ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಆಂಧ್ರ-ಕರ್ನಾಟಕ ಗಡಿ ಸರ್ವೆ ಕಾರ್ಯ

|
Google Oneindia Kannada News

ಬಳ್ಳಾರಿ, ಏ. 19 : ಸುಪ್ರೀಂಕೋರ್ಟ್ ಆದೇಶದಂತೆ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿ ಒತ್ತವರಿ ಕುರಿತು ಸರ್ವೆ ಆಫ್ ಇಂಡಿಯಾ ಶನಿವಾರದಿಂದ ಸರ್ವೆ ಕಾರ್ಯ ಆರಂಭಿಸಿದೆ. ಆಂಧ್ರ ಮತ್ತು ಕರ್ನಾಟಕದ ಅಧಿಕಾರಿಗಳು ಸರ್ವೆಯಲ್ಲಿ ಪಾಲ್ಗೊಂಡಿದ್ದಾರೆ.

ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯಿಂದಾಗಿ ಗಡಿಗಳು ಬದಲಾವಣೆಯಾಗಿವೆ. ವಾಸ್ತವಿಕ ಗಡಿ ಗುರುತಿಸುವ ಕಾರ್ಯ ನಡೆಬೇಕು ಎಂದು ಸಿಇಸಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಸಿಇಸಿ ಶಿಫಾರಸ್ಸಿನ ಅನ್ವಯ ಸುಪ್ರೀಂ ಕೋರ್ಟ್ ಹಸಿರು ಪೀಠ ಗಡಿ ಗುರುತಿಸಲು ಆದೇಶ ನೀಡಿತ್ತು.

Illegal Mining

ಶನಿವಾರ ಸರ್ವೆ ಆಫ್ ಇಂಡಿಯಾದ ಸ್ವರ್ಣಂ ಸುಬ್ಬಾರಾವ್ ನೇತೃತ್ವದ ತಂಡ ಕರ್ನಾಟಕ-ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಸಮೀಕ್ಷೆ ಮಾಡಿ ಗಡಿ ಗುರುತಿಸುವ ಕಾರ್ಯವನ್ನು ಆರಂಭಿಸಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ.

ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಸಮನ್ವಯತೆ ಕೊರತೆಯಿಂದಾಗಿ ಗಡಿ ಗುರುತಿಸುವ ಕಾರ್ಯ ವಿಳಂಬವಾಗಿತ್ತು. ಆದ್ದರಿಂದ ಸುಪ್ರೀಂಕೋರ್ಟ್ ಉಭಯ ರಾಜ್ಯಗಳು ಗಡಿ ಸಮೀಕ್ಷೆಗೆ ಸಹಕಾರ ನೀಡುವಂತೆ ಅಕ್ಟೋಬರ್ 28, 2013ರಂದು ಕೋರ್ಟ್ ಸೂಚನೆ ನೀಡಿತ್ತು. [ಗಡಿ ಗುರುತಿಸುವಿದೆ ಏಕೆ?]

ಹಿನ್ನಲೆ : ಬಳ್ಳಾರಿಯ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ್ ಅವರು ಅಕ್ರಮ ಗಣಿಗಾರಿಕೆ ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಉನ್ನತಾಧಿಕಾರ ಸಮಿತಿಗೆ (ಸಿಇಸಿ) ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ಅಕ್ರಮ ಗಣಿಗಾರಿಕೆ ನಡೆಸಿದ ಕಂಪನಿಗಳು ಉಭಯ ರಾಜ್ಯಗಳ ಗಡಿಯನ್ನೇ ಬದಲಾವಣೆ ಮಾಡಿವೆ ಎಂದು ಸಿಇಸಿ ವರದಿ ನೀಡಿತ್ತು. ಅಕ್ರಮ ಗಣಿಗಾರಿಕೆಯಿಂದಾಗಿ ಗಡಿಗಳು ಬದಲವಾವಣೆಯಾಗಿವೆ. ವಾಸ್ತವಿಕ ಗಡಿ ಗುರುತಿಸುವ ಕಾರ್ಯ ನಡೆಬೇಕು ಎಂದು ಸಿಇಸಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.

ಸಿಇಸಿ ಶಿಫಾರಸಿ ಅನ್ವಯ ಸುಪ್ರೀಂ ಕೋರ್ಟ್ ಹಸಿರು ಪೀಠ ಗಡಿ ಗುರುತಿಸಲು ಆದೇಶ ನೀಡಿತ್ತು. ಸುಪ್ರೀಂ ಆದೇಶದ ಹಿನ್ನಲೆಯಲ್ಲಿ ಸರ್ವೆ ಆಫ್ ಇಂಡಿಯಾದ ಸ್ವರ್ಣಂ ಸುಬ್ಬಾರಾವ್ ನೇತೃತ್ವದ ತಂಡ ಗಡಿ ಸಮೀಕ್ಷೆ ಕಾರ್ಯ ಕೈಗೊಂಡಿದೆ.

English summary
Survey of India (SOI) begins boundary determination exercise in cooperation with Andhra Pradesh, Karnataka government authorities in the Bellary-Hospet region. The Supreme Court asked the SOI to undertake boundary determination exercise in Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X