ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯಾ ಫೆಸಿಫಿಕ್ ನಲ್ಲಿ ಡಾಲರ್ ವಿರುದ್ಧ ರುಪಾಯಿ ಏರಿಕೆ

By Mahesh
|
Google Oneindia Kannada News

ನವದೆಹಲಿ, ಮೇ.26: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೆ ಮೊದಲೇ ಷೇರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಉಂಟಾಗಿದೆ. ಇದರ ಜತೆಗೆ ದಿನೇ ದಿನೇ ಡಾಲರ್ ಎದುರು ರುಪಾಯಿ ಮೌಲ್ಯ ಸುಧಾರಣೆಗೊಳ್ಳುತ್ತಿದೆ. ಏಷ್ಯಾ ಫೆಸಿಫಿಕ್ ನಲ್ಲಿ ಡಾಲರ್ ಎದುರು ರುಪಾಯಿ ತನ್ನ ಮೌಲ್ಯ ವೃದ್ಧಿಸಿಕೊಳ್ಳಲು ಮೋದಿ ಪ್ರಭಾವವೇ ಕಾರಣ ಎನ್ನಲಾಗಿದೆ.

ಮಾರುಕಟ್ಟೆ ಸ್ನೇಹಿ ಮತ್ತು ಆರ್ಥಿಕಾಭಿವೃದ್ಧಿ ಸಾಧನೆಯ ಸಂಕಲ್ಪ ಹೊಂದಿರುವ ಎನ್ ‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲೇ ಷೇರು ಮಾರುಕಟ್ಟೆಗಳು ಕಳೆದ ಕೆಲವು ದಿನಗಳಿಂದಲೇ ಭಾರಿ ಏರುಗತಿಯಲ್ಲಿ ತೊಡಗಿವೆ.ಗುಜರಾತಿನ ಮಾಜಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಪದಗ್ರಹಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಎಎಸ್ ಇ ಸೆನ್ಸೆಕ್ಸ್ ನಲ್ಲಿ ಮತ್ತೊಮ್ಮೆ 25,000 ಅಂಶಗಳನ್ನು ದಾಟುವ ಮೂಲಕ ಭರ್ಜರಿ ಆರಂಭ ಪಡೆದಿದೆ.

ದಿನ ಆರಂಭದಲ್ಲೇ ಬಿಎಸ್ ಇ ಸಂವೇದಿ ಸೂಚ್ಯಂಕ 344 ಅಂಕಗಳನ್ನು ಗಳಿಸಿ ಮುನ್ನುಗ್ಗುತ್ತಿದೆ. ವಿದೇಶಿ ಫಂಡ್ ಹಾಗೂ ರೀಟೈಲ್ ಹೂಡಿಕೆದಾರರಲ್ಲಿ ಹೆಚ್ಚಿನ ವಹಿವಾಟು ಕಂಡು ಬಂದಿದೆ. ಪವರ್(ಇಂಧನ), ಸಾರ್ವಜನಿಕ ವಲಯ ಕಂಪನಿಗಳು(PSUs), ಆಟೋಮೊಬೈಲ್, ರಿಯಲ್ ಎಸ್ಟೇಟ್, ಬ್ಯಾಂಕಿಂಗ್ ಕ್ಷೇತ್ರದ ಷೇರುಗಳು ಹೆಚ್ಚು ಸದ್ದು ಮಾಡುತ್ತಿದ್ದು ಒಟ್ಟಾರೆ ಶೇ 2.13ರಷ್ಟು ಏರಿಕೆ ಕಂಡಿವೆ.

Modi effect? Rupee ahead of all Asia-Pacific currencies

ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಮೇ.16ರಂದು ಸೂಚ್ಯಂಕ 25,000 ಅಂಕಗಳನ್ನು ದಾಟಿತ್ತು.ಈಗ ಮತ್ತೊಮ್ಮೆ ಬಿಎಸ್ ಇ ಹಾಗೂ ಎನ್ ಎಸ್ ಇಯಲ್ಲಿ ಉತ್ತಮ ವಹಿವಾಟು ಕಂಡು ಬಂದಿದೆ. ನಿಫ್ಟಿ 7,400 ಸ್ತರ ಮುಟ್ಟಿ 90.35 ಅಂಶಗಳ ಏರಿಕೆ ಕಂಡು ಬಂದಿದೆ.

ಏಷ್ಯನ್ ಮಾರುಕಟ್ಟೆಯಲ್ಲಿ ಸಂಚಲನ: ಹಾಂಕಾಂಗ್ ಹಾಂಗ್ ಸೆಂಗ್ ಶೇ 0.39 ರಷ್ಟು ಏರಿಕೆ ಕಂಡಿದ್ದರೆ, ಜಪಾನಿನ ನಿಕ್ಕೈ ಶೇ 0.73ರಷ್ಟು ಏರಿದೆ. ಯುಎಸ್ ಡಾ ಜೋನ್ಸ್ ಕೈಗಾರಿಕಾ ಸರಾಸರಿ ಶುಕ್ರವಾರ ಶೇ 0.38 ರಷ್ಟು ಎರಿಕೆ ಕಂಡಿತ್ತು.

ಡಾಲರ್ ಎದುರು ರುಪಾಯಿ ಏರಿಕೆ ಕಂಡಂತೆ ಇಂಡೋನೇಷಿಯಾದ ರುಪಿಯಾ 4.6 %, ನ್ಯೂಜಿಲೆಂಡ್ ನ ಡಾಲರ್ 3.75%, ಅಸ್ಟ್ರೇಲಿಯಾ ಕರೆನ್ಸಿ 3.5% ಏರಿಕೆ ಕಂಡಿದೆ. ಜಪಾನಿನ ಯೆನ್, ದಕ್ಷಿಣ ಕೊರಿಯಾದ ವೊನ್, ಮಲೇಷಿಯಾದ ರಿಂಗಿಟ್ ಶೇ 2-3ರಷ್ಟು ಏರಿಕೆ ಕಂಡಿವೆ. ಫಿಲಿಫೈನ್ಸ್ ನ ಪೆಸೊ 1.6%, ಥೈಲ್ಯಾಂಡ್ ನ ಬಹ್ತ್, ಸಿಂಗಪುರ ಡಾಲರ್ ಕೂಡಾ ಡಾಲರ್ ಎದುದು ಮೌಲ್ಯ ವೃದ್ಧಿಸಿಕೊಂಡಿವೆ.

ಅದರೆ, ಕೆಲ ಸಮಯ ರುಪಾಯಿ ಮೌಲ್ಯ ವರ್ಧನೆಯಿಂದ ಆರ್ಥಿಕ ಕುಸಿತದ ಭೀತಿ ಎದುರಾದರೂ ಶಾಶ್ವತ ಆರ್ಥಿಕ ಭದ್ರತೆ ಕಾಯ್ದುಕೊಳ್ಳುವುದು ಸರ್ಕಾರದ ಮುಂದಿನ ಆರ್ಥಿಕ ನೀತಿ ಮೇಲೆ ಅವಲಂಬಿತವಾಗಿದೆ ಎಂದು ಐಸಿಐಸಿಐ ಬ್ಯಾಂಕ್ ಟ್ರೇಷರಿ ರಿಸರ್ಚ್ ಗ್ರೂಪ್ ಹೇಳಿದೆ (ಪಿಟಿಐ).

English summary
Under the leadership of its prime ministerial candidate Narendra Modi, BJP has recorded an unprecedented victory in the recently held Lok Sabha elections and the Gujarat strongman will be sworn in as Prime Minister on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X