ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ವಾಟಾಳ್ ನಾಗರಾಜ್ ಬಂಧನ

|
Google Oneindia Kannada News

ಬೆಳಗಾವಿ, ಆ.1 : ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟ ಖಂಡಿಸಿ ಬೆಳಗಾವಿಯಿಂದ ಯಳ್ಳೂರಿಗೆ ಹೊರಟಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮತ್ತು ಅವರ ಬೆಂಬಲಿಗರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ವಾಟಾಳ್ ನಾಗರಾಜ್ ಅವರನ್ನು ಬಂಧಿಸಲಾಗಿದೆ.

ಗುರುವಾರ ನಡೆದ ಬೆಂಗಳೂರು ಬಂದ್ ವೇಳೆ ಶುಕ್ರವಾರ ಬೆಳಗಾವಿಗೆ ತೆರಳಿ ಬೆಳಗಾವಿಯಿಂದ 6 ಕಿ.ಮೀ. ದೂರದಲ್ಲಿರುವ ಯಳ್ಳೂರಿನವರೆಗೆ 'ಯಳ್ಳೂರು ಚಲೋ' ಜಾಥಾ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದ್ದರು. ಅದರಂತೆ ಇಂದು ಬೆಳಗ್ಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. [ಶುಕ್ರವಾರ ಯಳ್ಳೂರು ಚಲೋ]

Vatal Nagaraj

ಎಂಇಎಸ್ ಮರಾಠಿ ನಾಮಫಲಕ ಹಾಕಿದ ನಂತರ ನಡೆದ ಗಲಭೆಯಿಂದಾಗಿ ಯಳ್ಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವಾಟಾಳ್ ನಾಗರಾಜ್ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಸದಸ್ಯರು ಇದನ್ನು ಉಲ್ಲಂಘಿಸಿ ಯಳ್ಳೂರಿಗೆ ಹೋಗಲು ಹೊರಟಿದ್ದರಿಂದ ಅವರನ್ನು ಬಂಧಿಸಲಾಗಿದೆ. [ಬೆಳಗಾವಿಯಲ್ಲಿ ಏನಾಗುತ್ತಿದೆ?]

ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮರಾಠಿ ನಾಮಫಲಕ ಹಾಕಿದ ನಂತರ ಕನ್ನಡ ಮತ್ತು ಎಂಇಎಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯುತ್ತಿದೆ. ಗಲಭೆ ಹಿನ್ನಲೆಯಲ್ಲಿ ಜಿಲ್ಲೆಯ ನಿಪ್ಪಾಣಿ, ಖಾನಾಪುರ ಮುಂತಾದ ಕಡೆಗಳಲ್ಲಿ ನಿಷೇಧಾಜ್ಞೆ ಹಾಕಲಾಗಿತ್ತು. ಸದ್ಯ ಅದನ್ನು ಸಡಿಲಿಸಲಾಗಿದೆ. ಆದರೆ, ಗಡಿಭಾಗದ ಯಳ್ಳೂರಿನಲ್ಲಿ ನಿಷೇಧಾಜ್ಞೆ ಮುಂದುವರಿದಿದೆ. [ಎಂಇಎಸ್ ನಿಷೇಧಕ್ಕೆ ನಡೆದಿದೆ ಚಿಂತನೆ]

ಇಂದು ಕನ್ನಡ ಪರ ಸಂಘಟನೆಗಳು ಯಳ್ಳೂರು ಚಲೋ ನಡೆಸಿದರೆ ಪುನಃ ಘರ್ಷಣೆ ಸಂಭವಿಸಬಹುದು ಎಂಬ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಮುಂಖಡರನ್ನು ವಿಮಾನ ನಿಲ್ದಾಣದಲ್ಲಿಯೇ ಪೊಲೀಸರು ಬಂಧಿಸಿದ್ದಾರೆ.

ಹೋರಾಟ ನಿಲ್ಲಿಸೋಲ್ಲ : ಬೆಳಗಾವಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ "ಪೊಲೀಸರು ನಮ್ಮನ್ನು ಬಂಧಿಸಿದರೆ ನಂತರ ಬಿಡುಗಡೆ ಮಾಡುತ್ತಾರೆ. ನಾವು ನಮ್ಮ ಹೋರಾಟವನ್ನು ನಿಲ್ಲಿಸೋದಿಲ್ಲ. ಯಳ್ಳೂರಿಗೆ ತೆರಳುತ್ತೇವೆ" ಎಂದು ಅವರು ಹೇಳಿದ್ದಾರೆ.

English summary
Kannada Chalavali Vatal Paksha president Vatal Nagaraj and more than 50 of his supporters were arrested in Sambre Airport, Belgaum on Friday, August 1. Vatal Nagaraj announced jatha on from Belgaum to Yellur today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X