ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಟ್ರಾಕ್ಟರ್ ಪಲ್ಟಿ, ಐವರ ಸಾವು

|
Google Oneindia Kannada News

ಬೆಳಗಾವಿ, ಏ.16 : ಬುಧವಾರ ಬೆಳ್ಳಂಬೆಳಗ್ಗೆ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಬಳಿ ಬಸ್ ಬೆಂಕಿಗೆ ಆಹುತಿಯಾಗಿ 6 ಜನರು ಮೃತಪಟ್ಟರೆ, ಬೆಳಗಾವಿಯಲ್ಲಿ ಟ್ರಾಕ್ಟರ್ ಪಲ್ಟಿ ಹೊಡೆದಿದ್ದರಿಂದ 5 ಮಂದಿ ಮೃತಪಟ್ಟಿದ್ದಾರೆ.

ಬುಧವಾರ ಬೆಳಗ್ಗೆ ಬೆಳಗಾವಿ ಜಿಲ್ಲೆ ಕಿತ್ತೂರಿನ ಉಡಿಕೇರಿ ಬಳಿ ಟ್ರಾಕ್ಟರ್ ಪಲ್ಟಿ ಹೊಡೆದಿದ್ದರಿಂದ 5 ಜನರು ಸಾವನ್ನಪ್ಪಿ, 15 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಖಾನಾಪುರದ ಹಲಸಿ ಗ್ರಾಮದವರು ಎಂದು ಗುರುತಿಸಲಾಗಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

Belgaum

ಬೆಳಗ್ಗೆ ಮೂರು ಗಂಟೆಯ ಸಮಯದಲ್ಲಿ ಈ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದವರು ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದರು ಎಂದು ತಿಳಿದುಬಂದಿದೆ. ಮೃತರೆಲ್ಲರೂ ಸಂಬಂಧಿಕರಾಗಿದ್ದು, ಹಲಸಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. [ಚಿತ್ರದುರ್ಗದಲ್ಲಿ ಬಸ್ ದುರಂತ 6 ಸಾವು]

ಮೃತಪಟ್ಟ ಎಲ್ಲರನ್ನು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಬೈಲಹೊಂಗಲ ಮತ್ತು ಬೆಳಗಾವಿ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತಪಟ್ಟವರನ್ನು ಸುರೇಶ್ ಅಣ್ಣಪ್ಪ ಕೋಲ್ಕರ್(42), ಭಾರತಿಕೃಷ್ಣ ಕೋಲ್ಕರ್ (35), ಶ್ಯಾಮಲಾ ನಾಗಪ್ಪಕೋಲ್ಕರ್ (55), ಲಕ್ಷ್ಮೀ ಪರಸಪ್ಪ ಕೋಲ್ಕರ್ (38) ಮತ್ತು ರಾಜು ಪರುಶರಾಂ (25) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಟ್ರಾಕ್ಟರ್ ಚಾಲಕನೂ ಸೇರಿದ್ದು, ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

English summary
Five members of a family were killed on the spot and eight others suffered grievous injuries in the early hours of Wednesday when a vehicle in which they were traveling met with an accident between Sutgatti and Udakeri near Belgaum city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X