ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q1: ಇನ್ಫೋಸಿಸ್ ಗೆ ಲಾಭ,ಹೂಡಿಕೆದಾರರಿಗೆ ಸಂತಸ

By Mahesh
|
Google Oneindia Kannada News

ಬೆಂಗಳೂರು, ಜು.,11: ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಬೆಂಗಳೂರಿನ ಇನ್ಫೋಸಿಸ್ ಶುಕ್ರವಾರ ತನ್ನ ಮೊದಲನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಜೂ.30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ 21.6 ರಷ್ಟು 2,886 ಕೋಟಿ ರು ನಿವ್ವಳ ಲಾಭ ಗಳಿಸಿದೆ.

ಬಿಎಸ್ ಇಗೆ ಮಾಹಿತಿ ನೀಡಿರುವ ಬೆಂಗಳೂರಿನ ಐಟಿ ಕಂಪನಿ ನಿವ್ವಳ ಆದಾಯ ಶೇ 13.3 ರಷ್ಟು ಏರಿಕೆಯಾಗಿದ್ದು 12,770 ಕೋಟಿ ರು ಆದಾಯ ಹೊಂದಿದೆ. ಕಳೆದ ವರ್ಷ ಇದೇ ಅವಧ್ಯಲ್ಲಿ ನಿವ್ವಳ ಲಾಭ 2374 ಕೋಟಿ ರು ನಷ್ಟಿತ್ತು. ಈ ಬಾರಿ 2886 ಕೋಟಿ ರು ಬಂದಿದೆ. ಮಾರುಕಟ್ಟೆ ತಜ್ಞರ ನಿರೀಕ್ಷೆ 2,698 ಕೋಟಿ ರು ನಷ್ಟಿತ್ತು.

ಬಿಎಸ್ ಇನಲ್ಲಿ ಶುಕ್ರವಾರ ಈ ಸಮಯ(12.00)ಕ್ಕೆ ಇನ್ಫೋಸಿಸ್ ಷೇರುಗಳು ಉತ್ತಮ ಪ್ರಗತಿ ಕಂಡಿದೆ. 3222 ರು ನಂತೆ ಶೇ 0.09 ರಷ್ಟು ಏರಿಕೆ ಕಂಡಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ ಶೇ 0.92ರಷ್ಟು ಏರಿಕೆ ಕಂಡು 3223 ರು ನಂತೆ ಮೇಲಕ್ಕೇರಿದೆ ಎಂದು ಸಂಸ್ಥೆಯ ಸಿಒಒ ಯುಬಿ ಪ್ರವೀಣ್ ರಾವ್ ಹೇಳಿದ್ದಾರೆ.

Infosys standalone net profit jumps 21% in Q1

ಆದರೆ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ 0.8% ಕಡಿಮೆಯಾಗಿದ್ದು, ಲಾಭ 3.5% ಇಳಿದಿದೆ. ಮಾರುಕಟ್ಟೆ ತಜ್ಞರು ಪ್ರಕಾರ ಶೇ 8-10 ರಷ್ಟು ಇಳಿಕೆ ನಿರೀಕ್ಷಿಸಿದ್ದರು. ಡಾಲರ್ ಆದಾಯದ ಪ್ರಕಾರ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 2,133 ಮಿಲಿಯನ್ ಡಾಲರ್ ಆದಾಯ ಪ್ರಗತಿ ಕಂಡಿದೆ. ಮಾರುಕಟ್ಟೆ ನಿರೀಕ್ಷೆ 1.8 ರಿಂದ 3 ರಷ್ಟಿತ್ತು.

ಪ್ರಸಕ್ತ ತ್ರೈಮಾಸಿಕದಲ್ಲಿ ಆಟ್ರಿಷನ್ ಪ್ರಮಾಣ 19.5% ಇದ್ದು ಕಳೆದ ತ್ರೈಮಾಸಿಕದಲ್ಲಿ 18.5% ಇತ್ತು. ಸೂಕ್ತ ಪ್ರತಿಭೆಗಳನ್ನು ಹುಡುಕಿ ಸೂಕ್ತ ವಿಭಾಗಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ವರದಿ ಹೂಡಿಕೆದಾರರಿಗೆ ಸಂತಸ ತಂದಿದೆ ಎಂದು ಸಿಒಒ ಪ್ರವೀಣ್ ರಾವ್ ಹೇಳಿದ್ದಾರೆ.

ಹೊಸ ಸಿಇಒ ಆಗಿ ನೇಮಕಗೊಂಡಿರುವ ವಿಶಾಲ್ ಸಿಕ್ಕಾ ಅವರು ಇನ್ಫೋಸಿಸ್ ಸಂಸ್ಥೆಯನ್ನು ಇನ್ನಷ್ಟು ಉನ್ನತಸ್ಥಾನಕ್ಕೇರಿಸುವ ನಿರೀಕ್ಷೆಯಿದೆ. ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಎಂದು ಹಾಲಿ ಸಿಇಒ, ವ್ಯವಸ್ಥಾಪಕ ನಿರ್ದೇಶಕ ಎಸ್ ಡಿ ಶಿಬುಲಾಲ್ ಹೇಳಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಹೊಸ ಸಿಇಒ ಆಗಿ ಸಿಕ್ಕಾ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

English summary
Infosys Ltd has posted a net profit (standalone basis) of Rs 2,720 crore, an increase of nearly 21.6 per cent, for the first quarter of the current financial year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X