಕೋ ಸಿಇಒ ಇಂದ್ರಾ ನೂಯಿ

ಮೋದಿ ಜೊತೆ ಪೆಪ್ಸಿಕೋ ಸಿಇಒ ಭಾರತೀಯ ಮೂಲದ ಇಂದ್ರಾ ನೂಯಿ

ಮೋದಿ ಅವರ ಜೊತೆ ನಡೆದ ಉಪಾಹಾರ ಕೂಟ

ಮೋದಿ ಅವರ ಜೊತೆ ನಡೆದ ಉಪಾಹಾರ ಕೂಟ

ಸೋಮವಾರ ಮೋದಿ ಅವರ ಜೊತೆ ನಡೆದ ಉಪಾಹಾರ ಕೂಟದಲ್ಲಿ ಮಾಸ್ಟರ್‌ಕಾರ್ಡ್ ಸಿಇಒ ಅಜಯ್ ಬಂಗ, ಕಾರ್‌ಗಿಲ್ಸ್ ಮುಖ್ಯಸ್ಥ ಹಾಗೂ ಸಿಇಒ ಡೇವಿಡ್ ಡಬ್ಲು. ಮೆಕ್‌ಲೆನನ್, ಕ್ಯಾಟರ್‌ಪಿಲ್ಲರ್‌ನ ಡಾಗ್ಲಸ್ ಒಬರ್‌ಹೆಲ್ಮನ್, ಎಇಎಸ್‌ನ ಆಂಡ್ರೆಸ್ ಗ್ಲೂಸ್ಕಿ ಮೊದಲಾದ ಅನೇಕರು ಉಪಸ್ಥಿತರಿದ್ದರು.

ಚಿತ್ರದಲ್ಲಿ: ಐಬಿಎಂ ಸಿಇಒ ವಿರ್ಗಿನಿಯಾ ರೊಮೆಟ್ಟಿ
ಬೋಯಿಂಗ್ ಸಿಇಒ ಮೆಕ್ ನೆರ್ನೆ ಜೊತೆ ಮೋದಿ

ಬೋಯಿಂಗ್ ಸಿಇಒ ಮೆಕ್ ನೆರ್ನೆ ಜೊತೆ ಮೋದಿ

ಉಪಾಹಾರ ಕೂಟದ ಬಳಿಕ ಮೋದಿಯವರು ಬೋಯಿಂಗ್, ಕೆಕೆಆರ್, ಬ್ಲಾಕ್‌ರಾಕ್, ಐಬಿಎಂ, ಜನರಲ್ ಎಲೆಕ್ಟ್ರಿಕ್ ಹಾಗೂ ಗೋಲ್ಡ್‌ಮನ್ ಸ್ಯಾಶಸ್ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದರು.

ಜಿಇ ಸಿಇಒ ಜೆಫ್ರಿ ಆರ್ ಇಮ್ಮೆಲ್ಟ್ ಜೊತೆ

ಜಿಇ ಸಿಇಒ ಜೆಫ್ರಿ ಆರ್ ಇಮ್ಮೆಲ್ಟ್ ಜೊತೆ

ಒಟ್ಟಾರೆ ಮೋದಿ ಜೊತೆ ಗೂಗಲ್ ಕಾರ್ಯಕಾರಿ ಚೇರ್ಮನ್ ಎರಿಕ್ ಇ ಸ್ಕ್ಮಿಟ್, Carlyle ಗ್ರೂಪ್ ಸಹ ಸ್ಥಾಪಕ ಡೇವಿಡ್ ರುಬೆನ್ ಸ್ಟೈನ್, ಕಾರ್ಗಿಲ್ ಅಧ್ಯಕ್ಷ ಸಿಇಒ ಡೇವಿಡ್ ಮೆಕ್ ಲೆನ್ನನ್, ಮೆರ್ಕ್ ಅಂಡ್ ಕೋ ಸಿಇಒ ಕೆನ್ನತ್ ಸಿ ಫ್ರಾಜರ್ ಹೊಸ್ಪಿರಾ ಚೇರ್ಮನ್ ಜಾನ್ ಸಿ ಸ್ಟ್ಯಾಲೆ, ಸಿಟಿ ಗ್ರೂಪ್ ಸಿಇಒ ಮೈಕಲ್ ಎಲ್ ಕೊರ್ಬಾಟ್, ಕ್ಯಾಟರ್ ಪಿಲ್ಲರ್ ಚೇರ್ಮರ್ ಡಾಫ್ ಓಬೆರ್ ಹೆಲ್ಮನ್ ಕಾಣಿಸಿಕೊಂಡರು.

ಗೋಲ್ಡ್‌ಮನ್ ಸ್ಯಾಚ್ಸ್ ಸಂಸ್ಥೆ ಸಿಇಒ ಜೊತೆ ಮೋದಿ

ಗೋಲ್ಡ್‌ಮನ್ ಸ್ಯಾಚ್ಸ್ ಸಂಸ್ಥೆ ಸಿಇಒ ಜೊತೆ ಮೋದಿ

ಗೋಲ್ಡ್‌ಮನ್ ಸ್ಯಾಚ್ಸ್ ಸಂಸ್ಥೆ ಸಿಇಒ ಲಾಯ್ಡ್ ಬ್ಲಾಕ್ ಫೈನ್ ಜೊತೆ ಮೋದಿ

ಇನ್ನಷ್ಟು ಕಂಪನಿಗಳು ಭಾರತದತ್ತ ಬರಲಿವೆ

ಇನ್ನಷ್ಟು ಕಂಪನಿಗಳು ಭಾರತದತ್ತ ಬರಲಿವೆ

ಸೆ.25ರಂದು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ವಿಶ್ವದ 500 ಕಂಪನಿಗಳನ್ನು ಸೆಳೆದಿರುವ ಪ್ರಧಾನಿ ಮೋದಿ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ಭಾರತಕ್ಕೆ ಇನ್ನಷ್ಟು ಕಂಪನಿಗಳನ್ನು ಕರೆ ತರುವ ಇರಾದೆ ಹೊಂದಿದ್ದಾರೆ.

English summary
New York: Indian Prime Minister Narendra Modi has met top CEOs from US headquartered companies during his visit in the US. Take a look at how India's Prime Minister has been hard selling the India story and seeking large scale investment from US based companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X