ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಭೇಟಿಗೆ ಸಜ್ಜಾದ ಫೇಸ್ಬುಕ್ ಸಿಇಒ ಮಾರ್ಕ್

By Mahesh
|
Google Oneindia Kannada News

ನವದೆಹಲಿ, ಅ.2: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕದ ಪ್ರವಾಸದ ಫಲವೋ ಏನೋ ಅಮೆರಿಕದ ದೈತ್ಯ ಸಂಸ್ಥೆಗಳ ಮುಖ್ಯಸ್ಥರೆಲ್ಲ ಭಾರತ ಪ್ರವಾಸಕ್ಕೆ ಮುಗಿ ಬೀಳುತ್ತಿದ್ದಾರೆ.ವ್ಯವಹಾರಿಕ ಪ್ರವಾಸವಾದರೂ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿರುವುದು ಗಮನಾರ್ಹವಾಗಿದೆ. ಫೇಸ್ ಬುಕ್ ಸಿಇಒ ಮಾರ್ಕ್ ಝಕರ್ಬರ್ಗ್ ಅವರು ಅಕ್ಟೋಬರ್ ತಿಂಗಳ 9 ಅಥವಾ 10ನೇ ತಾರೀಖಿನಂದು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆಗೆ ಅಪಾಟ್ಮೆಂಟ್ ಫಿಕ್ಸ್ ಮಾಡಿಕೊಂಡಿದ್ದಾರೆ.

ಅಕ್ಟೋಬರ್ 9-10ರಂದು ಇಂಟರ್ನೆಟ್. ಆರ್ಗ್ ಶೃಂಗಸಭೆಯಲ್ಲಿ ಮಾರ್ಕ್ ಉಪನ್ಯಾಸ ನೀಡಲಿದ್ದಾರೆ ನಂತರ ಪ್ರಧಾನಿ ಮೋದಿ ಸೇರಿದಂತೆ ಇತರ ಸಚಿವರನ್ನು ಅವರು ಭೇಟಿ ಮಾಡಲಿದ್ದಾರೆ ಎಂದು ಫೇಸ್ ಬುಕ್ ಸಂಸ್ಥೆಯ ಭಾರತ ಘಟಕ ಹೇಳಿದೆ. ಗೂಗಲ್ ನ ಉನ್ನತ ಅಧಿಕಾರಿ ಸುಂದರ್ ಪಿಚ್ಚೈ, ಅಮೆಜಾನ್ ಜೆಫ್ ಬೆಜೋಸ್, ಮೈಕ್ರೋಸಾಫ್ಟ್ ಸಂಸ್ಥೆಯ ಸತ್ಯ ನಡೆಲ್ಲಾ ಮತ್ತು ಫೇಸ್ಬುಕ್ ನ ಸಿಒಒ ಶೆರಿಲ್ ಸ್ಯಾಂಡ್ಬರ್ಗ್ ನಂತರ ಮಾರ್ಕ್ ಭಾರತಕ್ಕೆ ಭೇಟಿ ನೀಡಲಿದ್ದಾರೆ.

Facebook CEO Mark Zuckerberg to meet PM Modi

ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಳ ಅಭಿಯಾನ ಹಾಗೂ ಸಾಧ್ಯ್ತತೆಗಳ ಕುರಿತಂತೆ ಮಾರ್ಕ್ ಉಪನ್ಯಾಸ ನೀಡಲಿದ್ದಾರೆ. ವಿಶ್ವದ ಯುವ ಕೋಟ್ಯಧಿಪತಿಗಳ ಸಾಲಿನಲ್ಲಿ ಅಗ್ರಗಣ್ಯರಾದ ಮಾರ್ಕ್(ಸುಮಾರು 33 ಬಿಲಿಯನ್ ಡಾಲರ್ ಆಸ್ತಿವಂತ) ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅ.9 ಅಥವಾ 10ರಂದು ಕಾಲಾವಕಾಶ ಕೋರಿದ್ದಾರೆ ಎಂದು ಸಂವಹನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಮೋದಿ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಯೂಟ್ಯೂಬ್ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಯುವ ಜನತೆಯನ್ನು ಅಕರ್ಷಿಸಿದ್ದರು. ಮೋದಿ ಅವರು ಪ್ರಧಾನಿಯಾದ ಮೇಲೂ ಅವರ ಭಾಷಣಗಳು ಲೈವ್ ಟೆಲಿಕಾಸ್ಟ್ ಆಗುತ್ತಿದೆ. ಸಾಮಾನ್ಯವಾಗಿ ಯೂಟ್ಯೂಬ್ ಬಳಕೆ ಮಾಡಿಕೊಂಡು ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.

ಫೇಸ್ಬುಕ್ ಕೂಡಾ ವಿಡಿಯೋ ಬಳಕೆ ಹೆಚ್ಚಳ ಮಾಡಲು ಯೋಜಿಸಿದೆ ಎಂದು ಸಿಇಒ ಶೆರಿಲ್ ತಿಳಿಸಿದ್ದರು. 2013ರಲ್ಲಿ 77.8 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ವರ್ಷಾಂತ್ಯಕ್ಕೆ 108.9 ಮಿಲಿಯನ್ ಮುಟ್ಟುವ ನಿರೀಕ್ಷೆಯಿದೆ. ಭಾರತದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಳವಾಗುತ್ತಿದ್ದು ಇದಕ್ಕೆ ಪೂರಕವಾಗಿ ಸರ್ಕಾರ ಕೂಡಾ ಹಳ್ಳಿ ಹಳ್ಳಿಗೆ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ನೀಡುವ ಸಂಕಲ್ಪ ಹೊಂದಿದೆ. ಹೀಗಾಗಿ ಈ ನಿಟ್ಟಿನಲ್ಲಿ ಮಾರ್ಕ್ ಹಾಗೂ ಮೋದಿ ಅವರ ಭೇಟಿ ಮಹತ್ವ ಪಡೆದಿದೆ.

English summary
Facebook CEO Mark Zuckerberg will visit India next week. Zuckerberg will be in New Delhi to keynote a summit of Internet.org. He will also meet Prime Minister Narendra Modi and members of some ministries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X