ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಮುಂದುವರೆದ ಎಂಇಎಸ್ ಪುಂಡಾಟಿಕೆ

|
Google Oneindia Kannada News

ಬೆಳಗಾವಿ, ಜು. 28 : ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರ ಪುಂಡಾಟಿಕೆ ಮುಂದುವರೆದಿದೆ. ಸೋಮವಾರ ಐದು ಗ್ರಾಮಗಳಲ್ಲಿ ಮರಾಠಿ ನಾಮಫಲಕಗಳನ್ನು ಹಾಕಲಾಗಿದೆ. ಮರಾಠಿ ನಾಮಫಲಕದ ಕುರಿತ ಪಿಐಎಲ್ ವಿಚಾರಣೆಯನ್ನು ಹೈಕೋರ್ಟ್ ಆ.4ಕ್ಕೆ ಮುಂದೂಡಿದೆ.

ಎಂಇಎಸ್ ಕಾರ್ಯಕರ್ತರು ಸೋಮವಾರ ಗಾರ್ಲ್ ಗುಂಜಿ, ಕುಪ್ಪಟಗಿರಿ, ನಿಡುಗಲ್ಲು, ಹಲಸವಾಡಿ ಹಾಗೂ ಸಣ್ಣ ಹೊಸೂರು ಗ್ರಾಮಗಳಲ್ಲಿ ಮರಾಠಿ ನಾಮಫಲಕ ಹಾಕಿದ್ದಾರೆ. ಎಳ್ಳೂರಿನಲ್ಲಿ ಅಕ್ರಮವಾಗಿ ಮರುಸ್ಥಾಪಿಸಿದ್ದ ಮರಾಠಿ ನಾಮಫಲಕವನ್ನು ಭಾನುವಾರ ಜಿಲ್ಲಾಡಳಿತ ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಿತ್ತು.

Marathi boards

ಇದರಿಂದ ಆಕ್ರೋಶಗೊಂಡಿರುವ ಎಂಇಎಸ್ ಕಾರ್ಯಕರ್ತರು ಇಂದು ಮತ್ತೆ ಮರಾಠಿ ನಾಮಫಲಕವನ್ನು ಹಾಕುವ ಮೂಲಕ ಪುಂಡಾಟಿಕೆ ಮುಂದುವರೆಸಿದ್ದಾರೆ. ಎಳ್ಳೂರು ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು, ಪರಿಸ್ಥಿತಿ ಅವಲೋಕನ ನಡೆಸುತ್ತಿದ್ದಾರೆ. [ಕನ್ನಡಿಗರ ವಿರುದ್ಧ 'ಉದ್ಧವ್' ಉದ್ಧಟತನ ಮಾತು]

ವಿಚಾರಣೆ ಮುಂದೂಡಿಕೆ : ಮರಾಠಿ ನಾಮಫಲಕ ಹಾಕಿರುವ ಕುರಿತು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಣ್ಣ ಗಡಾದ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ನಡೆಸಿದ್ದು, ವಿಚಾರಣೆಯನ್ನು ಆ.4ಕ್ಕೆ ಮುಂದೂಡಿದೆ.

ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಗೆ ಹೇಳಿಕೆ ನೀಡಿರುವ ಸರ್ಕಾರಿ ವಕೀಲರು, ನಾಮ ಫಲಕಗಳನ್ನು ಜಿಲ್ಲಾಡಳಿತದ ವತಿಯಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಅರ್ಜಿಯ ವಿಚಾರಣೆಯನ್ನು ಆ.4ರಂದು ಹೈಕೋರ್ಟ್ ಪುನಃ ಕೈಗೆತ್ತಿಕೊಳ್ಳಲಿದೆ. [ಬೆಳಗಾವಿಯಲ್ಲಿ ಏನಾಗುತ್ತಿದೆ?]

ಪರಿಷತ್ತಿನಲ್ಲಿ ಪ್ರತಿಧ್ವನಿ : ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಬಗ್ಗೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿಧಾನಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಸೋಮವಾರದ ಕಲಾಪದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸರ್ಕಾರ ಪುಂಡಾಟಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಮನವಿ ಮಾಡಿದ್ದಾರೆ. ಪ್ರಶ್ನೋತ್ತರ ಕಲಾಪದ ನಂತರ ಈ ಬಗ್ಗೆ ಪರಿಷತ್ತಿನಲ್ಲಿ ಚರ್ಚೆ ನಡೆಯಲಿದೆ.

English summary
Maharashtra Ekikaran Samithi (MES) activists re-installed 5 Marathi boards on Monday, July 28 in Belgaum district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X