ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಡೊಕೊಮೊ ಗ್ರಾಹಕರಿಗೆ ಕಹಿಸುದ್ದಿ

By Ashwath
|
Google Oneindia Kannada News

tata docomo
ನವದೆಹಲಿ.ಏ.26:ಟಾಟಾ ಡೊಕೊಮೊ ಗ್ರಾಹಕರಿಗೆ ಕಹಿಸುದ್ದಿ. ಟಾಟಾ ಟೆಲಿಸರ್ವಿಸಸ್‌‌‌ನಲ್ಲಿರುವ ಶೇ.26.5 ಪಾಲನ್ನು ಎನ್‌‌ಟಿಟಿ ಡೊಕೊಮೊ ಮಾರಾಟ ಮಾಡುವುದಾಗಿ ತಿಳಿಸಿದೆ.ಜೂನ್‌‌ ವೇಳೆಗೆ ಈ ಮಾರಾಟ ಪ್ರಕ್ರಿಯೆ ಪೂರ್ಣ‌ವಾಗಲಿದೆ ಎಂದು ಎನ್‌ಟಿಟಿ ಡೊಕೊಮೊ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಟಾಟಾ ಟೆಲಿಸರ್ವಿಸಸ್‌ನಲ್ಲಿ ಎನ್‌ಟಿಟಿ ಡೊಕೊಮೊ ಎರಡನೇ ಅತಿ ಹೆಚ್ಚಿನ ಪಾಲನ್ನು ಹೊಂದಿದ್ದು ಇದೀಗ ಷೇರು ಮಾರಾಟ ಮಾಡಿದ್ದಲ್ಲಿ ಟಾಟಾಗೆ ಮಾರುಕಟ್ಟೆಯಲ್ಲಿ ಭಾರೀ ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಟಾಟಾ ಟೆಲಿಸರ್ವಿಸಸ್‌ ಪ್ರಸ್ತುತ 26 ಸಾವಿರ ಕೋಟಿ ಸಾಲದಲ್ಲಿದೆ. ಈಗ ಎನ್‌ಟಿಟಿ ಡೊಕೊಮೊ ಪಾಲನ್ನು ಮಾರಿದ್ದಲ್ಲಿ 25,947 ಕೋಟಿ ರೂ. ಹೊರೆ ಟಾಟಾ ಟೆಲಿ ಸರ್ವಿಸಸ್‌ ಮೇಲೆ ಬೀಳಲಿದೆ. ಎನ್‌ಟಿಟಿ ಡೊಕೊಮೊ ಮಾರಾಟ ಮಾಡಲಿರುವ ಷೇರನ್ನು ಯಾವ ಕಂಪೆನಿ ಖರೀದಿಸಲಿದೆ ಎನ್ನುವುದು ಇನ್ನೂ ಎರಡು ಕಂಪೆನಿಗಳು ಬಹಿರಂಗಪಡಿಸಿಲ್ಲ.

ಟಾಟಾ ಟೆಲಿ ಸರ್ವಿಸಸ್‌ನಲ್ಲಿ ಪ್ರಸ್ತುತ ಶೇ.36.17 ಪಾಲನ್ನು ಟಾಟಾ ಸನ್ಸ್‌‌, ಎನ್‌ಟಿಟಿ ಡೊಕೊಮೊ ಶೇ.26, ಟಾಟಾ ಕಮ್ಯೂನಿಕೇಶನ್‌ ಶೇ.9.33‌, ಟೀಮ್‌ ಸೆಕ್‌ ಶೇ.6.45, ಟಾಟಾ ಪವರ್‌ ಶೇ.6.97, ಟಾಟಾ ಇಂಡಸ್ಟ್ರೀಸ್‌ ಶೇ.5.46 ಹೊಂದಿದ್ದರೆ, ಶೇ.9.62ರಷ್ಟು ಪಾಲು ಉಳಿದ ಷೇರುದಾರರ ಕೈಯಲ್ಲಿದೆ.

ಜಪಾನ್‌ ಕಂಪೆನಿ 2009 ಮಾರ್ಚ್‌ನಲ್ಲಿ 2.7 ಬಿಲಿಯನ್‌ ಡಾಲರ್‌(ಅಂದಿನ ದರ ಅಂದಾಜು 13,070 ಕೋಟಿ ರೂ) ನೀಡಿ ಟಾಟಾ ಟೆಲಿ ಸರ್ವಿಸಸ್‌ನಲ್ಲಿ ಶೇ.26.5 ಪಾಲನ್ನು ಖರೀದಿಸಿತ್ತು. ಖರೀದಿ ವೇಳೆ ಟಾಟಾ ಜೊತೆಗೆ ಕೆಲವೊಂದು ಒಪ್ಪಂದಗಳನ್ನುಎನ್‌ಟಿಟಿ ಡೊಕೊಮೊ ಮಾಡಿಕೊಂಡಿತ್ತು.ಆದರೆ ಒಪ್ಪಂದ ಪ್ರಕಾರ ಟಾಟಾ ಕಂಪೆನಿ ಗುರಿಯನ್ನು ತಲುಪಲು ವಿಫಲವಾದ ಹಿನ್ನಲೆಯಲ್ಲಿ ಈ ಕಂಪೆನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಎನ್‌ಟಿಟಿ ಡೊಕೊಮೊ ಹೇಳಿದೆ.[ಟಿವಿ ಜಾಹೀರಾತಿಗೂ ಸೆನ್ಸಾರ್ ಅಗತ್ಯ]

ಇತ್ತೀಚೆಗೆ ಮುಕ್ತಾಯಗೊಂಡ ಸ್ಪೆಕ್ಟ್ರಂ ಹಂಚಿಕೆಯ ಪ್ರಕ್ರಿಯೆಯಲ್ಲೂ ಟಾಟಾ ಟೆಲಿ ಸರ್ವಿಸಸ್‌ ಸ್ಪೆಕ್ಟ್ರಂ ಖರೀದಿಸಲು ಅಷ್ಟೇನೂ ಆಸಕ್ತಿ ತೋರಿಸಿರಲಿಲ್ಲ. ಸಿಡಿಎಂಎ ಮತ್ತು ಜಿಎಸ್‌‌ಎಂ ಸೇವೆಗಳನ್ನು ಟಾಟಾ ಟೆಲಿಸರ್ವಿಸ್‌ ದೇಶದಲ್ಲಿ ನೀಡುತ್ತಿದ್ದು,ಪ್ರಸ್ತುತ 6.3 ಕೋಟಿ ಬಳಕೆದಾರರನ್ನು ಹೊಂದಿದೆ.

English summary
NTT DoCoMo, Japan’s biggest telecom operator by subscribers, has said it will sell its entire 26.5 per cent stake in Tata Teleservices Ltd (TTSL), thus exiting India five years after it entered the market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X