ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ಶಾಪಿಂಗ್ ನಲ್ಲಿ ಫ್ಲಿಪ್ ಕಾರ್ಟ್ ಭರ್ಜರಿ ಡೀಲ್

By Mahesh
|
Google Oneindia Kannada News

ಮುಂಬೈ, ಮೆ.21: ಅನ್ ಲೈನ್ ಶಾಪಿಂಗ್ ನಲ್ಲಿ ಹೊಸ ಸಂಚಲನ ಮೂಡಿಸಬಲ್ಲ ಸುದ್ದಿ ಬಂದಿದೆ. ಜನಪ್ರಿಯ ಇ ರೀಟೈಲರ್ ಸಂಸ್ಥೆ ಮಿಂಟ್ರಾ.ಕಾಂ ಅನ್ನು ಫ್ಲಿಪ್ ಕಾರ್ಟ್ .ಕಾಂ ಖರೀದಿಸಿದೆ. ಈ ಮೂಲಕ ಅಮೆಜಾನ್ ಇಂಡಿಯಾ ಸಂಸ್ಥೆಗೆ ಭಾರಿ ಪೆಟ್ಟು ನೀಡುವ ಉತ್ಸಾಹದಲ್ಲಿದೆ.

ಗುರುವಾರದ ಹೊತ್ತಿಗೆ ಈ ಭಾರಿ ಡೀಲ್ ಅಂತಿಮ ರೂಪುರೇಷೆ ಪಡೆದುಕೊಳ್ಳಲಿದ್ದು, ಮಾರುಕಟ್ಟೆ ಮೂಲಗಳ ಪ್ರಕಾರ ಸುಮಾರು 1,800 ದಿಂದ 2,000 ಕೋಟಿ ರು ಡೀಲ್ ಇದಾಗಿದೆ ಎಂದು ತಿಳಿದು ಬಂದಿದೆ. [ಸಂಸ್ಥೆಯಲ್ಲಿ 12 ಸಾವಿರ ನೇಮಕಾತಿ]

ದಕ್ಷಿಣ ಆಫ್ರಿಕಾದ ನಾಸ್ಪರ್ಸ್(Naspers) ಪಿಲಾನಿ ಸಾಫ್ಟ್ ಲ್ಯಾಬ್ಸ್ ಪ್ರೈ.ಲಿ ನ ಜನಪ್ರಿಯ ತಾಣ ರೆಡ್ ಬಸ್ ನಲ್ಲಿ ಶೇ 80ರಷ್ಟು ಪಾಲು ಹೊಂದುವ (780 ಕೋಟಿ ರು ಕೊಟ್ಟು ಖರೀದಿ) ಮೂಲಕ ಅಧಿಕಾರ ಸ್ಥಾಪಿಸಿತ್ತು. ಈಗ ಫ್ಲಿಪ್ ಕಾರ್ಟ್ ಈ ಸಂಖ್ಯೆಯನ್ನು ಮೀರುವ ಲಕ್ಷಣಗಳು ಕಂಡು ಬಂದಿದೆ. ವಿಶೇಷವೆಂದರೆ ಫ್ಲಿಪ್ ಕಾರ್ಟ್ ನಲ್ಲೂ ನಾಸ್ಪರ್ಸ್ 16.7% ಪಾಲು ಹೊಂದಿದೆ.

Flipkart Acquires Fashion E-Retailer Myntra.com

2019ರ ಹೊತ್ತಿಗೆ ಆನ್ ಲೈನ್ ರೀಟೈಲ್ ಕ್ಷೇತ್ರ ಇ ಕಾಮರ್ಸ್ ವಿಭಾಗದಲ್ಲಿ ಭಾರತದ ಕಂಪನಿಗಳು ಅತಿ ಹೆಚ್ಚು ಆದಾಯ ಗಳಿಸುವ ಲಕ್ಷಣಗಳಿವೆ ಎಂಬ ಟೆಕ್ನೋಪಾಕ್ ಅಡ್ವೆಸರಿ ವರದಿ ಆಧಾರದ ಮೇಲೆ ಫ್ಲಿಪ್ ಕಾರ್ಟ್ ಈ ಭರ್ಜರಿ ಒಪ್ಪಂದಕ್ಕೆ ಕೈ ಹಾಕಿದೆ ಎನ್ನಲಾಗಿದೆ. ಮಿಂಟ್ರಾ.ಕಾಂ ಖರೀದಿಗೆ ಸಿಯಾಟಲ್ ಮೂಲದ ಅಮೆಜಾನ್.ಕಾಂ ಸಂಸ್ಥೆ ಕೂಡಾ ಯತ್ನಿಸಿ ವಿಫಲವಾಗಿತ್ತು.

ಫ್ಲಿಪ್ ಕಾರ್ಟ್ ಪೈ.ಲಿ ಸಿಂಗಪುರ ಮೂಲದ ಆನ್ ಲೈನ್ ರೀಟೈಲರ್ ಸಂಸ್ಥೆಯಾಗಿದ್ದು, ನಾಸ್ಪರ್ಸ್ ಸಮೂಹ, ಅಸ್ಸೆಲ್ ಪಾರ್ಟ್ನರ್ಸ್, ಐಕಾನಿಕ್ ಕ್ಯಾಪಿಟಲ್, ಟೈಗರ್ ಗ್ಲೋಬಲ್ ಮುಂತಾದ ಸಂಸ್ಥೆಗಳು ಹೂಡಿಕೆ ಮಾಡಿವೆ. ಫ್ಲಿಪ್ ಕಾರ್ಟ್ ಸಂಸ್ಥೆ ಮಾರುಕಟ್ಟೆ ಮೌಲ್ಯ 9,300 ಕೋಟಿ ರು ದಾಟುತ್ತದೆ. ಮಿಂಟ್ರಾ,ಕಾಂ ಖರೀದಿಗೂ ಮುನ್ನ ಫ್ಲೈಟ್, ಲೆಟ್ಸ್ ಬೈ.ಕಾಂ, ಚಂಪಕ್.ಕಾಂ ಮುಂತಾದ ಆನ್ ಲೈನ್ ಶಾಪಿಂಗ್ ತಾಣಗಳನ್ನು ತನ್ನ ಬುಟ್ಟಿಗೆ ಫ್ಲಿಪ್ ಕಾರ್ಟ್ ಹಾಕಿಕೊಂಡಿದೆ.

English summary
In what can be called as the biggest game changer in the Indian e-commerce industry, today it was announced the Flipkart.com has finally acquired Myntra.com for a speculated 1800 Crore Rupees or 330 Million US dollars (cash+stock).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X