ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖೇಶ್ ಈಗಲೂ ನಂ.1, ಮಲ್ಯ ಆಸ್ತಿ ಕರಗುತ್ತಿದೆ

By Mahesh
|
Google Oneindia Kannada News

ಬೆಂಗಳೂರು, ಅ.30: ಫೋಬ್ಸ್ ನಿಯತಕಾಲಿಕ ಪ್ರಕಟಿ­ಸಿರುವ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಖೇಶ್ ಅಂಬಾನಿ, ಸತತ 6ನೇ ವರ್ಷವೂ ಮೊದಲ ಸ್ಥಾನ ಗಳಿಸಿದ್ದಾರೆ. ಮೆಕ್ಸಿಕೊದ ಉದ್ಯಮಿ ಕಾರ್ಲೊಸ್ ಸ್ಲಿಮ್ ಸತತ 4ನೇ ವರ್ಷವೂ ಪ್ರಪಂಚದ ನಂ 1 ಶ್ರೀಮಂತರಾಗಿ ಮುಂದುವರಿದಿದ್ದಾರೆ.

2,100 ಕೋಟಿ ಡಾಲರ್ ಮೌಲ್ಯದ (ರೂ.1.30 ಲಕ್ಷ ಕೋಟಿ) ಸಂಪತ್ತು ಹೊಂದಿರುವ ಮುಖೇಶ್ ಜಗತ್ತಿನ 100 ಶ್ರೀಮಂತರ ಪಟ್ಟಿ­ಯಲ್ಲಿ 20ನೇ ಸ್ಥಾನ ಹಾಗೂ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
* ಮುಖೇಶ್ ಅಂಬಾನಿ: 21 ಬಿಲಿಯನ್ ಡಾಲರ್
* ಲಕ್ಷ್ಮಿಮಿತ್ತಲ್: 16 ಬಿಲಿಯನ್ ಡಾಲರ್
* ದಿಲೀಪ್ ಶಾಂಘ್ವಿ: 13.9 ಬಿಲಿಯನ್ ಡಾಲರ್
* ಅಜೀಂ ಪ್ರೇಂಜಿ: 13.8 ಬಿಲಿಯನ್ ಡಾಲರ್
* ಪಲೋನ್ ಜೀ ಮಿಸ್ತ್ರಿ:12.5 ಬಿಲಿಯನ್ ಡಾಲರ್
* ಹಿಂದುಜಾ ಸಹೋದರರು: 9 ಬಿಲಿಯನ್ ಡಾಲರ್
* ಆದಿ ಗೋದ್ರೇಜ್: 8.3 ಬಿಲಿಯನ್ ಡಾಲರ್
* ಕುಮಾರ ಬಿರ್ಲಾ: 7.6 ಬಿಲಿಯನ್ ಡಾಲರ್
* ಸುನೀಲ್ ಮಿತ್ತಲ್: 6.6 ಬಿಲಿಯನ್ ಡಾಲರ್.

ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್ ಮತ್ತು ಸನ್ ಫಾರ್ಮಾ ಕಂಪೆನಿಯ ಮುಖ್ಯಸ್ಥ ದಿಲೀಪ್ ಸಾಂಘ್ವಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. 1,380 ಕೋಟಿ ಡಾಲರ್ ಗಳಷ್ಟು (ರೂ.85,560 ಕೋಟಿ) ಸಂಪತ್ತು ಹೊಂದಿ­ರುವ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ ಜಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

India's 100 richest includes only five women, Mallya net drops by 50 billion USD

ಮಲ್ಯ ಸಂಪತ್ತು ಕರಗುತ್ತಿದೆ: ಹಣದುಬ್ಬರ, ಹಣಕಾಸು ಮಾರು­ಕಟ್ಟೆಯಲ್ಲಿನ ಇತ್ತೀಚಿನ ಅಸ್ಥಿರತೆ ಮತ್ತು ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯ ಭಾರತೀಯ ಉದ್ಯಮಿಗಳ ಸಂಪತ್ತು ಕರಗುವಂತೆ ಮಾಡಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಉದ್ಯಮಿ ವಿಜಯ್ ಮಲ್ಯ ಅವರ ಸಂಪತ್ತು ರೂ.31 ಸಾವಿರ ಕೋಟಿಯಷ್ಟು ಕರಗಿದೆ. 100 ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಅವರು 11 ಸ್ಥಾನಗಳಷ್ಟು ಕೆಳಗಿಳಿದು 84ನೇ ಸ್ಥಾನಕ್ಕೆ ಜಾರಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ 100 ಸಿರಿವಂತರ ಒಟ್ಟಾರೆ ಸಂಪತ್ತು ಶೇ3ರಷ್ಟು ಹೆಚ್ಚಿದ್ದು 25,900 ಕೋಟಿ ಡಾಲರ್ ಗಳಿಗೆ (ರೂ.16.05 ಲಕ್ಷ ಕೋಟಿ) ಹೆಚ್ಚಿದೆ ಎಂದೂ ಈ ವರದಿ ಗಮನ ಸೆಳೆದಿದೆ.

ಜಾಗತಿಕ ಸಿರಿವಂತರ ಪಟ್ಟಿಗೆ ಈ ಬಾರಿ ನಾಲ್ವರು ಭಾರತೀಯರು ಹೊಸ­ದಾಗಿ ಸೇರ್ಪಡೆಗೊಂಡಿದ್ದಾರೆ. ಲುಲು ಸಮೂಹದ ಎಂ.ಎ ಯೂಸಫ್ ಆಲಿ ಮತ್ತು ಅನಿವಾಸಿ ಉದ್ಯಮಿ ರವಿ ಪಿಳ್ಳೈ ಇವರಲ್ಲಿ ಪ್ರಮುಖರು.

ಜಗತ್ತಿನ ಉದ್ಯಮಿಗಳು ನಡೆಸುತ್ತಿರುವ ಕಂಪನಿಗಳ ಷೇರು ಮತ್ತು ಮಾರುಕಟ್ಟೆ ಮೌಲ್ಯ ಆಧರಿಸಿ ಫೋಬ್ಸ್‌ ಶ್ರೀಮಂತರ ಪಟ್ಟಿ ಪ್ರಕಟಿಸುತ್ತದೆ.
ಭಾರತದ 100 ಸಿರಿವಂತರ ಪಟ್ಟಿ­ಯಲ್ಲಿ ಕೇವಲ ಐವರು ಮಹಿಳೆಯರಿ­ದ್ದಾರೆ. 14ನೇ ಸ್ಥಾನದಲ್ಲಿ­ರುವ ರೂ.30,380 ಕೋಟಿ ಮೌಲ್ಯದ ಸಂಪತ್ತಿನ ಒಡತಿ ಜಿಂದಾಲ್ ಸಮೂಹದ ಸಾವಿತ್ರಿ ಜಿಂದಾಲ್, ಬೆನೆಟ್ ಕೋಲ್ಮನ್ ಕಂಪೆನಿ­ಯ ಅಧ್ಯಕ್ಷೆ ಇಂದು ಜೈನ್, ಥರ್ಮಾ­ಕ್ಸ್ ನ ಅನು ಆಗಾ, ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಷಾ, ಹಿಂದೂಸ್ತಾನ್ ಟೈಮ್ಸ್ ನ ಶೋಭನಾ ಭಾರ್ತಿಯಾ ಪಟ್ಟಿಯಲ್ಲಿದ್ದಾರೆ.

English summary
Only five women find a place in India's 100 richest, having a collective wealth of $8.83 billion and accounting for a little over three per cent of the total net-worth of all in the list. Vijay Mallya's net worth has dropped by $50 million in the last year to $750 million
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X