ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಸಮಗೊಳ್ಳಲಿದೆ ಶಾಸಕ ಅನಿಲ್ ಲಾಡ್ ರೆಸಾರ್ಟ್

|
Google Oneindia Kannada News

ಬಳ್ಳಾರಿ, ಜು. 25 : ಬಳ್ಳಾರಿ ಶಾಸಕ ಅನಿಲ್ ಲಾಡ್ ಸಂಡೂರಿನಲ್ಲಿ ನಿರ್ಮಿಸಿದ್ದ ಅಮೇಜಿಂಗ್ ವ್ಯಾಲಿ ರೆಸಾರ್ಟ್ ಅನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ರೆಸಾರ್ಟ್ ತೆರವಿಗೆ ಆದೇಶ ನೀಡಲಾಗಿದೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತಾರಾ ನಗರ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ 3.65 ಎಕರೆ ಜಾಗದಲ್ಲಿ ಅನಿಲ್ ಲಾಡ್ ಮತ್ತು ಸಹೋದರ ಅಶೋಕ್ ಲಾಡ್ ಈ ಐಷಾರಾಮಿ ರೆಸಾರ್ಟ್ ನಿರ್ಮಿಸಿದ್ದರು. ಅರಣ್ಯ ಭೂ ಪರಿವರ್ತನಾ ಕಾಯ್ದೆ 1980ರ ಸೆಕ್ಷನ್ 2ರ ನಿಯಮಾವಳಿಗಳನ್ನು ಉಲ್ಲಂಘಿಸಿ ಲಾಡ್ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿತ್ತು.

Anil Lad

ಸಾಮಾಜಿಕ ಕಾರ್ಯಕರ್ತ ಸೋಮಶೇಖರ ಎಂಬುವವರು ಈ ಕುರಿತು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಸದ್ಯ ಅಧಿಕಾರಿಗಳು ರೆಸಾರ್ಟ್ ತೆರವುಗೊಳಿಸಲು ಆದೇಶ ಹೊರಡಿಸಿದ್ದಾರೆ.

ಅರಣ್ಯ ಪ್ರದೇಶವನ್ನು ವಾಣಿಜ್ಯ ಚಟುವಟಿಕೆಗೆ ಪರಿವರ್ತನೆ ಮಾಡ ಬೇಕಾದರೆ ಅರಣ್ಯ ಭೂ ಪರಿವರ್ತನಾ ಕಾಯ್ದೆ 1980 ಸೆಕ್ಷನ್ 2 ಅಡಿ ಕೇಂದ್ರ ಸರ್ಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಆದರೆ, ತಾರಾನಗರ ಗ್ರಾಮದ ಬಳಿ ಅರಣ್ಯ ಪ್ರದೇಶಕ್ಕೆ ಹೊಂದಿ ಕೊಂಡಂತೆ ಸರ್ವೆ ನಂ.410ರಲ್ಲಿ ಅನಿಲ್ ಲಾಡ್‌ 3.65 ಎಕರೆ ಭೂಮಿಯಿದ್ದು, ಆ ಪ್ರದೇಶದಲ್ಲಿ ಐಶಾರಾಮಿ ರೆಸಾರ್ಟ್ ನಿರ್ಮಾಣಕ್ಕೆ 1998ರ ರಲ್ಲಿ ಅನುಮತಿ ದೊರಕಿತ್ತು.

2000ದಲ್ಲಿ ಅಲ್ಲಿ ಅಮೇಜಿಂಗ್ ವ್ಯಾಲಿ ರೆಸಾರ್ಟ್ ನಿರ್ಮಿಸಿದ್ದ ಲಾಡ್ ಬಾರ್ ಅಂಡ್ ರೆಸ್ಟೋರೆಂಟ್‌, ಡಿಸ್ಕೋಥೆಕ್ ಮತ್ತಿತರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪವಿತ್ತು. ಸದ್ಯ ರೆಸಾರ್ಟ್ ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.

English summary
Bellary Congress MLA Anil Lad in trouble once again. Forest department orders have been issued to demolish a resort constructed by him. The resort called Amazing Valley Resort was built on 3.65 acres of land which was encroached from the forest department in Sandur taluk of Bellary district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X