ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಸೇರಿ 5 ನಗರಗಳಲ್ಲಿ 10 ರು ಪ್ಲಾಸ್ಟಿಕ್ ನೋಟು

By Mahesh
|
Google Oneindia Kannada News

₹10 plastic note to be tried out in five cities
ನವದೆಹಲಿ, ಫೆ.8: ಪ್ರಾಯೋಗಿಕವಾಗಿ 10 ರು ಮುಖಬೆಲೆಯ ಕರೆನ್ಸಿ ನೋಟುಗಳನ್ನು ಐದು ರಾಜ್ಯಗಳಲ್ಲಿ ಚಲಾವಣೆಗೆ ಬಿಡಲಾಗುವುದು ಎಂದು ವಿತ್ತ ಸಚಿವಾಲಯದ ರಾಜ್ಯ ಸಚಿವ ನಾರಾಯಣ ಮೀನಾ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ.

ಕೊಚ್ಚಿ, ಮೈಸೂರು, ಜೈಪುರ, ಶಿಮ್ಲಾ ಹಾಗೂ ಭುವನೇಶ್ವರ ನಗರಗಳಲ್ಲಿ ಮೊದಲ ಬಾರಿಗೆ 10 ರು ಮುಖಬೆಲೆಯ 1 ಕೋಟಿಗೂ ಅಧಿಕ ಪ್ಲಾಸ್ಟಿಕ್ ನೋಟುಗಳು ಚಲಾವಣೆಯಾಗಲಿದೆ. ಇದು ಪ್ರಾಯೋಗಿಕ ಹಂತವಾಗಿ ಜಾರಿಗೆ ಬರಲಿದ್ದು, ಸಾರ್ವಜನಿಕರ ಪ್ರತಿಕ್ರಿಯೆ ನೋಡಿಕೊಂಡು ಇನ್ನುಳಿದ ನಗರಗಳಿಗೆ ವಿಸ್ತರಿಸಲಾಗುವುದು.

2014ರ ಎರಡನೇ ಅವಧಿಯಲ್ಲಿ ಈ ಪ್ಲಾಸ್ಟಿಕ್ ನೋಟುಗಳು ಜನರ ಕೈ ಸೇರಲಿದೆ.ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ನಕಲಿ ನೋಟುಗಳನ್ನು ತಡೆಯಲು ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲಾಗಿತ್ತು. ಹಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಬಿಡುಗಡೆ ಮಾಡಲಾಗಿದೆ. ಎಂದು ಸಚಿವ ಮೀನಾ ಹೇಳಿದ್ದಾರೆ.

ಕಾರ್ಪೊರೇಟ್ ತೆರಿಗೆ ಬಾಕಿ : ಕಾರ್ಪೊರೇಟ್ ಸಂಸ್ಥೆಗಳ ತೆರಿಗೆ ಬಾಕಿ ವಸೂಲಿಗಾಗಿ ಆರು ಅಂಶಗಳ ಯೋಜನೆ ಹಾಕಿಕೊಳ್ಳಲಾಗಿದೆ. ಡಿಸೆಂಬರ್ 31, 2013ರ ಗಣತಿಯಂತೆ ಒಟ್ಟಾರೆ ಕಾರ್ಪೊರೇಟ್ ಸಂಸ್ಥೆಗಳು ಸುಮಾರು 2.46 ಲಕ್ಷ ಕೋಟಿ ರು ಬಾಕಿ ಉಳಿಸಿಕೊಂಡಿವೆ. ಸುಮಾರು 45 ಕಾರ್ಪೊರೇಟ್ ಸಂಸ್ಥೆಗಳ ಮೇಲೆ 500 ಕೋಟಿ ರು ಮೌಲ್ಯದ ನೇರ ತೆರಿಗೆ ಪ್ರಕರಣಗಳು ವಿಚಾರಣೆ ಹಂತದಲ್ಲಿದೆ ಎಂದು ಸಚಿವ ಜೆಡಿ ಸೀಲಂ ಹೇಳಿದರು.

ಕಪ್ಪು ಹಣ ಹಾಗೂ ನಕಲಿ ನೋಟ್ ಹಾವಳಿಗಳ ನಿಯಂತ್ರಣಕ್ಕೆ ಆರ್ ಬಿಐ ಮಹತ್ವದ ಹೆಜ್ಜೆಯಿಟ್ಟಿದೆ. 500 ಹಾಗೂ 1,000 ರೂಪಾಯಿಗಳ ಕರೆನ್ಸಿ ನೋಟ್ ಗಳು ಸೇರಿದಂತೆ 2005ಕ್ಕಿಂತ ಮೊದಲು ಮುದ್ರಣಗೊಂಡಿರುವ ಎಲ್ಲಾ ಕರೆನ್ಸಿನೋಟ್ ‌ಗಳ ಚಲಾವಣೆಯನ್ನು ಹಿಂಪಡೆಯುವ ನಿರ್ಧಾರಕ್ಕೆ ಆರ್ ಬಿಐ ಬಂದಿತ್ತು. ಮಾರ್ಚ್ 31,2014ರ ಬಳಿಕ ಈ ಕಾರ್ಯವನ್ನು ಆರಂಭಿಸಲಾಗುತ್ತದೆ. [ಹೆಚ್ಚಿನ ಮಾಹಿತಿ ಇಲ್ಲಿ ಓದಿ]

2014ರ ಜನವರಿ 1 ರಿಂದ ಬ್ಯಾಂಕ್ ಗಳಲ್ಲಿ ಈ ರೀತಿ ಅಡ್ಜೆಸ್ಟ್ ಮೆಂಟ್ ನಡೆಯುವುದಿಲ್ಲ. ಪೆನ್ನು ಹಾಗೂ ಇತರೆ ಶಾಹಿಯಾ ಲೇಖನಿಗಳಿಂದ ಬರೆದ, ಗೀಚಿದ ನೋಟುಗಳನ್ನು ಸ್ವೀಕರಿಸದಂತೆ ಆರ್ ಬಿಐ ನಿರ್ದೇಶನ ನೀಡಿದೆ. ಇಂಥ ನೋಟುಗಳನ್ನು ತ್ಯಜಿಸುವಂತೆ ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟಾಜ್ಞೆ ಹೊರಡಿಸಿದೆ. [ಹೆಚ್ಚಿನ ಮಾಹಿತಿ ಓದಿ]

English summary
Plastic notes in the denomination of ₹10 will be introduced in five cities including Mysore on a pilot basis, Minister of State for Finance Namo Narayan Meena told to the Lok Sabha on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X