ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2014-15 : ಯಾವುದು ಅಗ್ಗ ಯಾವುದು ತುಟ್ಟಿ

By Mahesh
|
Google Oneindia Kannada News

ನವದೆಹಲಿ, ಜು.10: ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಚೊಚ್ಚಲ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಬಜೆಟ್ ನಂತರ ಜನ ಸಾಮಾನ್ಯರು ಕೇಳುವ ಮೊಟ್ಟ ಮೊದಲ ಪ್ರಶ್ನೆ ಯಾವ ವಸ್ತು ಬೆಲೆ ಏರಿದೆ? ಯಾವುದು ಕಡಿಮೆಯಾಗಿದೆ?. ಯಾವುದು ಅಗ್ಗ ಯಾವುದು ತುಟ್ಟಿ ವಿವರ ಇಲ್ಲಿದೆ:

ಐಷಾರಾಮಿ ವಸ್ತು, ಪ್ರಯಾಣ, ವಾಸ್ತವ್ಯದ ಮೇಲೆ ತೆರಿಗೆ ಹೆಚ್ಚಿಸಿ ದುಬಾರಿಯಾಗಿಸಿರುವ ಜೇಟ್ಲಿ ಅವರು ಎಲೆಕ್ಟ್ರಾನಿಕ್ ಉತ್ಪನ್ನ,, ದೈನಂದಿನ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ. ಈ ಮೂಲಕ ಮಧ್ಯಮ ವರ್ಗದ ಜನ ಆಶೋತ್ತರಕ್ಕೆ ಅನುಗುಣವಾಗಿ ಬಜೆಟ್ ನಲ್ಲಿ ಏರಿಕೆ, ಇಳಿಕೆ ಮಾಡಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.[ಕೇಂದ್ರ ಬಜೆಟ್ 2014-15 ಮುಖ್ಯಾಂಶಗಳು]

Indian General Budget 2014-15

ಯಾವುದು ಏರಿಕೆ:
* ಕಂಪ್ಯೂಟರ್ ಉಪಕರಣಗಳ ಆಮದು ಸುಂಕ ಏರಿಕೆ
* ಸಿಗರೇಟು, ಪಾನ್ ಮಸಾಲ ದರ ಏರಿಕೆ.
* ಸಿಗರೇಟಿನ ಮೇಲಿನ ಅಬಕಾರಿ ಸುಂಕ ಶೇ 11 ರಿಂದ ಶೇ 72ರಷ್ಟು ಏರಿಕೆ.
* ತಂಪು ಪಾನೀಯಗಳ ದರ ಏರಿಕೆ
* ಸೌಂದರ್ಯ ವರ್ಧಕಗಳ ದರ ಇಳಿಕೆ
* ವಿಡಿಯೋ ಕೆಮೆರಾ ದುಬಾರಿ.
* ರೇಡಿಯೋ ಟ್ಯಾಕ್ಸಿ ಮೇಲೆ ಸೇವಾ ತೆರಿಗೆ ಹೇರಿಕೆ
* ಬಾಕ್ಸೈಟ್ ರಫ್ತು ತೆರಿಗೆಯನ್ನ ಶೇ. 10ರಿಂದ ಶೇ.20ಕ್ಕೇರಿಕೆ

ಯಾವುದು ಇಳಿಕೆ:
* ಎಲ್ ಸಿಡಿ ಟಿವಿ ಸುಂಕ ವಿನಾಯಿತಿ.
* ಸೋಪು ಹಾಗೂ ತೈಲ ಉತ್ಪನ್ನಗಳ ದರ ಇಳಿಕೆ
* ಪಾದರಕ್ಷೆಗಳ ಮೇಲಿನ ಅಬಕಾರಿ ಸುಂಕ ಶೇ 12 ರಿಂದ ಶೇ 6ಕ್ಕೆ ಇಳಿಕೆ
* ಸಿಆರ್ ಟಿ ವಿ ದರ ಇಳಿಕೆ.
* ಎಲ್ ಇಡಿ ಪ್ಯಾನೆಲ್ ಮೇಲಿನ ಕಸ್ಟಮ್ ಸುಂಕ ಇಲ್ಲ(19 ಇಂಚಿನ ತನಕ)
* ಪರ್ಸನಲ್ ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ದರ ಇಳಿಕೆ.
* ಕ್ರೀಡಾ ಉತ್ಪನ್ನಗಳ ಮೇಲಿನ ಸುಂಕ ಇಳಿಕೆ
* ವಜ್ರ ಮತ್ತು ಅತ್ಯಮೂಲ್ಯ ಹರಳುಗಳ ದರ ಇಳಿಕೆ
* ರೆಡಿಮೇಡ್ ಹಾಗೂ ಬ್ರಾಂಡೆಡ್ ಬಟ್ಟೆಗಳ ದರ ಇಳಿಕೆ
* ಮೊಬೈಲ್ ಫೋನ್ ದರ ಕಡಿಮೆ
* ಸೌರಶಕ್ತಿ ಉತ್ಪನ್ನಗಳ ಯೂನಿಟ್ ದರ ಇಳಿಕೆ.
* ಮುದ್ರಣ ಮಾಧ್ಯಮಕ್ಕೆ ಯಾವುದೇ ಸೇವಾ ತೆರಿಗೆ ಇಲ್ಲ
* ಉಕ್ಕಿನ ಉತ್ಪನ್ನಗಳ ದರ ಇಳಿಕೆ.
* ಪ್ಯಾಕೇಜಿಂಗ್ ಯಂತ್ರೋಪಕರಣಗಳ ಮೇಲಿನ ಅಬಕಾರಿ ಸುಂಕ ಶೇ 6 ರಷ್ಟು ಇಳಿಕೆ.
* ಮೀಥೈಲ್ ಆಲ್ಕೋಹಾಲ್ ಮೇಲಿನ ಕಸ್ಟಮ್ ಸುಂಕ ಶೇ 5ರಷ್ಟು ಇಳಿಕೆ.

English summary
Union Budget 2014-15 : Finance Minister Arun Jaitley presented union Budget in Lok Sabha today (July.10). check Which commodity is dearer and which is costlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X