ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಕಿಯಾ ಸಿಇಒ ಆಗಿ ಭಾರತೀಯ ಮೂಲದ ರಾಜೀವ್

By Mahesh
|
Google Oneindia Kannada News

ಬೆಂಗಳೂರು, ಏ.29: ಫಿನ್ಲೆಂಡ್ ಮೂಲದ ಟೆಲಿಕಾಂ ಉತ್ಪನ್ನ ತಯಾರಿಕಾ ಸಂಸ್ಥೆ ನೋಕಿಯಾ ಸಾರಥ್ಯವನ್ನು ಭಾರತೀಯ ಮೂಲದ ರಾಜೀವ್ ಸೂರಿ ಅವರು ಮಂಗಳವಾರ ವಹಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ಪದವಿ ಪಡೆದಿರುವ ಸೂರಿ ಅವರು ನೋಕಿಯಾದಲ್ಲಿ ತಮ್ಮ ಯಶಸ್ವಿನ ಪಯಣ ಆರಂಭವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ನೋಕಿಯಾ ಸಲ್ಯೂಷನ್ಸ್ ಹಾಗೂ ನೆಟ್ವರ್ಕ್ಸ್ ವಿಭಾಗವನ್ನು ಮೈಕ್ರೋಸಾಫ್ಟ್ ಸಂಸ್ಥೆಗ್ 7.2 ಯುಎಸ್ ಡಾಲರ್ ಗೆ ಮಾರಾಟ ಮಾಡುವುದಕ್ಕೂ ಮುನ್ನ ಈ ವಿಭಾಗಕ್ಕೆ 46 ವರ್ಷದ ರಾಜೀವ್ ಅವರು ಮುಖ್ಯಸ್ಥರಾಗಿದ್ದರು. ನೋಕಿಯಾ ಸಿಇಒ ಆಗಿದ್ದ ಸ್ಟೀಫನ್ ಎಲೋಪ್ ಅವರು ಮೈಕ್ರೋಸಾಫ್ಟ್ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷರಾಗಿ ಸೇರಿದ್ದು, ಎಲೋಪ್ ಸ್ಥಾನಕ್ಕೆ ಸೂರಿ ಬಂದಿದ್ದಾರೆ.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಅವರಂತೆ ಸೂರಿ ಅವರು ಕೂಡಾ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡವರಾಗಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪಟ್ಟಿಗೆ ಸೂರಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

Nokia names networks head Rajeev Suri as CEO

ಪೆಪ್ಸಿಕೋ ಚೇರ್ಮನ್ ಇಂದ್ರಾ ನೂಯಿ, ರೆಕಿಟ್ ಬೆಂಕಿಸರ್ ಮುಖ್ಯಸ್ಥ ರಾಕೇಶ್ ಕಪೂರ್, ಮಾಸ್ಟರ್ ಕಾರ್ಡ್ ಅಧ್ಯಕ್ಷ, ಸಿಇಒ ಅಜಯ್ ಬಂಗಾ, ಡ್ಯೂಯಶ್ ಬ್ಯಾಂಕ್ ಅಧಿಕಾರಿ ಅಂಶು ಜೈನ್ ಇನ್ನಿತರ ಪ್ರಮುಖರಾಗಿದ್ದಾರೆ.

ರಾಜೀವ್ ಬಗ್ಗೆ ಒಂದಿಷ್ಟು: 1967ರಲ್ಲಿ ಭಾರತದಲ್ಲಿ ಜನಿಸಿದ ರಾಜೀವ್ ಅವರು ಯಶಪಾಲ್ ಹಾಗೂ ಆಶಾ ಸೂರಿ ದಂಪತಿಯ ಪುತ್ರ. ಕುವೈಟಿನಲ್ಲಿ ಬಾಲ್ಯವನ್ನು ಕಳೆದ ರಾಜೀವ್ ಅವರು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 1989ರ ಬ್ಯಾಚಿನ ವಿದ್ಯಾರ್ಥಿಯಾಗಿದ್ದರು. ಸದ್ಯ ಪತ್ನಿ ನೀನಾ(ಅವರು ಕೂಡಾ ಉದ್ಯಮಿ) ಇಬ್ಬರು ಪುತ್ರರಾದ ಅಂಕಿತ್ (20), ಅನಿಶ್(17) ಅವರ ಜತೆ ಹೆಲ್ಸಿಂಕಿ, ಫಿನ್ಲೆಂಡ್ ನಲ್ಲಿ ನೆಲೆಸಿದ್ದಾರೆ.

ರಾಜೀವ್ ಅವರು ಭಾರತ ಸೇರಿದಂತೆ ಕುವೈಟ್, ಫಿನ್ಲೆಂಡ್, ಯುಕೆ, ನೈಜಿರಿಯಾ, ಜರ್ಮನಿ ಹಾಗೂ ಸಿಂಗಪುರದಲ್ಲಿ ನೆಲೆ ಕಂಡುಕೊಂಡಿದ್ದರು. ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ರಾಜೀವ್ ಅವರು ಮ್ಯೂಸಿಕ್ ಪ್ರೇಮಿ ಕೂಡಾ.

ನೋಕಿಯಾ ಸಂಸ್ಥೆ ಸೇರುವ ಮೊದಲು ಇಸಿಎಲ್ (ಇಂಡಿಯಾ), ಆರ್ ಪಿಜಿ ಸಮೂಹ ಸಂಸ್ಥೆ, ನೈಜಿರಿಯಾದ ಚರ್ಚ್ ಗೇಟ್ ಮುಂತಾದ ಕಡೆ ಉದ್ಯೋಗಿಯಾಗಿದ್ದರು. 1995ರಲ್ಲಿ ನೋಕಿಯಾ ಸೇರಿದ ಸೂರಿ ಅವರು ನೋಕಿಯಾ ಸಿಮೆನ್ಸ್ ನೆಟ್ವರ್ಕ್ ಸರ್ವಿಸ್ ವಿಭಾಗದ ಅಭಿವೃದ್ಧಿಗೆ ಕಾರಣಕರ್ತರಾದರು. 2009ರಲ್ಲಿ ಇದೆ ನೋಕಿಯಾ ಸಲ್ಯೂಷನ್ಸ್ ಅಂಡ್ ನೆಟ್ವರ್ಕ್ಸ್(ಎನ್ ಎಸ್ ಎನ್) ಮುಖ್ಯಸ್ಥರಾದರು. ನೋಕಿಯಾ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

English summary
Finnish telecommunications equipment maker Nokia today appointed India-born Rajeev Suri as its President and CEO.Like the newly appointed Microsoft CEO Satya Nadella, Suri is also a MIT, Mangalore University graduate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X