ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ : ಶಾಸಕರ ಮೇಲ್ಯಾಕೆ ನೂರಾರು ಕೋಟಿ ಖರ್ಚು

By Mahesh
|
Google Oneindia Kannada News

ಬೆಳಗಾವಿ, ಡಿ.6: ಕುಂದಾ ನಗರಿಯಲ್ಲಿ ಚಳಿಗಾಲದ ಅಧಿವೇಶನ ಮುಕ್ತಾಯದ ಹೊಸ್ತಿಲಲ್ಲಿದೆ. ಕಾಂಗ್ರೆಸ್ ಸರ್ಕಾರ ಐದಾರು ವಿಧೇಯಕಗಳನ್ನು ಮಂಡಿಸಿ, ಅಂಗೀಕಾರ ಪಡೆದ ಖುಷಿಯಲ್ಲಿದೆ. ರೈತನ ಸಾವಿನ ಸೂತಕದ ಜತೆಗೆ ಶಾಸಕರ ಖರ್ಚು ವೆಚ್ಚದ ಲೆಕ್ಕಾಚಾರ ಹೊರ ಬಿದ್ದಿದೆ.

2008 ರಿಂದ 2013ರ ತನಕ ಸುಮಾರು 169.62 ಕೋಟಿ ರು ಭತ್ಯೆಯನ್ನು ಕರ್ನಾಟಕದ ಶಾಸಕರಿಗೆ ನೀಡಲಾಗಿದೆ ಎಂಬ ವಿಷಯ ಮಾಹಿತಿ ಹಕ್ಕು ಕಾಯಿದೆಯಿಂದ ತಿಳಿದು ಬಂದಿದೆ. ಕಳೆದ ಐದು ವರ್ಷಗಳಲ್ಲಿ ಶಾಸಕರ ಮೇಲೆ 123.84 ಕೋಟಿ ರು ಖರ್ಚು ಮಾಡಿದ್ದರೆ, ವಿಧಾನಪರಿಷತ್ ಸದಸ್ಯರಿಗೆ 45.77 ಕೋಟಿ ರು ಭತ್ಯೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಐದು ವರ್ಷಗಳಲ್ಲಿ ಶಾಸಕರ ಮೇಲೆ 123.84 ಕೋಟಿ ರು ಖರ್ಚು ಮಾಡಿದ್ದರೆ, ವಿಧಾನಪರಿಷತ್ ಸದಸ್ಯರಿಗೆ 45.77 ಕೋಟಿ ರು ಭತ್ಯೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Rs 123 cr spent on MLA doles in 5 years!

ಶಾಸಕರಿಗೆ ನೀಡಿರುವ ಭತ್ಯೆ ಪೈಕಿ 63.65 ಕೋಟಿ ರು, 6.45 ಕೋಟಿ ರು ವೈದ್ಯಕೀಯ ಖರ್ಚು, 84.49 ಕೋಟಿ ರು ಸಾರಿಗೆ ಭತ್ಯೆ, ದಿನ ಭತ್ಯೆ ಎಂದು ವಿಂಗಡಿಸಬಹುದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ಚಳಿಗಾಲದ ಅಧಿವೇಶನ ನಡೆಸಲಾಗಿದೆ. [ಕೊನೆ ದಿನದ ಮುಖ್ಯಾಂಶ ಇಲ್ಲಿ ಓದಿ]

ಆರ್ ಟಿಐ ನಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರತಿ ಶಾಸಕರಿಗೂ ತಿಂಗಳಿಗೆ 20 ಸಾವಿರ ರು ಸಂಬಳ ರೂಪದಲ್ಲಿ ನೀಡಲಾಗುತ್ತಿದೆ. ಫೋನ್ ಬಿಲ್ ಕಟ್ಟಲು 15 ಸಾವಿರ ರು ನೀಡಲಾಗುತ್ತದೆ. ಅಂಚೆ ಖರ್ಚು ವೆಚ್ಚ 5000 ರು, ಖಾಸಗಿ ಸಹಾಯಕರಿಗೆ 10,000 ರು ನೀಡಲಾಗುತ್ತದೆ.

ಶಾಸಕರು ತಮ್ಮ ಕ್ಷೇತ್ರಕ್ಕೆ ಖರ್ಚು ಮಾಡಲು 15,000 ರು ಹಾಗೂ ಕ್ಷೇತ್ರಕ್ಕೆ ಪ್ರವಾಸ ಹೋಗಿ ಬರಲು 25,000 ರು ಪ್ರವಾಸ ವೆಚ ನೀಡಲಾಗುತ್ತದೆ. ಒಟ್ಟಾರೆ ಸರಿ ಸುಮಾರು ಪ್ರತಿ ಶಾಸಕರಿಗೆ 90,000 ರು ಪ್ರತಿ ತಿಂಗಳು ಸಿಗುತ್ತಿದೆ.

ಚಳಿಗಾಲದ ಅಧಿವೇಶನ ದ ಸೇರಿದಂತೆ ಪ್ರತಿ ಅಧಿವೇಶನಕ್ಕೆ ಹೋಗುವ ಶಾಸಕರಿಗೆ ಪ್ರತಿದಿನ ಖರ್ಚು ವೆಚ್ಚ ಸರಿದೂಗಿಸಲು 1000 ರು ನೀಡಲಾಗುತ್ತದೆ. ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ನಡೆಸಲು 1500 ರು ಪ್ರತಿದಿನ ಸಿಗಲಿದೆ. ಇದೆಲ್ಲದರ ಜತೆಗೆ ವಿಮಾನ ಹಾಗೂ ರೈಲಿನಲ್ಲಿ ಪ್ರಯಾಣ ವೆಚ್ಚದ ರೂಪದಲ್ಲಿ ವಾರ್ಷಿಕವಾಗಿ 2 ಲಕ್ಷ ರು ಕೂಡಾ ಸಿಗುತ್ತದೆ.

English summary
At a time when the government is facing criticism for excessive spending on the ongoing second winter session of the state legislature in Belgaum, it has come to light that a whopping Rs 169.62 crore has been spent on allowances of legislators between 2008 and 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X