ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ವರ್ಷದಲ್ಲೇ ಅತಿಹೆಚ್ಚಿನ ಜಿಡಿಪಿ ಸಾಧನೆ

|
Google Oneindia Kannada News

ಹೊಸದೆಹಲಿ, ಆ. 30: ಕಳೆದ ಎರಡು ವರ್ಷದಲ್ಲೇ ಅತಿ ಹೆಚ್ಚಿನ ಜಿಡಿಪಿ ದರ ದಾಖಲಾಗಿದೆ. ಕೇಂದ್ರ ಲೆಕ್ಕ ಪತ್ರ ಸಮಿತಿ ಬಿಡುಗಡೆ ಮಾಡಿರುವ ಅಂಕಿ ಅಂಶದಂತೆ ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ದೇಶ ಶೇ. 5.7 ಆರ್ಥಿಕ ಅಭಿವೃದ್ಧಿ ದರ ದಾಖಲಿಸಿದೆ. ಇದು ದೇಶದ ಕ್ಷಿಪ್ರ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದೇ ವಿಶ್ಲೇಷಿಸಲಾಗಿದೆ.

ವಿವಿಧ ಉತ್ಪನ್ನ ತಯಾರಿಕಾ ವಿಭಾಗ ಮತ್ತು ಸೇವಾ ಘಟಕಕ್ಕೆ ಸರ್ಕಾರ ನೀಡಿದ ಉತ್ತೇಜನ ಈ ಬೆಳವಣಿಗೆಗೆ ಕಾರಣವಾಗಿದೆ. ಕೇಂದ್ರ ಲೆಕ್ಕಪತ್ರ ಸಮಿತಿ ಬಿಡುಗಡೆಮಾಡಿರುವ ಅಂಕೆ ಸಂಖ್ಯೆಗಳ ಆಧಾರದಲ್ಲಿ ಎಪ್ರಿಲ್‌-ಜೂನ್‌ ವೇಳೆಯಲ್ಲಿ ದೇಶ ಶೇ. 5.7 ಅಭಿವೃದ್ಧಿ ದರ ದಾಖಲಿಸಿದೆ. ಇದು ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ. 4.6 ರಷ್ಟಿತ್ತು.

gdp

ಇದು ಕೇಂದ್ರ ಸರ್ಕಾರದ ವಿಶ್ವಾಸ ಹೆಚ್ಚಿಸಿದ್ದು ದೊಡ್ಡ ದೊಡ್ಡ ಯೋಜನೆಗಳಿಗೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಾಗುತ್ತದೆ ಎನ್ನಬಹುದಾದರೂ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಇನ್ನೂ ಅನೇಕ ಸಮಸ್ಯೆಗಳಿಂದ ಹೊರತಾಗಿಲ್ಲ.

ಮಳೆ ಕಣ್ಣಾಮುಚ್ಚಾಲೆ ನಡುವೆಯೂ ಉತ್ತಮ ಪ್ರಗತಿ ಸಾಧಿಸಿರುವುದು ಸಂತಸ ತಂದಿದೆ. ರಫ್ತಿನ ಪ್ರಮಾಣ ಹೆಚ್ಚಿಸಲು ಗಮನ ನೀಡಲಾಗುತ್ತಿದೆ. ಕೆಲವೊಂದು ಕ್ಷೇತ್ರಗಳಲ್ಲಿ ನಷ್ಟ ಎದುರಾಗುತ್ತಿದ್ದು ಲೋಪ ತಡೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಜಿಡಿಪಿ ಅಭಿವೃದ್ಧಿ ನಮ್ಮದೇ ಸಾಧನೆ: ಚಿದಂಬರಂ
ಜೆಡಿಪಿ ದರದಲ್ಲಿ ಶೇ. 5.7 ರಷ್ಟು ಸಾಧನೆಯಾಗಲು ಯುಪಿಎ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳೇ ಕಾರಣ ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಆರ್ಥಿಕ ಅಭಿವೃದ್ಧಿಗೆ ಈ ಬೆಳವಣಿಗೆ ದುಕ್ಸೂಚಿಯಾಗಿ ನಿಲ್ಲುತ್ತದೆ. 2014-15 ಹಣಕಾಸು ವರ್ಷದ ಆರಂಭದಲ್ಲಿ ಯುಪಿಎ ಕೈಗೊಂಡ ಕಾರ್ಯಕ್ರಮಗಳೇ ಇದಕ್ಕೆ ಕಾರಣ ಎಂದಿದ್ದಾರೆ.
ಎನ್‌ಡಿಎ ಸರ್ಕಾರ ಯುಪಿಎ ರೂಪಿಸಿದ್ದ ಉತ್ತಮ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ

English summary
India's economic growth rebounded sharply in the April-June quarter, boosted by manufacturing and services sectors, and triggered hopes of sustained expansion on the back of the government's efforts to steer the economy out of the deep slowdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X