ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ತ್ರೈಮಾಸಿಕದಲ್ಲಿ ಬ್ರಿಗೇಡ್ ಗೆ ಭರ್ಜರಿ ಲಾಭ

By Rajendra
|
Google Oneindia Kannada News

ಬೆಂಗಳೂರು, ಆ.9: ಬೆಂಗಳೂರು ಮೂಲದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾದ ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್ 2014-15 ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ತನ್ನ ನಿವ್ವಳ ಲಾಭವನ್ನು ಶೇ. 10.44 ರಷ್ಟು ಹೆಚ್ಚಳ ಮಾಡಿಕೊಂಡಿದೆ.

ಅಂದರೆ, ಈ ಅವಧಿಯಲ್ಲಿ ಸಂಸ್ಥೆ ರು.74 ದಶಲಕ್ಷ ಲಾಭ ಗಳಿಸಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ ಸಂಸ್ಥೆ 67 ದಶಲಕ್ಷ ರೂಪಾಯಿಗಳ ಲಾಭ ಗಳಿಸಿತ್ತು.
ಆಗಸ್ಟ್ 5 ರಂದು ಸಭೆ ಸೇರಿದ್ದ ಸಂಸ್ಥೆಯ ಆಡಳಿತ ಮಂಡಳಿ 2014-15 ನೇ ಸಾಲಿನ ಮೊದಲ ಹಣಕಾಸು ಫಲಿತಾಂಶವನ್ನು ಅಂಗೀಕರಿಸಿದೆ.

ಕಂಪನಿಯ ಸಾಧನೆಯ ವಿವರಗಳನ್ನು ನೀಡಿ ಮಾತನಾಡಿದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜೈರಾಮ್, ಹಿಂದಿನ ವರ್ಷಗಳಲ್ಲಿ ಆರಂಭಿಸಲಾಗಿರುವ ಯೋಜನೆಗಳ ಆದಾಯ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದ ಸಾಧನೆಗೆ ಸಾಕಷ್ಟು ಕೊಡುಗೆ ನೀಡಿವೆ ಎಂದರು.

Brigade group Q1 report
ಬೆಂಗಳೂರು ದಕ್ಷಿಣದಲ್ಲಿ ಬ್ರಿಗೇಡ್ ಒಮೇಗಾದಲ್ಲಿ ಟವರ್ ವೈಟ್ ಮಿಸ್ಟ್ ಮತ್ತು ಬ್ರಿಗೇಡ್ ಮೆಡೋಸ್ ನಲ್ಲಿ ಟವರ್ ವೆಸ್ಟೇರಿಯಾ ಮತ್ತು ಬೆಂಗಳೂರು ಪೂರ್ವದ ಬ್ರಿಗೇಡ್ ಎಕ್ಸೋರ್ಷಿಯಾದಲ್ಲಿ ಟವರ್ ಬರ್ಗಂಡಿ ಯೋಜನೆಗಳನ್ನು ಮೊದಲ ತ್ರೈಮಾಸಿಕದಲ್ಲಿ ಆರಂಭಿಸಲಾಯಿತು. ಈ ಎಲ್ಲಾ ಯೋಜನೆಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

2014 ರ ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಕಂಪನಿ 1682 ದಶಲಕ್ಷ ರೂಪಾಯಿಗಳ ಆದಾಯ ಗಳಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.7 ರಷ್ಟು ವೃದ್ಧಿಯಾಗಿದೆ. ಅಂದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿ 1573 ದಶಲಕ್ಷ ರೂಪಾಯಿಗಳ ಆದಾಯ ಹೊಂದಿತ್ತು.

ಮನೆಗಳ ಮಾರಾಟದಲ್ಲಿ ಹೆಚ್ಚಳ
ಈ ತ್ರೈಮಾಸಿಕದಲ್ಲಿ ಆರಂಭವಾದ ಮೂರು ಟವರ್ ಗಳಲ್ಲಿ ಪ್ರೀಮಿಯಂ ಲಕ್ಷುರಿ ಮನೆಗಳನ್ನು ನಿರ್ಮಿಸಲಾಗಿದ್ದು, 45 ಲಕ್ಷ ರೂಪಾಯಿಯಿಂದ 1.6 ಕೋಟಿ ರೂಪಾಯಿವರೆಗೆ ಬೆಲೆ ನಿಗದಿ ಮಾಡಲಾಗಿತ್ತು. 0.46 ದಶಲಕ್ಷ ಚದರಡಿ ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. 2014 ರ ಜೂನ್ 30 ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 2387 ದಶಲಕ್ಷ ರೂಪಾಯಿಯ ಮನೆಗಳನ್ನು ಮಾರಾಟ ಮಾಡಲಾಗಿದೆ.

ಬ್ರಿಗೇಡ್ ಗ್ರೂಪ್ ಈ ಅವಧಿಯಲ್ಲಿ ಒಟ್ಟು 1.91 ದಶಲಕ್ಷ ಚದರಡಿಯಲ್ಲಿ ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ. ಈ ಮೂಲಕ ಈ ಅವಧಿಯಲ್ಲಿ ಒಟ್ಟಾರೆ ಪ್ರತಿ ಚದರಡಿ ಜಾಗಕ್ಕೆ 5187 ರೂಪಾಯಿ ಬೆಲೆ ಬಂದಿದೆ ಎಂದು ಜೈರಾಮ್ ತಿಳಿಸಿದರು.

ರಿಟೇಲ್ ಮತ್ತು ಕಮರ್ಷಿಯಲ್ ವಿಭಾಗ
ಬ್ರಿಗೇಡ್ ಗ್ರೂಪ್ 0.37 ದಶಲಕ್ಷ ಚದರಡಿಯಲ್ಲಿ ಕಚೇರಿ ಮತ್ತು ರಿಟೇಲ್ ಜಾಗವನ್ನು ರಿಯಲ್ ಎಸ್ಟೇಟ್ ಗೆ ಗುರುತಿಸಿದೆ. ಈ ಜಾಗದ ಪೈಕಿ 0.19 ದಶಲಕ್ಷ ಚದರಡಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದೆ.

ಇದಲ್ಲದೇ, ಬ್ರಿಗೇಡ್ ಗ್ರೂಪ್ ಒರಾಯನ್ ಮಾಲ್ ರೀತಿಯಲ್ಲಿ ಮತ್ತೆರಡು ಮಾಲ್ ಗಳನ್ನು ನಿರ್ಮಿಸಲಿದೆ. ಪೂರ್ವ ಭಾಗದ ಬಾಣಸವಾಡಿಯಲ್ಲಿ ಮಾಲ್ ನಿರ್ಮಾಣ ಮಾಡಲಿದ್ದು, ಮತ್ತೊಂದು ಮಾಲ್ ನಿರ್ಮಾಣಕ್ಕಾಗಿ ಸದ್ಯದಲ್ಲೇ ಜಾಗವನ್ನು ಅಂತಿಮಗೊಳಿಸಲಿದೆ.

ಆತಿಥ್ಯ ಕ್ಷೇತ್ರ
ಆತಿಥ್ಯ ಕ್ಷೇತ್ರದಲ್ಲಿ ಬ್ರಿಗೇಡ್ ಗ್ರೂಪ್ ತನ್ನ ಮುಂದಾಳತ್ವ ಪ್ರದರ್ಶಿಸುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ 2 ಸ್ಥಳದಲ್ಲಿ ಹೋಟೆಲ್ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಈ ಸಂಬಂಧ ಇಂಟರ್ ಕಾಂಟಿನೆಲ್ ಹೋಟೆಲ್ಸ್ ಗ್ರೂಪ್ ನೊಂದಿಗೆ(ಐಎಚ್ ಜಿ) ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಬ್ರಿಗೇಡ್ ಗ್ರೂಪ್ ಹಾಲಿಡೆ ಇನ್ ಎಕ್ಸ್ ಪ್ರೆಸ್ ಹೋಟೆಲ್ ಗಳನ್ನು ನಿರ್ಮಾಣ ಮಾಡಲಿದೆ. ಈ ಒಪ್ಪಂದದ ಪ್ರಕಾರ ಬ್ರಿಗೇಡ್ ಗ್ರೂಪ್ 2020 ರ ವೇಳೆಗೆ ದಕ್ಷಿಣ ಭಾರತದಲ್ಲಿ 10 ಹೋಟೆಲ್ ಗಳನ್ನು ನಿರ್ಮಿಸಿ ಒಡೆತನ ಹೊಂದಲಿದೆ. ಈ ಹೋಟೆಲ್ ಗಳನ್ನು ಐಎಚ್ ಜಿ ನಿರ್ವಹಣೆ ಮಾಡಲಿದೆ.

ಮೊದಲ ತ್ರೈಮಾಸಿಕದ ಪ್ರಮುಖ ಅಂಶಗಳು
* 2014-15 ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ 1682 ದಶಲಕ್ಷ ರೂಪಾಯಿ ಆದಾಯ ಬಂದಿದ್ದರೆ, 2013-14 ರ ಇದೇ ಅವಧಿಯಲ್ಲಿ 1573 ದಶಲಕ್ಷ ರೂಪಾಯಿ ಆದಾಯ. ಒಟ್ಟು ಶೇ. 7 ರಷ್ಟು ಹೆಚ್ಚಳ.
* ಇಬಿಐಟಿಡಿಎ 480 ದಶಲಕ್ಷ ರೂಪಾಯಿ ಆಗಿದ್ದರೆ, ಕಳೆದ ವರ್ಷ 469 ದಶಲಕ್ಷ. ಶೇ. 2 ರಷ್ಟು ಏರಿಕೆ.
* ಇಬಿಐಟಿಡಿಎ ಗುರಿ ಶೇ. 29 ರಷ್ಟು. ಕಳೆದ ವರ್ಷ ಶೇ. 30 ರಷ್ಟು.
* ಪಿಎಟಿ 74 ದಶಲಕ್ಷ ರೂಪಾಯಿ ಇದ್ದರೆ, ಕಳೆದ ಸಾಲಿನಲ್ಲಿ 67 ದಶಲಕ್ಷ ರೂಪಾಯಿ.
* ಇಪಿಎಸ್ ಪ್ರತಿ ಶೇರುಗೆ 0.66 ರೂಪಾಯಿ ಆಗಿದ್ದರೆ, ಕಳೆದ ವರ್ಷ 0.59 ರೂಪಾಯಿ ಇತ್ತು.
* ಲೀಸ್ ಬಾಡಿಗೆ ಮತ್ತು ಆತಿಥ್ಯ ಕ್ಷೇತ್ರಗಳು ಕ್ರಮವಾಗಿ 378 ದಶಲಕ್ಷ ರೂಪಾಯಿ ಮತ್ತು 272 ದಶಲಕ್ಷ ರೂಪಾಯಿಗಳ ಆದಾಯ ತಂದುಕೊಟ್ಟಿವೆ.
* ಪ್ರಸಕ್ತ ಹಣಕಾಸು ಸಾಲಿನ ಉಳಿದ 9 ತಿಂಗಳಲ್ಲಿ 7.23 ದಶಲಕ್ಷ ಚದರಡಿಯಲ್ಲಿ ಎಲ್ಲಾ ಕ್ಷೇತ್ರಗಳ ಕಟ್ಟಡ ನಿರ್ಮಾಣದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಈ ಯೋಜನೆಗಳು ಅನುಮೋದನೆ ಹಂತದಲ್ಲಿವೆ.

English summary
Bangalore-based real estate major Brigade Enterprises Ltd's net profit for the first quarter of the financial year 2014-15 has shown a 10.44% growth to Rs 74 million, up from Rs 67 million recorded during the corresponding quarter of the previous fiscal. The Board of Directors of Brigade Enterprises Ltd. met on August 5 and approved the financial results for Q1 FY 2014-15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X