ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಆಮದು ನೀತಿ ಜಾರಿ, ಚಿನ್ನ ದರ ಇಳಿಕೆ

By Mahesh
|
Google Oneindia Kannada News

ನವದೆಹಲಿ, ಮೇ.22: ಆರ್‌ಬಿಐನ ನೂತನ ಚಿನ್ನ ಆಮದು ನೀತಿ ಪ್ರಕಟಿಸಿದ ಬೆನ್ನಲ್ಲೆ ಚಿನ್ನದ ದರ ಕಳೆದ 9 ತಿಂಗಳುಗಳಲ್ಲಿ ಕಾಣದ ಪ್ರಮಾಣಕ್ಕೆ ಕುಸಿತ ಕಂಡಿದೆ. ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ ಶೇ.3ರಷ್ಟು ಇಳಿಕೆ ಕಂಡುಬಂದಿದ್ದು, ಒಟ್ಟಾರೆ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 800ರು. ಇಳಿಕೆಯಾಗಿದೆ.

ಡಾಲರ್ ಎದುರು ರುಪಾಯಿ ಮೌಲ್ಯ ಏರಿಕೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೆ ತಂದಿದ್ದ ನೂತನ ಚಿನ್ನ ಆಮದು ನೀತಿಯಿಂದಾಗಿ ಚಿನ್ನದ ದರ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ.ಲಂಡನ್ ಮಾರುಕಟ್ಟೆಯಲ್ಲಿಯೂ ಪ್ರತಿ ಔನ್ಸ್ ಚಿನ್ನದ ಬೆಲೆ 88 ಡಾಲರ್‌ಗೆ ಕುಸಿದಿದ್ದು, ಭಾರತದ ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ದರ ಏರಿಕೆಯಿಂದಾಗಿ ಚಿನಿವಾರ ಪೇಟೆಯಲ್ಲಿ ಉಂಟಾಗಿದ್ದ ನಿರಾಶಾದಾಯಕ ವಹಿವಾಟು ಕೂಡ ದರ ಇಳಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಇದೇ ಲಂಡನ್‌ನಲ್ಲಿ ಪ್ರತಿ ಔನ್ಸ್ ಚಿನ್ನ 16 ಡಾಲರ್‌ಗಳಾಗಿತ್ತು.

ನವದೆಹಲಿಯಲ್ಲಿ ಮೇ.22ರಂದು 10 ಗ್ರಾಂ ಚಿನ್ನದ ಬೆಲೆ 28,550 ರು ನಷ್ಟಿದ್ದರೆ ಬೆಳ್ಳಿ ದರ 50 ರು ಇಳಿಕೆ ಕಂಡು ಪ್ರತಿ ಕೆ.ಜಿಗೆ 41,650 ರು ನಷ್ಟಿತ್ತು. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 27,140 ರು ನಷ್ಟಿತ್ತು. 24 ಕ್ಯಾರೆಟ್ ಚಿನ್ನದ ಬೆಲೆ 29,060 ರು ನಷ್ಟಿತ್ತು.

Gold tumbles by Rs 800 as RBI eases import curbs

ಈ ಹಿಂದೆ ಪ್ರತಿ ಡಾಲರ್ ಎದುರು 60.ರು ಗಡಿ ದಾಟಿದ್ದ ರುಪಾಯಿ ಮೌಲ್ಯ, ಲೋಕಸಭಾ ಚುನಾವಣಾ ಫಲಿತಾಂಶ ಬಹಿರಂಗವಾಗುತ್ತಿದ್ದಂತೆಯೇ 58.42ಕ್ಕೆ ರುಪಾಯಿಗೆ ಏರಿಕೆಯಾಗಿತ್ತು. ಸೆನ್ಸೆಕ್ ಸಂವೇದಿ ಸೂಚ್ಯಂಕ ಕೂಡ 24000 ಗಡಿ ದಾಟುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿತ್ತು. ಈ ಎಲ್ಲ ಕಾರಣಗಳು ಚಿನ್ನದ ದರ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ.

ಒಟ್ಟಾರೆ ಭಾರತೀಯ ಚಿನ್ನದ ಮಾರುಕಟ್ಟೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಬೇಡಿಕೆ ಹೆಚ್ಚಾದರೆ ಸಾಮಾನ್ಯವಾಗಿಯೇ ಚಿನ್ನದ ದರ ಕೂಡ ಏರಿಕೆಯಾಗುತ್ತದೆ. ಹೀಗಾಗಿಯೇ ಆರ್‌ಬಿಐ ಚಿನ್ನದ ನೂತನ ಆಮದು ನೀತಿಯನ್ನು ಜಾರಿಗೊಳಿಸಿದ್ದು, ಚಿನ್ನ ಖರೀದಿದಾದರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

English summary
Gold prices tumbled by Rs 800 to hit nine-month low of Rs 28,550 per ten grams in the national capital on Thursday after the Reserve Bank eased import norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X