ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕೋಡಿ ಉಪ ಚುನಾವಣೆ : ಗಣೇಶ್ ಹುಕ್ಕೇರಿ ಅಭ್ಯರ್ಥಿ

|
Google Oneindia Kannada News

ಬೆಳಗಾವಿ, ಜು. 28 : ಮೂರು ಕ್ಷೇತ್ರಗಳ ಉಪ ಚುನಾವಣೆ ಕಣ ರಂಗೇರುತ್ತಿದೆ. ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಪ್ರಕಾಶ್ ಹುಕ್ಕೇರಿ ಅವರ ಪುತ್ರ ಗಣೇಶ್ ಹುಕ್ಕೇರಿ ಅವರ ಹೆಸರನ್ನು ವೀಕ್ಷಕರು ಅಂತಿಮಗೊಳಿಸಿದ್ದಾರೆ.

ಚಿಕ್ಕೋಡಿಯಲ್ಲಿ ಭಾನುವಾರ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚುನಾವಣಾ ವೀಕ್ಷಕ ಮತ್ತು ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಗಣೇಶ್ ಹುಕ್ಕೇರಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಅವರಿಗೆ ಬಿ ಫಾರಂ ನೀಡುವಂತೆ ಎಐಸಿಸಿ ಮತ್ತು ಕೆಪಿಸಿಸಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸುದರ್ಶನ್ ಹೇಳಿದರು.

Congress

ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿ ನೇಮಿಸಿದ ವೀಕ್ಷಕರಾದ ವಿ.ಆರ್.ಸುದರ್ಶನ್, ಎಸ್.ಜಿ. ನಂಜಯ್ಯನಮಠ, ರಿಜ್ವಾನ್ ಅರ್ಷದ್ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಅಭ್ಯರ್ಥಿ ಆಯ್ಕೆ ಕುರಿತು ಸಮಾಲೋಚನೆ ನಡೆಸಿದರು. [ಉಪ ಚುನಾವಣೆ, ಶಾಸಕರೊಂದಿಗೆ ಸಿಎಂ ಸಿದ್ದು ಸಭೆ]

ಈ ಸಭೆಯಲ್ಲಿ ಎಲ್ಲರೂ ಸಂಸದ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಪ್ರಕಾಶ ಹುಕ್ಕೇರಿ ಅವರ ಹೆಸರನ್ನು ಸರ್ವಾನುಮತದಿಂದ ಅಂತಿಮಗೊಳಿಸಿದರು. ಆದ್ದರಿಂದ ವೀಕ್ಷಕರ ತಂಡವು ಗಣೇಶ ಹುಕ್ಕೇರಿ ಅವರಿಗೆ ಚುನಾವಣಾ 'ಬಿ' ಫಾರಂ ನೀಡುವಂತೆ ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಸಿದ್ದರಾಮಯ್ಯರಿಗೆ ಶಿಫಾರಸು ಮಾಡಲಿದೆ.[ಉಪ ಚುನಾವಣೆ ವೇಳಾಪಟ್ಟಿ]

ಸಂಸದರಾಗಿ ಆಯ್ಕೆಯಾದ ಸಚಿವ ಪ್ರಕಾಶ್ ಹುಕ್ಕೇರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಶಾಸಕ ಸ್ಥಾನಕ್ಕೆ ಆ.21ರಂದು ಉಪ ಚುನಾವಣೆ ನಡೆಯಲಿದೆ. ಗಣೇಶ್ ಹುಕ್ಕೇರಿ ಅವರ ಹೆಸರನ್ನು ಹೈ ಕಮಾಂಡ್ ಅಂತಿಮಗೊಳಿಸಲಿದೆ.

English summary
The Karnataka Pradesh Congress Committee (KPCC) observers team has finalized the name of Ganesh Hukkeri, son of MP Prakash Hukkeri, to Chikkodi-Sadalaga assembly by-election, scheduled on August 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X