ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಸಂಬಳ ವಿವರ

By Mahesh
|
Google Oneindia Kannada News

ಬೆಂಗಳೂರು, ಜು.2: ಭಾರತದ ಎರಡನೇ ಅತಿದೊಡ್ಡ ಐಟಿ ರಫ್ತು ಕಂಪನಿ ಇನ್ಫೋಸಿಸ್ ನ ನೂತನ ಸಿಇಒ ವಿಶಾಲ್ ಸಿಕ್ಕಾ ಅವರ ಸಂಬಳ ವಿವರ ಬಹಿರಂಗಗೊಂಡಿದೆ. ಇನ್ಫೋಸಿಸ್ ತನ್ನ ಹೊಸ ಸಿಇಒ ಸಿಕ್ಕಾಗೆ ವಾರ್ಷಿಕವಾಗಿ 5.08 ಮಿಲಿಯನ್ ಯುಎಸ್ ಡಾಲರ್ ಗಳಷ್ಟು. ಅಂದರೆ, ವಿಶಾಲ್ ಸಿಕ್ಕಾಗೆ ಸುಮಾರು 30 ಕೋಟಿ ರುಪಾಯಿಯಷ್ಟು ವಾರ್ಷಿಕ ಸಂಬಳ ಸಿಗಲಿದೆ.

ಇದರ ಜತೆಗೆ ವಿಶಾಲ್ ಸಿಕ್ಕಾಗೆ ಸಂಸ್ಥೆಯ ಷೇರುಗಳಿಂದ ವಾರ್ಷಿಕವಾಗಿ 20 ಲಕ್ಷ ಡಾಲರ್, ಅಂದರೆ ಸುಮಾರು 12 ಕೋಟಿ ರುಪಾಯಿ ಆದಾಯ ಬರಲಿದೆ. ಸಂಬಳ ಮತ್ತು ಷೇರು ಎರಡೂ ಸೇರಿ ಇನ್ಫೋಸಿಸ್ ಸಿಇಒ ಅವರ ವಾರ್ಷಿಕ ವರಮಾನ 42 ಕೋಟಿ ರುಪಾಯಿ ಇದೆ. ಅಂದರೆ, ತಿಂಗಳಿಗೆ ಇವರು 3.5 ಕೋಟಿ ರುಪಾಯಿ ಆದಾಯ ಗಳಿಸುತ್ತಾರೆ.

New Infosys CEO Vishal Sikka to get annual salary of USD 5.08 million

ಜುಲೈ 30ರಂದು ಇನ್ಫೋಸಿಸ್ ಬೋರ್ಡ್ ಮೀಟಿಂಗ್ ನಲ್ಲಿ ಸಿಕ್ಕಾ ಸಂಬಳಕ್ಕೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ನಂತರ ನೂತನ ಸಂಬಳ ದರ ಜಾರಿಗೆ ಬರಲಿದೆ. ವಾರ್ಷಿಕವಾಗಿ ಯುಎಸ್ ಡಾಲರ್ 9,00,000, ವಾರ್ಷಿಕ ವೇರಿಯಬಲ್ ಪೇ 4.18 ಮಿಲಿಯನ್ ಯುಎಸ್ ಡಾಲರ್ ಸಿಗಲಿದೆ. SAP ಯಲ್ಲಿ ಉನ್ನತ ಹುದ್ದೆ ತೊರೆದು ಇನ್ಫೋಸಿಸ್ ಮುನ್ನಡೆಸಲು ಬಂದ ಸಿಕ್ಕಾ ಅವರ ಒಟ್ಟಾರೆ ಪ್ಯಾಕೇಜ್ 7.08 ಮಿಲಿಯನ್ ಡಾಲರ್ ಆಗಿದೆ.

ವಿಶ್ವದ ಇತರೆ ಪ್ರಮುಖ ಸಂಸ್ಥೆಗಳಿಗೆ ಹೋಲಿಸಿದರೆ ಇನ್ಫೋಸಿಸ್ ಸಿಇಒ ಪಡೆಯುತ್ತಿರುವ ಸಂಬಳ ನಾಲ್ಕನೇ ಸ್ಥಾನದಲ್ಲಿದೆ. ಮೈಕ್ರೋಸಾಫ್ಟ್ ತನ್ನ ಸಿಇಒಗೆ 18 ಮಿಲಿಯನ್ ಡಾಲರ್, ಐಬಿಎಂ - 16.2 ಮಿಲಿಯನ್ ಡಾಲರ್ ಹಾಗೂ ಸಿಟಿಬ್ಯಾಂಕ್ ತನ್ನ ಸಿಇಒಗೆ 14.4 ಮಿಲಿಯನ್ ಡಾಲರ್ ನೀಡುತ್ತಿದೆ.

ಆಗಸ್ಟ್ 1, 1981ರಂದು ಸ್ಥಾಪನೆಯಾದ ಇನ್ಫೋಸಿಸ್ ನಲ್ಲಿ ಈಗ ಹಳೆ ತಲೆಗಳು ಒಂದೊಂದಾಗಿ ಖಾಲಿಯಾಗುತ್ತಿವೆ. ಸಿಕ್ಕಾ ಅವರು ಜೂ.13, 2019ರ ತನಕ ಇನ್ಫಿ ಸಿಇಒ ಆಗಿರುತ್ತಾರೆ. ಕಳೆದ ಜೂ.14ರಿಂದ ಜಾರಿಗೆ ಬರುವಂತೆ ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ, ನಾರಾಯಣಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಹಾಗೂ ಚೇರ್ಮನ್ ಎಸ್ ಗೋಪಾಲಕೃಷ್ಣನ್ ಅವರು ಹುದ್ದೆ ತೊರೆಯುತ್ತಿದ್ದಾರೆ.ಇನ್ಫೋಸಿಸ್ ನಲ್ಲಿ ಇತ್ತೀಚೆಗೆ ಸುಮಾರು 13ಕ್ಕೂ ಹೆಚ್ಚು ಪ್ರಮುಖ ಅಧಿಕಾರಿಗಳು ಸಂಸ್ಥೆಯನ್ನು ತೊರೆದಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
Infosys Ltd will pay its new chief executive officer Vishal Sikka up to USD 5.08 million in annual salary besides a stock option of USD 2 million, a package considered lower than global peers. Sikka, 47, will replace SD Shibulal and take charge on August 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X