ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಪಾವತಿ ಮಾಡಲು ವಿಶೇಷ ಕೌಂಟರ್

|
Google Oneindia Kannada News

ಬೆಂಗಳೂರು, ಜು. 25 : ಆದಾಯ ತೆರಿಗೆ ವಿವರ ಸಲ್ಲಿಕೆಗೆ ಜು.31 ಕೊನೆಯ ದಿನವಾಗಿದೆ. ಪಾವತಿ­ದಾರರ ಅನುಕೂಲಕ್ಕಾಗಿ ಆದಾಯ ತೆರಿಗೆ ಇಲಾಖೆಯು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ 80ಕ್ಕೂ ಅಧಿಕ ವಿಶೇಷ ಕೌಂಟರ್‌­ ಗಳನ್ನು ಜು.29ರಿಂದ ಆರಂಭಿಸುತ್ತಿದೆ.

ಈ ಕುರಿತು ಆದಾಯ ತೆರಿಗೆ ಇಲಾಖೆ ಪತ್ರಿಕಾ ಪ್ರಕಟಣೆ ನೀಡಿದ್ದು, ಜು.29ರ ಮಂಗಳವಾರದಿಂದ ಜು.31ರ ಗುರುವಾರದ ತನಕ ಈ ವಿಶೇಷ ಕೌಂಟರ್‌ ಗಳಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ಆದಾಯ ತೆರಿಗೆ ವಿವರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Income Tax

ಕೇಂದ್ರ ಹಾಗೂ ರಾಜ್ಯ ಸರ್ಕಾರಿ, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು, ಬ್ಯಾಂಕ್, ಖಾಸಗಿ ವಲಯಗಳ ವೇತನ­ದಾರರು ಹಾಗೂ ಪಿಂಚಣಿ­ದಾರರು ವಿಶೇಷ ಕೌಂಟರ್‌­ಗಳಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸಬಹುದು. ಸಾರ್ವಜನಿಕರು ಈ ವಿಶೇಷ ಕೌಂಟರ್ ಗಳ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿರುವುದರಿಂದ ಆನ್ ಲೈನ್ ಮೂಲಕ ತೆರಿಗೆ ಕಟ್ಟುವವರ ಸಂಖ್ಯೆ ಸಹ ಹೆಚ್ಚಿದೆ. [ಆನ್ ಲೈನ್ ನಲ್ಲಿ ತೆರಿಗೆ ಕಟ್ಟುವುದು ಹೇಗೆ?]

ಸಂಬಳ ಪಡೆಯುವ ವ್ಯಕ್ತಿಗಳು ಜುಲೈ ತಿಂಗಳಿನಲ್ಲಿ ಆದಾಯ ತೆರಿಗೆ ಪಾವತಿ ಮಾಡುವುದು ಹೇಗೆ ಎಂದು ತಲೆಕೆಡಿಸಿಕೊಳ್ಳುತ್ತಾರೆ. ಆದಾಯ ತೆರಿಗೆ ಹೇಗೆ ಪಾವತಿ ಮಾಡಬೇಕು? ಯಾರ ಬಳಿ ಮಾಡಿಸಬೇಕು ಎಂಬ ಪ್ರಕ್ರಿಯೆಗಳು ಹಲವರಲ್ಲಿ ಗೊಂದಲ ಮೂಡಿಸುತ್ತವೆ. ಸರಳವಾಗಿ ತೆರಿಗೆ ಪಾವತಿ ಮಾಡಬಹುದುದಾಗಿದೆ. [ಸರಳವಾಗಿ ತೆರಿಗೆ ಪಾವತಿ ಮಾಡುವುದು ಹೇಗೆ?]

English summary
As the deadline for salaried employees to file income tax returns approaches, the I-T department will operate special counters at Gayatri Vihar, Palace Grounds in Bangalore from July 29 till the last date July 31. The counters will remain open between 9.30 am and 5 pm on all three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X