ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಸಂಬಳ ಏರಿಕೆ ಶೇ 5-7 ರಷ್ಟು ಮಾತ್ರ!

By Mahesh
|
Google Oneindia Kannada News

ಬೆಂಗಳೂರು, ಫೆ. 27: ಇನ್ಫೋಸಿಸ್ ಸಂಸ್ಥೆ ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿನ ಶಾಕಿಂಗ್ ನ್ಯೂಸ್ ಬುಧವಾರ ಹೊರಬಿದ್ದಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಉದ್ಯೋಗಿಗಳ ಸಂಬಳ ಏರಿಕೆ, ಬೋನಸ್ ಅಂಕಿಗಳು ಏರಿಕೆ ಮಾಡುವಲ್ಲಿ ಸಂಸ್ಥೆ ಧಾರಳತನ ತೋರುವುದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಕಳೆದ ಆರ್ಥಿಕ ವರ್ಷ ಶೇ 8 ರಷ್ಟು ಸಂಬಳ ಏರಿಕೆ ಪಡೆದಿದ್ದ ಉದ್ಯೋಗಿಗಳು ಮುಂದಿನ ವರ್ಷ ಶೇ 5-7 ರಷ್ಟು ಮಾತ್ರ ಸಂಬಳ ಏರಿಕೆ ನಿರೀಕ್ಷಿಸಬಹುದು ಎಂದು ತಿಳಿದು ಬಂದಿದೆ.

ಕಳೆದ 9 ತಿಂಗಳಿನಲ್ಲಿ ಎರಡನೇ ಬಾರಿಗೆ ಸಂಬಳ ಏರಿಕೆ ಮಾಡಲಾಗುತ್ತಿದ್ದು, ಇದು ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷಿತ ಸರಾಸರಿಗೂ ಅತ್ಯಂತ ಕಡಿಮೆ ಪ್ರಮಾಣದ ಏರಿಕೆ ಎನಿಸಲಿದೆ. ಇನ್ಫೋಸಿಸ್ ಇದೇ ಪ್ರಮಾಣಕ್ಕೆ ಬದ್ಧವಾದರೆ, ಅನೇಕ ಉದ್ಯೋಗಿಗಳು ಸಂಸ್ಥೆ ತೊರೆಯುವುದರಲ್ಲಿ ಸಂಶಯವೇ ಇಲ್ಲ ಎಂದು ಅಭಿಪ್ರಾಯ ಕೇಳಿ ಬಂದಿದೆ.

ಬೆಂಗಳೂರು ಮೂಲದ ಸಾಫ್ಟ್ ವೇರ್ ದಿಗ್ಗಜ ಸಂಸ್ಥೆಯಲ್ಲಿ ಶೇ 10-12ರಷ್ಟು ಸಂಬಳ ಏರಿಕೆ ನಿರೀಕ್ಷೆಯಿತ್ತು ಆದರೆ, ಶೇ 5-7 ಯಾರೂ ಊಹಿಸದ ಪ್ರಮಾಣವಾಗಿದೆ. ಸಂಸ್ಥೆ ಇನ್ಮುಂದೆ attrition ಪ್ರಮಾಣ ಏರಿಳಿತವನ್ನು ಹೇಗೆ ಎದುರಿಸುತ್ತದೆ ಕಾದು ನೋಡಬೇಕಿದೆ.

ಆದರೆ, 2015-16ರ ಆರ್ಥಿಕ ವರ್ಷದ ಸಂಬಳ ಏರಿಕೆ ಪ್ರಮಾಣದ ಬಗ್ಗೆ ಗುಟ್ಟು ಬಿಟ್ಟುಕೊಡದ ಎನ್ ಆರ್ ನಾರಾಯಣ ಮೂರ್ತಿ ಅವರ ಸಂಸ್ಥೆಯ ಅಧಿಕಾರಿಗಳು, ನಾವು ಏಪ್ರಿಲ್ 16 ರಂದು ಈ ಬಗ್ಗೆ ಪ್ರಕಟಿಸುತ್ತೇವೆ ಎಂದಿದ್ದಾರೆ. ಜುಲೈ 2013ರಲ್ಲಿ ಸಂಬಳ ಏರಿಕೆ ಕಂಡಾಗ ಕೊನೆಯದಾಗಿ ಉದ್ಯೋಗಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು.

Infosys to give 5-7% salary hikes in FY15
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಮುಂದಿನ ಶಿಬುಲಾಲ್ ಸೇರಿದಂತೆ ಅನೇಕ ಟಾಪ್ ಅಧಿಕಾರಿಗಳು ಸಂಸ್ಥೆ ತೊರೆಯುತ್ತಿದ್ದಾರೆ. ಭಾರತೀಯ ಹೊರ ಗುತ್ತಿಗೆ ಹಾಗೂ ಬಿಸಿಸೆಸ್ ಪ್ರೊಸೆಸಿಸ್ ಔಟ್ ಸೋರ್ಸಿಂಗ್ ಕ್ಷೇತ್ರದಲ್ಲಿ ಶೇ 13-15ರಷ್ಟು ಏರಿಕೆ ಕಾಣಬಹುದು ಎಂದು ನಾಸಾಕಾಂ ಹೇಳಿದ ಮೇಲೆ ನಿರೀಕ್ಷೆಗಳ ಗರಿಗೆದರಿತ್ತು. 2013-14 ರಷ್ಟು ಈ ಪ್ರಮಾಣ ಶೇ 12-14 ರಷ್ಟಿತ್ತು.

ಇನ್ಫೋಸಿಸ್ ನ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಜೂನ್.1 ರಂದು ಮತ್ತೊಮ್ಮೆ ಇನ್ಫೋಸಿಸ್ ಬೋರ್ಡ್ ಗೆ ಮರಳಿದ್ದರು. ಎನ್ ಆರ್ ನಾರಾಯಣ ಮೂರ್ತಿ ಅವರನ್ನು ಕಾರ್ಯಕಾರಿ ಚೇಮರ್ನ್ ಆಗಿ ನೇಮಕ ಮಾಡಿದ ಮೇಲೆ ಇನ್ಫೋಸಿಸ್ ಉದ್ಯೋಗಿಗಳು ಹಾಗೂ ಷೇರುದಾರರಲ್ಲಿ ಹೊಸ ಉತ್ಸಾಹ, ನಿರೀಕ್ಷೆ ಮೂಡಿತ್ತು. ಇನ್ಫೋಸಿಸ್ 3.0 ಅನುಷ್ಠಾನದ ಭಾಗವಾಗಿ ಉದ್ಯೋಗಿಗಳಿಗೆ ಈಗ ಸಂಬಳ ಏರಿಕೆ ಸಿಹಿ ಸುದ್ದಿ ನೀಡಲಾಗಿತ್ತು. ಆದರೆ, ಇದರ ಬೆನ್ನಲ್ಲೇ ಸಾಲು ಸಾಲು ಹಿರಿಯ ಅಧಿಕಾರಿಗಳು ಸಂಸ್ಥೆ ತೊರೆದಿದ್ದರು.

English summary
Infosys, the information technology services giant, told its employees in India on Wednesday they would get pay increments of five to seven per cent in FY15, a source told Business Standard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X