ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಕಿಯಾ ಬಂದ್, ತಿರುಗಿ ಬಿದ್ದ ಉದ್ಯೋಗಿಗಳು

|
Google Oneindia Kannada News

ಚೆನೈ, ಅ.8 : ಒಂದು ಕಾಲದಲ್ಲಿ ದೇಶದ ನಂಬರ್‌ ಒನ್‌ ಹ್ಯಾಂಡ್‌ಸೆಟ್‌ ತಯಾರಿಕಾ ಕಂಪನಿ ಸ್ಥಾನ ಪಡೆದುಕೊಂಡಿದ್ದ ನೋಕಿಯಾ ಇದೀಗ ಆತಂಕದ ದಿನಗಳನ್ನು ಎದುರಿಸುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ.

ಶ್ರೀಪೆರಂಬುದೂರು ಬಳಿಯ ನೋಕಿಯಾ ಕಚೇರಿ ಉತ್ಪಾದನಾ ಘಟಕಕ್ಕೆ ಬಾಗಿಲು ಹಾಕಲಾಗಿದ್ದು ಅಲ್ಲಿನ ನೌಕರರು ಕಾನೂನು ಹೋರಾಟಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ.[ಮೈಕ್ರೋಸಾಫ್ಟ್ ಗರ್ಭ ಸೇರಿದ ನೋಕಿಯಾ ಬಗ್ಗೆ]

nokia

ಸದ್ಯ ಘಟಕದಲ್ಲಿ 9೦೦ ಉದ್ಯೋಗಿಳು ಕೆಲಸ ಮಾಡುತ್ತಿದ್ದಾರೆ. ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ 6,600 ಜನರಲ್ಲಿ 5,700 ಜನರಿಗೆ ನಿವೃತ್ತಿ ಸೌಲಭ್ಯ ಕಲ್ಪಿಸಿಕೊಡುತ್ತೇನೆ ಎಂದು ಕಂಪನಿ ಹೇಳಿತ್ತು. ಆದರೆ ಇದ್ದಕ್ಕಿದ್ದಂತೆ ಚೆನೈ ಘಟಕವನ್ನು ಬರುವ ನವೆಂಬರ್‌ನಿಂದ ಸಂಪೂರ್ಣ ಮುಚ್ಚಲಾಗುವುದು ಎಂದು ಹೇಳಿ ಉದ್ಯೋಗಿಗಳನ್ನು ನಡುನೀರಲ್ಲಿ ಕೈಬಿಟ್ಟಿದೆ ಎಂದು ನೋಕಿಯಾದ ಉದ್ಯೋಗಿಗಳ ಒಕ್ಕೂಟ ಆರೋಪಿಸಿದೆ.[ಮೈಕ್ರೋಸಾಫ್ಟ್ ನಿಂದ 18 ಸಾವಿರ ಉದ್ಯೋಗ ಕಡಿತ]

ಕಂಪನಿ ತೀರ್ಮಾನದಿಂದ ಕೆರಳಿರುವ ನೋಕಿಯಾ ಉದ್ಯೋಗಿಗಳ ಘಟಕದ ಅಧ್ಯಕ್ಷ ಸಂಗಮ್‌ ಮತ್ತು ಅಲ್ಲಿನ ಎಂಎಲ್‌ಎ ಸುಂದರ್‌ರಾಜನ್‌, ಇದು ಸಂಪೂರ್ಣವಾಗಿ ಕಾನೂನು ಬಾಹಿರ ನೀತಿ. ಪರೋಕ್ಷವಾಗಿ ನೀವೆಲ್ಲ ಕಂಪನಿ ತೊರೆಯಿರಿ ಎಂಬ ಆದೇಶ ನೀಡಿದಂತೆ ಇದೆ. ನಮ್ಮ ಭವಿಷ್ಯ ಈಗ ಡೋಲಾಯಮಾನವಾಗಿದೆ. ಸಿಐಟಿಯು ನೇತೃತ್ವದಲ್ಲಿ ಈ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಾರ್ಮಿಕ ಇಲಾಖೆಯೊಂದಿಗೆ ಈ ಬಗ್ಗೆ ಮಾತನಾಡಲಾಗುವುದು. ಎಲ್ಲ ಉದ್ಯೋಗಿಗಳೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು. ಅಲ್ಲದೇ ಕಂಪನಿ ವಿರುದ್ಧ ಕಾನೂನು ಹೋರಾಟ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.[ಚೆನ್ನೈ: ನೋಕಿಯಾ ಉತ್ಪಾದನಾ ಘಟಕ ಬಹುತೇಕ ಸ್ಥಗಿತ]

ಹೇಳದೇ ಕೇಳದೇ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ. ಈಗಿರುವ 900 ಜನರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಘಟಕವನ್ನು ಮುಚ್ಚಲಾಗುವುದು ಎಂದಷ್ಟೇ ಕಂಪನಿ ಹೇಳುತ್ತಿದೆ ಆದರೆ ಉದ್ಯೋಗಿಗಳ ಭವಿಷ್ಯ ಏನೆಂಬುದನ್ನು ಇಲ್ಲಿಯವರೆಗೂ ಸ್ಪಷ್ಟಪಡಿಸಿಲ್ಲ ಎಂದು ನೋಕಿಯಾ ಉದ್ಯೋಗಿಗಳ ಸಮಿತಿ ಅಡೈಸರ್‌ ಎಂ. ಉದಯಕುಮಾರ್ ಆರೋಪಿಸಿದ್ದಾರೆ.

ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಪರೋಕ್ಷವಾಗಿ ಘಟಕದಿಂದ ಕೆಲಸ ಪಡೆದಿದ್ದರು. ಇದರಲ್ಲಿ ಸುಮಾರು ಶೇ.60 ರಷ್ಟು ಮಹಿಳೆಯರೇ ಇದ್ದರು. ಈಗ ಇವರೆಲ್ಲರ ಭವಿಷ್ಯಕ್ಕೆ ಉತ್ತರವಿಲ್ಲವಾಗಿದ್ದು ಕಾನೂನು ಹೋರಾಟ ಅನಿವಾರ್ಯ ಎಂದು ಉದ್ಯೋಗಿಗಳ ಸಮಿತಿ ಹೇಳಿದೆ.

English summary
A day after Nokia announced its decision to suspend operations at its facility in Sriperumbudur near Chennai, the employees' Union is looking at "legal options." According to Nokia India Employees Union, there are about 900 employees still working at the factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X