ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲು ಓಡಲು ವಿದೇಶಿ ದುಡ್ಡು!

By Mahesh
|
Google Oneindia Kannada News

ನವದೆಹಲಿ ಮಾ.3: ಆರ್ಥಿಕ ಉದಾರೀಕರಣದ ಹೆಸರಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡುತ್ತಿರುವ ಯುಪಿಎ ಸರ್ಕಾರದ ಕಣ್ಣು ಈಗ ಭಾರತೀಯ ಸಾರಿಗೆಯ ಜೀವನಾಡಿ ಭಾರತೀಯ ರೈಲ್ವೆ ಮೇಲೆ ಬಿದ್ದಿದೆ. ಭಾರತೀಯ ರೈಲ್ವೆಯಲ್ಲಿ ವಿದೇಶಿ ಕಂಪನಿಗಳು ನೇರವಾಗಿ ಹೂಡಿಕೆ ಮಾಡಲು ಸರ್ಕಾರ ಅನುಮತಿ ನೀಡುತ್ತಿದೆ.

ಭಾರತದಲ್ಲಿ ಸಿಂಗಲ್ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅನುಮತಿ ಇದೆ. ಇದು ಹೋಲ್ ಸೇಲ್, ಬ್ಯಾಂಕಿಂಗ್, ವಿಮಾ ಕ್ಷೇತ್ರದಲ್ಲಿ ಜಾರಿಯಲ್ಲಿದೆ. ಆದರೆ, ಈಗ ಮಲ್ಟಿ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅನುಮತಿ ನೀಡಿಕೆ, ಅಂದರೆ ಶೇ 51 ರಷ್ಟು ಪಾಲು ವಿದೇಶಿ ಕಂಪನಿ ವಶವಾದರೆ, ಇಡೀ ಚಿಲ್ಲರೆ ಮಾರುಕಟ್ಟೆ ಶೆಟ್ಟಿ ಅಂಗಡಿ ಜುಟ್ಟು ಜನಿವಾರ ವಿದೇಶಿಯರ ಕೈವಶವಾಗಲಿದೆ. ವಿಮೆ, ಇನ್ಸುರೆನ್ಸ್ ಹಣಕ್ಕಾಗಿ ವಿದೇಶಿ ಕಂಪನಿ ಮುಂದೆ ಕೈ ಚಾಚುವ ಪರಿಸ್ಥಿತಿ ಇದೆ. ವಿಮಾನಯಾನದ ನಂತರ ರೈಲ್ವೆಯಲ್ಲಿ ಎಫ್ ಡಿಐ ಬಂದರೆ ಸುರಕ್ಷತೆ ಸಾಧಿಸಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.[ಕೊಟ್ಟೂರು-ಹರಿಹರ ನಡುವೆ ಸಂಚರಿಸಿ!]

ಭಾರತೀಯ ರೈಲ್ವೆಯಲ್ಲಿ ವಿದೇಶಿ ಕಂಪನಿಗಳು ಹಣ ಹೂಡಲು ಇದ್ದ ಸುರಕ್ಷಿತ ನಿಯಮ ಹಾಗೂ ಅಡ್ಡಿ ಆತಂಕಗಳನ್ನು ಪರಿಶೀಲಿಸಿದ ಗೃಹ ಇಲಾಖೆ ತನ್ನ ಅಂಗೀಕಾರ ನೀಡಿದೆ. ಈ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಚಿವ ಸಂಪುಟ ಈ ವಾರದೊಳಗೆ ಸಭೆ ಸೇರಿ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ ಎಂದು Department of Industrial Policy & Promotion (DIPP) ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Foreign direct investment (FDI) regime in India Railways : UPA

ಭಾರತೀಯ ರೈಲ್ವೆಯ ಸ್ವಯಂ ಚಾಲಿತ ಮಾರ್ಗಗಳು ಉನ್ನತ ತಂತ್ರಜ್ಞಾನ ಬಳಕೆ, ಸಬ್ ಅರ್ಬನ್ ಕಾರಿಡರ್, ಹೈ ಸ್ಪೀಡ್ ಟ್ರೈನ್ ವ್ಯವಸ್ಥೆ ಅಲ್ಲದೆ ಸಾರ್ವಜನಿಕ-ಸರ್ಕಾರಿ ಸಹಭಾಗಿತ್ವ(PPP) ಯೋಜನೆಗಳಲ್ಲಿ ಶೇ 100ರಷ್ಟು ಎಫ್ ಡಿಐಗೆ ಡಿಐಪಿಪಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ರೈಲ್ವೆ ಸುರಕ್ಷತೆ ಹಾಗೂ ರೈಲು ಸಂಚಾರ ವ್ಯವಸ್ಥೆಯನ್ನು ಎಫ್ ಡಿಐಯಿಂದ ಮುಕ್ತಗೊಳಿಸಲಾಗಿದೆ.ರೈಲ್ವೆ ಜಾಲದಲ್ಲಿರುವ ಕೈಗಾರಿಕೆ ಗಣಿಗಾರಿಕೆಗಳಲ್ಲೂ ಎಫ್ ಡಿಐ ಬಳಕೆ ಮಾಡಲು ಯೋಜಿಸಲಾಗಿದೆ.

ಆರ್ಥಿಕ ಉದಾರೀಕರಣದ ಹೆಸರಿನಲ್ಲಿ ಬರುತ್ತಿರುವ ಎಫ್ ಡಿಐ ಮೂಲಕ ಚೀನಾದ ವ್ಯಾಪಾರಿಗಳಿಗೆ ರೈಲು ಮಾರ್ಗಗಳ ಮೇಲೆ ಹಣ ಹೂಡಿಕೆ ಮಾಡಲು ಅನುವು ಮಾಡಿಕೊಟ್ಟರೆ ಗಡಿ ಭಾಗಗಳಲ್ಲಿ ಸುರಕ್ಷಿತೆಗೆ ಕುಂದುಟಾಗುತ್ತದೆ ಎಂಬ ಕೂಗು ಎದ್ದಿದೆ. ಹೀಗಾಗಿ ಡಿಐಪಿಪಿ ಪ್ರಸ್ತಾವನೆ ಬಗ್ಗೆ ಕೂಲಂಕುಷವಾಗಿ ಯುಪಿಎ ಸಚಿವ ಸಂಪುಟ ಚರ್ಚೆ ನಡೆಸಿ ನಂತರ ನಿರ್ಧಾರ ಕೈಗೊಳ್ಳಲಿದೆ.

English summary
The Union Cabinet is likely to take up new norms for liberalising the foreign direct investment (FDI) regime in Railways as all security-related concerns raised by the Home Ministry have been addressed according to the Hindu report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X