ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ಸಿಬ್ಬಂದಿಗಳಿಗೆ ಫೇಸ್ಬುಕ್ ಬಾಗಿಲು ತೆರೆದ ಸಿಕ್ಕಾ

By Mahesh
|
Google Oneindia Kannada News

ಬೆಂಗಳೂರು, ಸೆ.24: ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಸಂಸ್ಥೆಯ ಟಾಪ್ ಶ್ರೇಣಿಯ ಅಧಿಕಾರಿಗಳಿಗೆ ಕೈ ತುಂಬಾ ಸಂಬಳದ ಆಫರ್ ನೀಡಿದ್ದ ಸಿಇಒ ವಿಶಾಲ್ ಸಿಕ್ಕಾ ಅವರು ಈಗ ಮತ್ತೊಂದು ಶುಭ ಸಂದೇಶವನ್ನು ತಮ್ಮ ಉದ್ಯೋಗಿಗಳಿಗೆ ಕೊಟ್ಟಿದ್ದಾರೆ. ಇಷ್ಟು ದಿನ ಬಂದ್ ಆಗಿದ್ದ ಸಾಮಾಜಿಕ ಜಾಲ ತಾಣಗಳು ಇನ್ಮುಂದೆ ಟೆಕ್ಕಿಗಳಿಗೆ ಬಾಗಿಲು ತೆರೆಯುತ್ತಿವೆ.

ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಯೂಟ್ಯೂಬ್ ಗಳನ್ನು ತನ್ನ ಉದ್ಯೋಗಿಗಳು ಬಳಸುವುದನ್ನು ಇನ್ಫೋಸಿಸ್ ಸೇರಿದಂತೆ ಹಲವಾರು ಸಾಫ್ಟ್ ವೇರ್ ಸಂಸ್ಥೆಗಳು ನಿರ್ಬಂಧಿಸಿದೆ. ಈಗ ನಿರ್ಬಂಧ ಸಡಿಲಗೊಳಿಸಿರುವ ಸಿಕ್ಕಾ ಅವರು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಜಾಲಾಡಲು ಅನುಮತಿ ನೀಡಿದ್ದಾರೆ. ಅದರೆ, ಕೆಲಸದ ಅವಧಿಯಲ್ಲಿ ಹೆಚ್ಚು ಹೊತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸಮಯ ಕಳೆಯಬೇಡಿ, ಕೆಲಸ ಮುಗಿಸಿ ಫೇಸ್ಬುಕ್ ಬಳಸಿ ಎಂದಿದ್ದಾರೆ. [ಸಿಕ್ಕಾ ಸಿಕ್ಕಾಪಟ್ಟೆ ಸಂಬಳ ಏರಿಸ್ತಾರಪ್ಪ!]

Techies can use Facebook, Twitter at work but condition applies

ಇನ್ಫೋಸಿಸ್ ಸಿಇಒ ಅಗಿ ಸಿಕ್ಕಾ ಅವರು ಬಂದ ಮೇಲೆ ಅವರು ಮಾಡುತ್ತಿರುವ ಸಣ್ಣಪುಟ್ಟ ಬದಲಾವಣೆಗಳು ಕೂಡಾ ದೊಡ್ಡ ಪ್ರಮಾಣದಲ್ಲಿ ಪ್ರತಿಫಲ ನೀಡುತ್ತಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗಿ ಸ್ನೇಹಿ ವಾತಾವರಣ ಸೃಷ್ಟಿಸುವತ್ತಾ ಸಿಕ್ಕಾ ಹೆಜ್ಜೆಹಾಕಿದ್ದು ಈ ನಿಟ್ಟಿನಲ್ಲಿ ಮೊದಲಿಗೆ ಅಕ್ಟೋಬರ್ 2014ರಿಂದ ಇನ್ಫೋಸಿಸ್ ನ 160,000 ಉದ್ಯೋಗಿಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ.

ಫೇಸ್ ಬುಕ್ ಹಾಗೂ ಟ್ವಿಟ್ಟರ್ ಗೆ ಸುಲಭವಾಗಿ ಲಾಗ್ ಇನ್ ಆಗುವುದರ ಜೊತೆಗೆ ಉದ್ಯೋಗಿಗಳಿಗೆ ಸಿಇಒ ಸಿಕ್ಕಾ ಅವರಿಂದ ಕಾಲಕಾಲಕ್ಕೆ ಪ್ರಶಂಸೆಯ ಇ ಮೇಲ್ ಕೂಡಾ ಸಿಗಲಿದೆಯಂತೆ. ಟೀಂ ಲಂಚ್, ಟೀಂ ಔಟಿಂಗ್, ಕಾರ್ ಪೂಲಿಂಗ್, ಹೀಗೆ ಇನ್ನೂ ಅನೇಕ ವ್ಯವಸ್ಥೆಗಳು ಇನ್ಫೋಸಿಸ್ ನಲ್ಲಿ ಜಾರಿಗೆ ಬರಲಿದೆ. [ಫೇಸ್ಬುಕ್ ಯಾಕ್ ಬಳಸ್ಬೇಕು?]

ಇನ್ಫೋಸಿಸ್ ನ ವಾರ್ಷಿಕ ಆರ್ಟಿಷನ್ ಪ್ರಮಾಣ ಜೂನ್ ನಲ್ಲಿ ಶೇ 19.5 ರಷ್ಟೀತ್ತು. ಇದು ಪ್ರತಿಸ್ಪರ್ಧಿಗಳಾದ ಟಾಟಾ ಕನ್ಸಲ್ಟೆನ್ಸಿ ಲಿಮಿಟೆಡ್ ಹಾಗೂ ವಿಪ್ರೋ ಲಿಮಿಟೆಡ್ ಪ್ರಮಾಣಕ್ಕಿಂತ ಹೆಚ್ಚಾಗಿದೆ. SAP AGಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಸಿಕ್ಕಾ ಅವರು ಸಂಬಳ ಏರಿಕೆ, ಸಾಮಾಜಿಕ ಜಾಲ ತಾಣಗಳಿಗೆ ಪ್ರವೇಶ ಕಲ್ಪಿಸುವುದು, ಡ್ರೆಸ್ ಕೋಡ್ ನಿರ್ಬಂಧದಲ್ಲಿ ಸಡಿಲಿಕೆ ಮುಂತಾದ ನಡೆಗಳು ಉದ್ಯೋಗಿಗಳಿಗಷ್ಟೇ ಅಲ್ಲ ಇನ್ಫಿ ಬೋರ್ಡ್ ಸದಸ್ಯರಿಗೂ ಮೆಚ್ಚುಗೆಯಾಗಿವೆಯಂತೆ.

English summary
Infosys techies received another good news from the newly appointed President of the company -- Vishal Sikka. Now, the techies and other employees of the company can use social networking sites such as Facebook, Twitter at work, they also get frequent mails from their CEO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X