ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದುವರಿದ ಮಳೆ ಆಟಕಾಟ: 200 ನವಿಲು ಸಾವು

By Srinath
|
Google Oneindia Kannada News

Summer rain east monsoon wreak havoc in Belgaum
ಬೆಳಗಾವಿ, ಮಾರ್ಚ್ 10: ಪೂರ್ವ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ಕೈಗೆ ಬಂದ ಫಸಲು ಬಾಯಿಗೆ ಬಾರದಂತಾಗಿದೆ. ರೈತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಈ ಮಧ್ಯೆ, ಭಾನುವಾರ ಸುರಿದ ಮಳೆಗೆ ಮೂವರು ಸಾವಿಗೀಡಾಗಿದ್ದಾರೆ.

ಕಳೆದೊಂದು ವಾರದಲ್ಲಿ ಮಳೆ ಅವಾಂತರದಿಂದ ಸುಮಾರು 500 ಕೋಟಿ ರೂ. ಗೂ ಅಧಿಕ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ.

ಬೆಳಗಾವಿ ನಗರ ಮತ್ತು ಗೋಕಾಕ್ ತಾಲೂಕಿನಲ್ಲಿ ಮಳೆ ಹಾವಳಿ ವಿಪರೀತವಾಗಿ ಆಗಿದೆ. ಮಳೆ ಸಂಬಂಧಿ ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದ ದ್ರಾಕ್ಷಿ, ದಾಳಿಂಬೆ, ಬಾಳೆ, ಮಾವು, ಕಲ್ಲಂಗಡಿ ಮತ್ತು ಸಪೋಟಾ ಬೆಳೆ ನಾಶವಾಗಿದೆ.

ಅಥಣಿ, ರಾಯಭಾಗ, ಚಿಕ್ಕೋಡಿ, ಗೋಕಾಕ್, ಸುಣಧೋಳಿ, ಕುಲಗೋಡ, ವಡೇರಹಟ್ಟಿ ಸೇರಿದಂತೆ ಸುಮಾರು 13 ಗ್ರಾಮಗಳ ಆಲಿಕಲ್ಲು ಮಳೆಯಾಗಿದ್ದು, 200ಕ್ಕೂ ಹೆಚ್ಚು ನವಿಲು, 30 ಕುರಿಗಳು ಸಾವಿಗೀಡಾಗಿವೆ.

ಮೂವರ ಬದುಕಿಗೆ ಬರಸಿಡಿಲು:
ಗೋಕಾಕ್ ತಾಲೂಕಿನ ವಡೇರಹಟ್ಟಿಯಲ್ಲಿ ಮರದ ಕೆಳಗೆ ಆಶ್ರಯ ಪಡೆದಿದ್ದ 45 ವರ್ಷದ ಕಮಲವ್ವ ಲಕ್ಷ್ಮಣ ಇರಗಾರ್ ಎಂಬ ಕೂಲಿ ಮಹಿಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂಡಿ ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಮನೆಯ ಮೇಲಿಂದ ಕಲ್ಲುಗಳು ಬಿದ್ದು, ಕಲ್ಲವ ಕವಡಿ (70) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದಲ್ಲಿ ಹೊಲದಲ್ಲಿದ್ದ ಪುಂಡಲೀಕ ಬಸಪ್ಪ ಕೊಪ್ಪದ ಎಂಬ ಯುವಕ ಶನಿವಾರ ರಾತ್ರಿ ಅಸುನೀಗಿದ್ದಾನೆ. [ರಾಷ್ಟ್ರಪಕ್ಷಿ ಉಳಿಸ್ರಪ್ಪ ರಾಜಕಾರಣಿಗಳಾ]

English summary
Summer rain east monsoon create havoc in Belgaum - 3 people dead and morfe than 200 peococks dead. More than Rs 500 crore crop distruction reported in the last 1 week. Kamalavva Lakshmana Irgar (45), Kallavva Kavadi (70) and a 24-year-old youth was killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X