ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ಪರೀಕ್ಷೆ ಬರೆದ ಹಿಂಡಲಗಾ ಕೈದಿಗಳು

|
Google Oneindia Kannada News

ಬೆಳಗಾವಿ, ಏ. 25 : ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಗಳು ಪದವಿ ವ್ಯಾಸಂಗ ಆರಂಭಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮುಕ್ತ ವಿವಿಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ 23 ಕೈದಿಗಳು ಈ ಸಲ ಪರೀಕ್ಷೆ ಬರೆಯುತ್ತಿದ್ದಾರೆ.

ಬುಧವಾರ ಜೈಲಿನ 12 ಕೈದಿಗಳು ಮರಾಠಾ ಮಂಡಳ ಕಾಲೇಜಿನ ಮುಕ್ತ ವಿವಿ ಅಧ್ಯಯನ ಕೇಂದ್ರದಲ್ಲಿ ಪ್ರಥಮ ವರ್ಷದ ಬಿಎ ಪರೀಕ್ಷೆ ಬರೆದಿದ್ದಾರೆ. ಗುರುವಾರ 8 ಕೈದಿಗಳು ದ್ವಿತೀಯ ಬಿಎ ಪದವಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ.

Mysore University

ಬುಧವಾರ ಬೆಳಗಾವಿಯ ಮಾರುತಿ ಗೊಟಿಯಾಳಕರ, ಸುಭಾಷ್‌ ವಲ್ಲೆಪೂರಕರ, ಬೆಂಗಳೂರಿನ ವಿ. ಮಹೇಶ, ರೋಣ ತಾಲೂಕಿನ ಉಮಾ ಹಿರೇಮಠ, ಯಮಕನಮರಡಿಯ ಆನಂದ ಗಾಳಜಿನಗಿ, ಬೈಲಹೊಂಗಲ ತಾಲೂಕಿನ ನಾಗಲಾಪುರದ ಬೀರಪ್ಪ ದೇಸನೂರ ಮತ್ತು ಉಮೇಶ , ಕೆ. ಸುಬ್ರಮಣ್ಯ ಪ್ರಥಮ ವರ್ಷದ ಪರೀಕ್ಷೆಗೆ ಹಾಜರಾಗಿದ್ದರು.

ಪದವಿ ಪರೀಕ್ಷ ಬರೆದಿರುವ ಎಲ್ಲಾ ಕೈದಿಗಳು ಜೀವಾವಧಿ ಶಿಕ್ಷೆಗೆ ಗುರಿಯಾದವರು ಎಂಬುದು ವಿಶೇಷ. ಇವರಲ್ಲಿ ಕೆಲವರು 12 ವರ್ಷ ಶಿಕ್ಷೆ ಅನುಭವಿಸಿದ್ದರೆ, ಮತ್ತೆ ಕೆಲವರು 10 ವರ್ಷದ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಬೀರಪ್ಪ ಎಂಬ (62) ವರ್ಷದ ವ್ಯಕ್ತಿಯು ಪರೀಕ್ಷೆ ಬರೆದಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಗಳಾಗಿದ್ದರೂ ಮೈಸೂರಿನ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿರುವ ಎಂ.ಎನ್‌. ಚಂದ್ರಶೇಖರ ಮತ್ತು ಪ್ರತೀಶ್‌ ಮತ್ತು ಉಮೇಶ ಎಂಬುವವರು ಮೈಸೂರಿಗೆ ತೆರಳಿ ಪರೀಕ್ಷೆ ಬರೆಯುತ್ತಿದ್ದಾರೆ.

ಜೈಲಿನಲ್ಲಿದ್ದೂ ಪದವಿ ಪಡೆದಿದ್ದರು : ಹಿಂಡಲಗಾ ಜೈಲಿನಲ್ಲಿ ಹಿಂದೆಯೂ 16 ಜನ ಕೈದಿಗಳು ಶಿಕ್ಷೆ ಅನುಭವಿಸುತ್ತಿರುವಾಗಲೇ ಇಂದಿರಾ ಗಾಂಧಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಮುಕ್ತ ವಿವಿ ಪರೀಕ್ಷೆ ಬರೆದು ಪದವಿ ಪಡೆದಿದ್ದರು. 2009ರಲ್ಲಿ ಪದವಿ ಪರೀಕ್ಷೆ ಬರೆದ ಇವರಿಂದ ಯಾವುದೇ ಶುಲ್ಕವನ್ನು ಪಡೆಯದೆ ಪರೀಕ್ಷೆ ಬರೆಯಲು ವಿವಿ ಅವಕಾಶ ಕಲ್ಪಿಸಿತ್ತು.

English summary
It’s a known fact that some non-studious students consider institutions as jails. But these studious persons have turned their prisons into institution of sorts, to be graduates. Twenty three inmates of Hindalga central jail have written graduation exams from Mysore University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X