ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಡೆಯದ ಪವಾಡ, ಆನಂದ ಸ್ವಾಮೀಜಿ ಅಂತ್ಯಕ್ರಿಯೆ

|
Google Oneindia Kannada News

ಬೆಳಗಾವಿ, ಅ. 13 : ಈ ಬಾರಿ ಯಾವುದೇ ಪವಾಡ ನಡೆದಿಲ್ಲ, ಅಥಣಿ ತಾಲೂಕಿನ ಗಣಪತಿ ಮಠದ ಆನಂದಸ್ವಾಮೀಜಿ (ಗಣೇಶಯೋಗಿ ಮಹಾರಾಜರು) ಮೃತಪಟ್ಟಿದ್ದು, ಭಾನುವಾರ ರಾತ್ರಿ ಅವರ ಅಂತ್ಯಸಂಸ್ಕಾರವನ್ನು ಭಕ್ತರು ಮಠದ ಆವರಣದಲ್ಲಿ ನೆರವೇರಿಸಿದ್ದಾರೆ. ಮೂರು ದಿನಗಳ ಬಳಿಕ ಬದುಕಿಬಂದು ಪವಾಡ ಮಾಡುತ್ತೇನೆ ಎಂದು ವಿಷ ಸೇವಿಸಿದ್ದ ಸ್ವಾಮೀಜಿ ಅಂತ್ಯಕ್ರಿಯೆ ನಡೆದಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೆಂಪವಾಡ ಗ್ರಾಮದಲ್ಲಿರುವ ಗಣಪತಿ ಮಠದಲ್ಲಿ ಆನಂದ ಸ್ವಾಮೀಜಿ (80) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿತ್ತು. ಮಠದಲ್ಲಿ ಸೇರಿದ್ದ ನೂರಾರು ಭಕ್ತರು 'ಮೂರು ದಿನಗಳ ನಂತರ ನಮ್ಮ ಸ್ವಾಮೀಜಿ ಮತ್ತೆ ಹುಟ್ಟಿ ಬರುತ್ತಾರೆ. ಸ್ವಾಮೀಜಿ ದೇಹವನ್ನು ಮುಟ್ಟಲು ಬಿಡುವುದಿಲ್ಲ' ಎಂದು ಮೃತದೇಹದ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಿರಲಿಲ್ಲ.

Athani

ಗಣಪತಿ ಮಠದಲ್ಲಿಯೇ ವಿಷ ಸೇವಿಸಿ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇಸಿಜಿ ಮೂಲಕ ಅವರನ್ನು 'ಕ್ಲಿನಿಕಲಿ ಡೆಡ್' ಎಂದು ಘೋಷಿಸಿದ್ದೇವೆ. ತಹಸೀಲ್ದಾರ್ ಎಸ್ ಎಸ್ ಪೂಜಾರಿ ಹಾಗೂ ಪೊಲೀಸರು ಮುಂದಿನ ಕ್ರಮ ಜರುಗಿಸಬಹುದು ಸರ್ಕಾರಿ ವೈದ್ಯಾಧಿಕಾರಿಗಳು ಭಾನುವಾರ ಮಧ್ಯಾಹ್ನ ಸ್ಪಷ್ಟಪಡಿಸಿದ್ದರು. ಆದರೆ, ಭಕ್ತರು ಅಂತ್ಯಕ್ರಿಯೆ ಮಾಡಲು ಒಪ್ಪಿಗೆ ನೀಡಿರಲಿಲ್ಲ. [ಗಣಪತಿ ಮಠ ಸ್ವಾಮೀಜಿ ನಿಗೂಢ ಸಾವು]

ಮಠದ ಆವರಣಕ್ಕೆ ಬರದಂತೆ ಮತ್ತು ಸ್ವಾಮೀಜಿಗಳ ವಿಡಿಯೋ ತೆಗೆಯದಂತೆ ಪೊಲೀಸರಿಗೆ ಮತ್ತು ಮಾಧ್ಯಮದವರನ್ನು ಭಕ್ತರು ತಡೆದಿದ್ದರು. ಪೊಲೀಸರು ಮಠದ ಆವರಣದಿಂದ ಹೊರಗೆ ಹೋಗಬೇಕು ಎಂದು ಭಕ್ತರು ಪ್ರತಿಭಟನೆ ನಡೆಸಿದ್ದರು. ಭಾನುವಾರ ಬೆಳಗ್ಗೆಯಿಂದ ನಡೆದ ಈ ಹೈಡ್ರಾಮ ರಾತ್ರಿ ಅಂತ್ಯಗೊಂಡಿದ್ದು, ಸ್ವಾಮೀಜಿ ಅಂತ್ಯಕ್ರಿಯೆಯನ್ನು ಭಕ್ತರು ಮಠದ ಆವರಣದಲ್ಲಿ ಮಾಡಿದ್ದಾರೆ. [ಬೀದರ್ ಚೌಳಿ ಮಠದ ಮತ್ತೊಬ್ಬ ಸ್ವಾಮೀಜಿ ಸಾವು]

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಸ್.ಪಾಟೀಲ್ ಅವರು, ಪರಿಸ್ಥಿತಿಯ ಬಗ್ಗೆ ಭಕ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರ ರಾತ್ರಿ ಶ್ರೀಗಳ ಅಂತ್ಯಕ್ರಿಯೆ ನಡೆದಿದೆ. ಮಠದ ಆಗಮಿಸಿದ ಭಕ್ತರ ಪೈಕಿ ಹಲವರು ಅಲ್ಲಿಂದ ಮರಳಿದ್ದರೆ, ಕೆಲವರು ಮಾತ್ರ ಸ್ವಾಮೀಜಿ ಬದುಕಿ ಬರುತ್ತಾರೆ ಎಂದು ಇನ್ನೂ ಮಠದಲ್ಲಿ ಕಾದು ಕುಳಿತಿದ್ದಾರೆ.

ಹಿಂದೆಯೂ ಆನಂದಸ್ವಾಮೀಜಿ ಹಾವಿನಿಂದ ಕಚ್ಚಿಸಿಕೊಂಡು ಮೂರು ದಿನಗಳ ಕಾಲ ಪ್ರಜ್ಞೆ ಕಳೆದುಕೊಂಡಿದ್ದರು. ಕರೆಂಟ್ ಹೊಡಿಸಿಕೊಂಡಿದ್ದರು. ನಂತರ ಬದುಕಿ ಬಂದಿದ್ದರು. ಈ ಬಾರಿ ವಿಷ ಕುಡಿದು ಮೂರು ದಿನಗಳ ಬಳಿಕ ಬದುಕಿ ಬರುವುದಾಗಿ ಸ್ವಾಮೀಜಿ ಹೇಳಿದ್ದರು. ಆದರೆ, ಯಾವುದೇ ಪವಾಡ ನಡೆದಿಲ್ಲ.

English summary
Anand Swamiji (Ganeshyogi Maharaj) who used to claim that he would come back to life three days after his death, died after consuming poison. Hundreds of devotees urged the police to wait for three days for Swamiji last rites. Deputy Superintendent of Police S.S.Patil explained the seriousness of the matter to the devotees and last rites held at Ganapathi mutt premises at Kempwad village of Athani Taluk, Belgaum district on Sunday late night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X