ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಲಿದ್ದ ಎಲ್ಲಾ ಷೇರುಗಳನ್ನು ಅಡ ಇಟ್ಟ ವಿಮಾನ ಸಂಸ್ಥೆ ಬಾಸ್

By Mahesh
|
Google Oneindia Kannada News

ನವದೆಹಲಿ, ಜ. 14: ಕಿಂಗ್ ಫಿಷರ್ ಏರ್ ಲೈನ್ಸ್ ನಂತೆ ಜೇಟ್ ಏರ್ ವೇಸ್ ಸಂಸ್ಥೆ ಕೂಡಾ ಸಾಲದ ಹೊರೆ ಹೊತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಸಂಸ್ಥೆಯ ಪ್ರವರ್ತಕ, ಚೇರ್ಮನ್ ನರೇಸ್ ಗೋಯಲ್ ಅವರು ತಮ್ಮ ಬಳಿ ಇರುವ 2,600 ಕೋಟಿ ರು ಮೌಲ್ಯದ ಶೇ 51 ರಷ್ಟು ಷೇರುಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕಿನಲ್ಲಿ ಅಡ ಇಟ್ಟಿದ್ದಾರೆ.

ನಮ್ಮ ಸಂಸ್ಥೆಯ ಚೇರ್ಮನ್ ಗೋಯಲ್ ಅವರು ಶೇ 51ರಷ್ಟು ಅಥವಾ 57,933,665 ಷೇರುಗಳನ್ನು ಜ.8ರಿಂದ ಅನ್ವಯವಾಗುವಂತೆ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಅಡ ಇಟ್ಟಿದ್ದಾರೆ ಎಂದು ಜೆಟ್ ಏರ್ ವೇಸ್ ಪ್ರಕಟಿಸಿದೆ. ಆದರೆ, ಅಡ ಇಟ್ಟಿದ್ದೇಕೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

ಯುಎಇ ಮೂಲದ ಇತಿಹಾಡ್ ಸಂಸ್ಥೆ ಶೇ 24ರಷ್ಟು ಪಾಲು ಹೊಂದಿದ್ದು, ಮಿಕ್ಕ ಷೇರುಗಳು ರಿಟೈಲ್ ಬಂಡವಾಳ ಹೂಡಿಕೆದಾರರದ್ದಾಗಿದೆ. ['ಸಹನೆಯ ಕಟ್ಟೆ ಒಡೆದರೆ ಸಂಸದನೂ ಲೆಕ್ಕಕ್ಕಿಲ್ಲ']

Naresh Goyal pledges his entire 51% stake in Jet Airways to Punjab National Bank

ಈ ಸುದ್ದಿ ಹೊರ ಬೀಳುತ್ತಿದ್ದಂತೆ ಜೆಟ್ ಏರ್ ವೇಸ್ ಷೇರುಗಳು ಶೇ 4 ರಿಂದ 5 ರಷ್ಟು ಏರಿಕೆ ಕಂಡಿದೆ. ಬೆಳಗ್ಗೆ 464.25 ಮುಖಬೆಲೆಯಂತೆ 5,274 ಮಾರುಕಟ್ಟೆ ಮೌಲ್ಯ ಹೊಂದಿದೆ. [ಜೆಟ್‌ ಏರ್ ವೇಸ್‌ ಮಾಲೀಕನ ಪತ್ನಿ ದಂಡಕಟ್ಟಿದ್ದೇಕೆ?]

ಸೆಪ್ಟೆಂಬರ್ ತ್ರೈಮಾಸಿಕದ ವರದಿಯಂತೆ ಜೆಟ್ ಏರ್ ವೇಸ್ ಮೇಲೆ ಸರಿ ಸುಮಾರು 9,794 ಕೋಟಿ ರು ಸಾಲದ ಹೊರೆ ಇದೆ. ಜೆಟ್ ಏರ್ ವೇಸ್ ಗೆ ಹೆಚ್ಚಿನ ಸಾಲವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದಲೇ ಪಡೆದುಕೊಳ್ಳಲಾಗಿದೆ. ಕಳೆದ ಡಿಸೆಂಬರ್ 1 ರಿಂದ ಕಡಿಮೆ ಪ್ರಯಾಣ ದರದ ವಿಮಾನಯಾನ ಜೆಟ್ ಲೈಟ್ ಹಾರಾಟ ನಿಲ್ಲಿಸಿದೆ. [ಎಚ್ಎಎಲ್ ನಲ್ಲಿ ಮತ್ತೆ ಸಾರ್ವಜನಿಕ ವಿಮಾನಯಾನ?]

ಮುಂಬೈ ಮೂಲದ ಜೆಟ್ ಏರ್ ವೇಸ್ ಸಂಸ್ಥೆ ಯ ಒಟ್ಟು 113 ವಿಮಾನಗಳು ಚಾಲನೆಯಲ್ಲಿವೆ. ಈ ಪೈಕಿ 26 ಮಾತ್ರ ಸಂಸ್ಥೆಗೆ ಸೇರಿದ್ದರೆ ಮಿಕ್ಕ 87 ಲೀಸ್ ಪಡೆದುಕೊಂಡಿದ್ದಾಗಿದೆ.(ಗುಡ್ ರಿಟರ್ನ್ಸ್.ಇನ್)

English summary
Jet Airways main promoter and chairman Naresh Goyal has pledged his entire shareholding in the carrier of 51 per cent, valued at over Rs 2,600 crore, to state-run Punjab National Bank, reported PTI. Jet Airways stock plunged 4 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X