ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಗೆಲುವು ನಮ್ಮದು ಅಂದ್ರು ಶ್ರೀರಾಮುಲು

By ಜಿಎಂ ರೋಹಿಣಿ ಬಳ್ಳಾರಿ
|
Google Oneindia Kannada News

ಬಳ್ಳಾರಿ, ಏ. 18 : "ಕ್ಷೇತ್ರದ ಜನರು ತಮಗೆ ಬೆಂಬಲ ನೀಡಲಿದ್ದು, ಅವರ ಆಶೀರ್ವಾದದಿಂದ ತಾವು ಸಂಸತ್ ಪ್ರವೇಶಿಸುವುದಾಗಿ" ಬಳ್ಳಾರಿ ಎಸ್ಟಿ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಶೇ 71ರಷ್ಟು ಮತದಾನವಾಗಿದೆ.

ಗುರುವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಸಹೋದರಿ ಜೆ. ಶಾಂತಾ ಅವರೊಂದಿಗೆ ದೇವಿನಗರದ ಮತಗಟ್ಟೆ ಸಂಖ್ಯೆ 48 ರಲ್ಲಿ ಮತದಾನ ಮಾಡಿದರು. ಮತದಾನದ ನಂತರ ಮಾತನಾಡಿದ ಸಂಸದೆ ಜೆ.ಶಾಂತಾ "ನರೇಂದ್ರ ಮೋದಿ ಅವರು ಪ್ರಧಾನಿ ಅಗುವ ಹಿನ್ನಲೆಯಲ್ಲಿ ಶ್ರೀರಾಮುಲು ಗೆಲುವು ಸುಲಭವಾಗಲಿದೆ, ಕ್ಷೇತ್ರದ ಜನರು ಅವರಿಗೆ ಬೆಂಬಲ ನೀಡಲಿದ್ದಾರೆ" ಎಂದರು. ಚಿತ್ರಗಳಲ್ಲಿ ನೋಡಿ ರಾಮುಲು ಮತದಾನ

ಶ್ರೀರಾಮುಲು ಮತದಾನ

ಶ್ರೀರಾಮುಲು ಮತದಾನ

ಕೇಸರಿ ಜುಬ್ಬಾದಲ್ಲಿ ಕಂಗೊಳಿಸುತ್ತಿದ್ದ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತಾ ಅವರೊಂದಿಗೆ ದೇವಿನಗರದ ಮತಗಟ್ಟೆ ಸಂಖ್ಯೆ 48ರಲ್ಲಿ ಮತದಾನ ಮಾಡಿದರು.

ಗೆಲುವು ನಮ್ಮದು

ಗೆಲುವು ನಮ್ಮದು

ಮತದಾನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ ಜೆ.ಶಾಂತಾ ಬಳ್ಳಾರಿಯಲ್ಲಿ ಗೆಲುವು ನಮ್ಮದು. ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಜನರ ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಹೇಳಿದರು.

ಸಂಸದನಾಗುತ್ತೇನೆ

ಸಂಸದನಾಗುತ್ತೇನೆ

ಲೋಕಸಭೆ ಚುನಾವಣೆಯಲ್ಲಿ ಮತದಾರರು ಆಶೀರ್ವದಿಸಿ ನನ್ನನ್ನು ದೆಹಲಿಗೆ ಕಳುಹಿಸಲಿದ್ದಾರೆ. ಕ್ಷೇತ್ರದ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಪ್ರಚಾರ ನಡೆಸಿದ್ದೇನೆ. ಪ್ರತಿಯೊಬ್ಬ ಮತದಾರ ನನಗೆ ಆಶೀರ್ವಾದ ಮಾಡುತ್ತಾರೆ, ನನ್ನ ಗೆಲುವು ಖಚಿತ ಎಂದು ಶ್ರೀರಾಮುಲು ಹೇಳಿದರು. ಬಿಜೆಪಿ ಮುಖಂಡರಾದ ಡಾ. ಎಸ್.ಜೆ.ವಿ. ಮಹಿಪಾಲ್, ಪಟೇಲ್ ಸಿದ್ಧಾರೆಡ್ಡಿ ಮುಂತಾದವರು ಶ್ರೀರಾಮುಲು ಅವರ ಜೊತೆಗಿದ್ದರು.

ಸೋಮಶೇಖರ ರೆಡ್ಡಿ ಮತದಾನ

ಸೋಮಶೇಖರ ರೆಡ್ಡಿ ಮತದಾನ

ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ ಅವರು ಹವಂಭಾವಿಯ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 5 ರಲ್ಲಿ ಪತ್ನಿ ವಿಜಯ ಅವರ ಜೊತೆಗೂಡಿ ಮತ ಚಲಾವಣೆ ಮಾಡಿದರು. [ಹೀಗಿತ್ತು ನೋಡಿ ಶ್ರೀರಾಮುಲು ಪ್ರಚಾರ]

English summary
Elections 2014 : Bellary Lok Sabha constituency BJP candidate B.Sriramulu said, We will win Bellary. people will support for us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X