ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇ ಕಾಮರ್ಸ್ ಕ್ಷೇತ್ರದವರಿಗೆ ಎಫ್ ಡಿಐ ಭಯ ಬೇಡ'

By Mahesh
|
Google Oneindia Kannada News

ನವದೆಹಲಿ, ಸೆ.9: ಚಿಲ್ಲರೆ ಅಂಗಡಿ ನಡೆಸಿಕೊಂಡು ನಿತ್ಯ ಬದುಕು ಸಾಗಿಸುತ್ತಿರುವ ದೇಶದ ಲಕ್ಷಾಂತರ ಮಂದಿಗೆ ಸಿಹಿ ಸುದ್ದಿ ನೀಡಿದ ಎನ್ ಡಿಎ ಸರ್ಕಾರ ಈಗ ಇ ಕಾಮರ್ಸ್ ಕ್ಷೇತ್ರದವರಿಗೆ ಸಂತಸ ವಿಷಯವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ನೀಡಿದ್ದಾರೆ. ಮಲ್ಟಿ ಬ್ರ್ಯಾಂಡ್‌ ರೀಟೇಲ್‌ ಹಾಗೂ ಇ ಕಾಮರ್ಸ್ ಕ್ಷೇತ್ರದಲ್ಲಿ ಎಫ್ ಡಿಐಗೆ ಅನುಮತಿ ನೀಡುವುದಿಲ್ಲ ಎಂದಿದ್ದಾರೆ.

ಬಹುವಿಧ ಸರಕುಗಳ ಚಿಲ್ಲರೆ ವ್ಯಾಪಾರ(ಮಲ್ಟಿ ಬ್ರ್ಯಾಂಡ್‌ ರೀಟೇಲ್‌) ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ)ಗೆ ಅನುಮತಿ ನೀಡುವುದರ ಬಗ್ಗೆ ಇದ್ದ ಊಹಾಪೋಹಗಳು, ಆತಂಕಗಳನ್ನು ಸಚಿವೆ ನಿರ್ಮಲಾ ಸೀತಾರಾಮನ್ ನಿವಾರಿಸಿದ್ದಾರೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು 100 ದಿನಗಳ ಅವಧಿಯಲ್ಲಿ ತಮ್ಮ ಇಲಾಖೆ ಸಾಧಿಸಿದ ಪ್ರಗತಿ ಕುರಿತು ವಿವರ ನೀಡುವ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.[ಚಿಲ್ಲರೆ ಮಾರುಕಟ್ಟೆ ಎಫ್ ಡಿಐ: ಲಾಭವೋ? ನಷ್ಟವೋ?]

No FDI in multi-brand retail, e-commerce: Sitharaman

ಬಹುವಿಧ ಸರಕುಗಳ ಚಿಲ್ಲರೆ ವ್ಯಾಪಾರದಲ್ಲಿ ಎಫ್ಡಿಐಗೆ ಅನುಮತಿ ನೀಡುವ ವಿಚಾರದಲ್ಲಿ ಬಿಜೆಪಿ ಈ ಹಿಂದೆಯೇ ಪ್ರಣಾಳಿಕೆಯಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿತ್ತು. ಅದರ ಆಧಾರದಲ್ಲೇ ಚುನಾವಣೆಯಲ್ಲಿ ಗೆದ್ದುಬಂದಿದೆ ಎಂದು ಹೇಳಿದರು. ಮಲ್ಟಿ ಬ್ರ್ಯಾಂಡ್‌ ರೀಟೇಲ್‌ ಕ್ಷೇತ್ರದಲ್ಲಿ ಶೇ.51ರಷ್ಟು ಎಫ್ಡಿಐಗೆ ಹೂಡಿಕೆಗೆ ಹಿಂದಿನ ಯುಪಿಎ ಸರ್ಕಾರ ಅನುಮತಿ ನೀಡಿತ್ತು. [ಮೆಗಾ ಸ್ಟೋರ್ ಗಳ ಮೇಲೆ ಬಿಜೆಪಿ ಗದಾ ಪ್ರಹಾರ?]

ಇದಕ್ಕೆ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಭಾರಿ ಪ್ರತಿರೋಧ ಒಡ್ಡಿದ್ದವು. ಇ ಕಾಮರ್ಸ್ ಹಾಗೂ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ಹಿಂಬಾಗಿಲಿನಿಂದ ಎಫ್ ಡಿಐ ತರಲು ಬಿಜೆಪಿ ಸರ್ಕಾರ ಸಜ್ಜಾಗಿದೆ ಎಂಬ ಸುದ್ದಿ ಹಬ್ಬಿತ್ತು. ಅದರೆ, ಸಚಿವೆ ನಿರ್ಮಲಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.(ಐಎಎನ್ ಎಸ್)

English summary
The government will not allow foreign direct investment (FDI) in multi-brand retail, Commerce and Industry Minister Nirmala Sitharaman said Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X