ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರುಪಾಯಿಗೆ ಬೆಲೆ ತಂದ ಮೋದಿ

By Mahesh
|
Google Oneindia Kannada News

ನವದೆಹಲಿ, ಮೇ 19: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಿಕ್ಕಿರುವ ಭರ್ಜರಿ ಗೆಲುವಿನಿಂದ ಷೇರು ಮಾರುಕಟ್ಟೆ ಕೂಡಾ ಸಂತಸಗೊಂಡಿದೆ. ಚುನಾವಣೆ ಫಲಿತಾಂಶದ ನಂತರ ಷೇರುಪೇಟೆಯಲ್ಲಿ ಹೊಸ ಸಂಚಲನ ಮೂಡಿದೆ. ಡಾಲರ್ ಎದುರು ರೂಪಾಯಿ ಬೆಲೆ 32 ಪೈಸೆ ಏರಿಕೆ ಕಂಡಿದೆ. ಬೆಲೆ ಏರಿಕೆ ಬಿಸಿಯಲ್ಲಿ ತತ್ತರಿಸಿರುವ ಜನತೆಗೆ ಇದು ಆಶಾದಾಯಕವಾಗಿ ಪರಿಣಮಿಸಿದೆ.

ಮೇ.16ರಂದು ಲೋಕಸಭೆ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುತ್ತಿರುವ ಸುದ್ದಿ ಹೊರ ಬರುತ್ತಿದ್ದಂತೆಯೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 25 ಸಾವಿರಕ್ಕೆ ಮುಟ್ಟಿ ಹೊಸ ದಾಖಲೆ ಬರೆದಿತ್ತು. ರುಪಾಯಿ ಮೌಲ್ಯ ಕೂಡಾ ಕಳೆದ 11 ತಿಂಗಳ ಬಳಿ ಡಾಲರ್ ಎದುರು ರೂಪಾಯಿ ಬೆಲೆ ಚೇತರಿಸಿಕೊಂಡು, 58.47ಕ್ಕೆ ಮುಟ್ಟಿತ್ತು. ಸೋಮವಾರ ಈ ಸಮಯಕ್ಕೆ ವಿನಿಮಯ ದರ 1 ಯುಎಸ್ ಡಿ= 58.5650 ರು ಹಾಗೂ 1 ಯುರೋ = 80.37 ರು ನಷ್ಟಿದೆ.

BJP's thumping victory lifted the rupee

ವಿದೇಶಿ ಸಾಂಸ್ಥಿಕ ಹೂಡಿಕೆ ಸಂಸ್ಥೆ(FIIs) ಗಳಿಂದ ಸುಮಾರು 3,634.82 ಕೋಟಿ ರು ಮೌಲ್ಯದ ಈಕ್ವಿಟಿ ಹರಿದು ಬಂದಿರುವುದರಿಂದ ರುಪಾಯಿ ಮೌಲ್ಯದಲ್ಲಿ ಏರಿಕೆ ಕಂಡಿದೆ.ಯುಪಿಎ ಅಧಿಕಾರಾವಧಿಯಲ್ಲಿ ಡಾಲರ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿ 69 ರು.ಗಳಿಗೆ ಮುಟ್ಟಿತ್ತು. ಈಗಿರುವ ರುಪಾಯಿ ಮೌಲ್ಯ ಈ ಹಿಂದೆ ಜೂ.19,2013ರಲ್ಲಿ ಕಂಡು ಬಂದಿತ್ತು, ಅದಾದ ಮೇಲೆ ರುಪಾಯಿ ಮೌಲ್ಯ ನಿರಂತರವಾಗಿ ಕುಸಿಯತೊಡಗಿತ್ತು. ಇದರಿಂದ ಪೆಟ್ರೋಲ್, ಡೀಸೆಲ್, ಚಿನ್ನಾಭರಣ ಎಲ್ಲವೂ ತುಟ್ಟಿಯಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎನ್‌ಡಿಎ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಚೇತರಿಕೆ ಮುಂದುವರೆದಿದೆ. ಹೀಗಾಗಿ ಬೆಲೆ ಏರಿಕೆ ಬಿಸಿಯಿಂದ ಜನ ಸಾಮಾನ್ಯರು ಬಚಾವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿವೆ.

English summary
Narendra Modi-led BJP's thumping victory lifted the rupee to an 11-month closing high of 58.79 against the US dollar, adding 50 paise in the third straight day of gains as exporters sold the US currency and whopping Rs 3,600 crore of FII funds flowed into stock market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X