ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಂಟ್ ಕಾಸಲ್ ಹೊಸ ಪ್ರಚಾರ "ಈ ಸಂಜೆ ನಿನ್ನದೇ"

By Rajendra
|
Google Oneindia Kannada News

ಬೆಂಗಳೂರು, ಜು. 26: ಜಾನ್ ಡಿಸ್ಟಿಲರಿ ಪ್ರೈವೆಟ್ ಲಿಮಿಟೆಡ್ ಉತ್ಪನ್ನವಾದ ಮಾಂಟ್ ಕಾಸಲ್ ಜನರಿಗಾಗಿ ಒಂದು ಹೊಸ ಪ್ರಚಾರವನ್ನು ಜಾರಿಗೆ ತಂದಿದೆ "ಈ ಸಂಜೆ ನಿನ್ನದೇ" ಎಂಬ ಹೊಸ ಉದ್ಘೋಷಣೆಯನ್ನು ಮಾಂಟ್ ಕಾಸಲ್ ಶುರು ಮಾಡಿದೆ.

ಈ ಹೊಸ ಪ್ರಚಾರ ಹೊಸ ಡಿಸೈನ್ ಮತ್ತು ಪರಿಕಲ್ಪನೆ ಮಾಂಟ್ ಕಾಸಲ್ ಕೆಳ ಮಧ್ಯಮ ವರ್ಗದವರಲ್ಲಿ ಯಾವ ತರಹ ಆಶಾವಾದವನ್ನು ಮೂಡಿಸುತ್ತದೆ ಎಂಬುವುದನ್ನು ಬಿಂಬಿಸುತ್ತದೆ. ದಿನದ ದಣಿವನ್ನು ಒಬ್ಬ ವ್ಯಕ್ತಿ ಯಾವ ತರಹ ಮರೆಯುತ್ತಾನೆ ಎನ್ನುವುದನ್ನು ಇದು ವಿವರಿಸುತ್ತದೆ.

Mont Castle New campaign
"ಈ ಸಂಜೆ ನಿನ್ನದೇ" ಪ್ರಚಾರವು ಜಾನ್ ಡಿಸ್ಟಿಲರಿಗೆ ಅದರ ಗ್ರಾಹಕರ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಈ ಮೂಲಕ ಜಾನ್ ಡಿಸ್ಟಿಲರಿಯ ಗ್ರಾಹಕರನ್ನು ಬ್ರ್ಯಾಂಡ್ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ. ತನ್ನ ಗ್ರಾಹಕರಿಗಾಗಿ ಜಾನ್ ಡಿಸ್ಟಿಲರಿಯು ಹಲವಾರು ಬಗೆಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ. ಬ್ರ್ಯಾಂಡ್ ಬಗ್ಗೆ ಮಾಹಿತಿ ನೀಡುವುದು, ಟ್ಯಾಲೆಂಟ್ ಸ್ಪರ್ಧೆ, ಗಿಫ್ಟ್ ಗಳು, ಹಣಕಾಸಿನ ಬಗ್ಗೆ ಮಾಹಿತಿ ಮೊದಲಾದವುಗಳನ್ನು ಕಂಪೆನಿಯು ನಡೆಸಲಿದೆ.

ಈ ಬ್ರಾಂಡಿಯು ವೈನ್ ಶಾಪ್, ಬಾರ್, ರೆಸ್ಟೋರೆಂಟ್, ವಾಣಿಜ್ಯ ಮಳಿಗೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಇನ್ನು ಈ ಹೊಸ ಪ್ರಚಾರವನ್ನು ವಿಭಿನ್ನವಾಗಿ ನಡೆಸಲಾಗುತ್ತಿದೆ. ವಿವಿಧ ಕಡೆಗಳಲ್ಲಿ ಅತ್ಯಾಕರ್ಷಕವಾದ ಉತ್ಪನ್ನ ಪ್ರದರ್ಶನಕ್ಕೆ ಸೌಲಭ್ಯ, ಸ್ಟಾಂಡೀಗಳು, ಆಕರ್ಷಕ ಬಣ್ಣದ ಪೋಸ್ಟರ್ ಗಳು, ಮೆನು ಕಾರ್ಡ್ ಗಳು, ತೂಗಿ ಹಾಕುವ ಪೋಸ್ಟರ್ ಗಳು, ಟೇಬಲ್ ಮೇಲಿಡಲು ವಿಭಿನ್ನವಾದ ಬೋರ್ಡ್, ಟೆಂಟ್ ಕಾರ್ಡ್, ಕೋಸ್ಟರ್ ಗಳನ್ನು ಇಟ್ಟು ಪ್ರಚಾರ ನಡೆಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. (ಒನ್ಇಂಡಿಯಾ ಬಿಜಿನೆಸ್)

English summary
Mont Castle from the stable of John Distilleries Pvt Ltd (JDPL) is introducing its new brand identity with the tagline – Rule Your Evenings. The new campaign, designed and conceptualised by Push Communications, showcases how Mont Castle is sought as an elixir to the aspirational lower middle class after a long slogging day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X