ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಯುವಕರ ಸ್ವಚ್ಛ ಭಾರತ ಕನಸು

|
Google Oneindia Kannada News

ಬೆಂಗಳೂರು, ಅ. 9 : ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಿರುವ ನಗರದ ಯುವಕರ ತಂಡವೊಂದು ತಾವು ವಾಸಿಸುವ ಪ್ರದೇಶವನ್ನು ಸ್ವಚ್ಛವಾಗಿಡಲು ಶ್ರಮಿಸಿದೆ. ಗಾಂಧಿ ಜಯಂತಿಯಂದು ಕರೆ ನೀಡಿದ ಸ್ವಚ್ಛ ಭಾರತ ಅಭಿಯಾನದಲ್ಲಿ ಯುವಕರು ಸ್ವಯಂ ಪ್ರೇರಿತವಾಗಿ ತೊಡಗಿಕೊಂಡಿದ್ದರು.

ಸ್ವಸ್ತಿಕ್ ಪೈ, ಆಯುಷ್‌ ರಾ, ಅಖಿಲ್ ಕೃಷ್ಣ ಮೋಹನ್, ಶ್ರೀವಾಸ್ತವ, ಗೌತಮ್‌ ನಾಯರ್‌, ಕೌಸ್ತುಭ ಹೆಗಡೆ, ಅಮೃತಯಾದವ್ ಭಟ್ಟಾಚಾರ್ಯ ಮತ್ತು ನಂದು ಗೋಪಾಲ ಎಂಬ ಯುವಕರ ತಂಡವೇ ಸ್ವಚ್ಛತಾ ಕಾರ್ಯ ನಡೆಸಿದೆ. ಗಾಂಧಿ ಜಯಂತಿಯಂದು ಬೆಳಗ್ಗೆ 8 ಗಂಟೆ ಮತ್ತು ಸಂಜೆ 4 ಗಂಟೆಯಿಂದ ಎರಡೆರಡು ತಾಸು ಇಂದಿರಾನಗರದ ಡಿಫೆನ್ಸ್‌ ಕಾಲೋನಿಯನ್ನು ಸ್ವಚ್ಛಮಾಡಿದ್ದಾರೆ.[ಗಾಂಧೀಜಿ ಸ್ವಚ್ಛ ಭಾರತ ಕನಸು ನನಸಾಗಿಸೋಣ: ಮೋದಿ]

ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಬಾಟಲ್‌ಗಳನ್ನು, ಗಾಜು, ಸಿಗರೇಟ್‌ ಪ್ಯಾಕ್‌ ಮತ್ತಿತರ ಕಸ ಕಡ್ಡಿಗಳನ್ನು ಸ್ವಚ್ಛಮಾಡಿದೆವು. ಆದರೆ ಬೆಳಿಗ್ಗೆ ಸ್ವಚ್ಛ ಮಾಡಿದ್ದ ರಸ್ತೆಯನ್ನು ಸಂಜೆ ಹೋಗಿ ನೋಡಿದರೆ ಮೊದಲಿನಂತೆ ಆಗಿತ್ತು. ಕೆಲವರು ಬಂದು ನಮ್ಮ ಕೆಲಸವನ್ನು ಹೊಗಳಿದರು. ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡುವಲ್ಲಿ ಶ್ರಮವಹಿಸಿದರೆ ಸ್ವಚ್ಛ ಭಾರತ ನಿರ್ಮಾಣ ಸಾಧ್ಯ ಎಂಬುದು ಯುವಕರ ಮಾತು.[ಮೋದಿ ಮೆಚ್ಚುಗೆ, ಸ್ವಚ್ಛ ಭಾರತದ ಬಗ್ಗೆ ದೇವೇಗೌಡ್ರು]

ಪ್ಲಾಸ್ಟಿಕ್‌ಗೆ ಜಾಗವಿಲ್ಲ

ಪ್ಲಾಸ್ಟಿಕ್‌ಗೆ ಜಾಗವಿಲ್ಲ

ಪರಿಸರ ಮಾರಕ ಪ್ಲಾಸ್ಟಿಕ್‌ನ್ನು ಸ್ವಚ್ಛ ಮಾಡಿದ ಇಂದಿರಾನಗರದ ಯುವಕರ ತಂಡ.

ಸಿಗರೇಟ್‌ ಸೇವನೆ ಬೇಕಾ?

ಸಿಗರೇಟ್‌ ಸೇವನೆ ಬೇಕಾ?

ಆರೋಗ್ಯ ಮತ್ತು ಪರಿಸರ ಎರಡಕ್ಕೂ ಮಾರಕವಾದ ಸಿಗರೇಟ್‌ಗೆ ಮುಕ್ತಿ ಕಾಣಿಸಿದ ರೀತಿ.

ತ್ಯಾಜ್ಯ ಮುಕ್ತ ಪರಿಸರ

ತ್ಯಾಜ್ಯ ಮುಕ್ತ ಪರಿಸರ

ಮನೆ, ಪಾರ್ಕ್ ಮತ್ತಿತರ ಕಡೆಗಳಲ್ಲಿ ಎಸೆದಿದ್ದ ಕಸ ಕಡ್ಡಿಗಳನ್ನು ಸ್ವಚ್ಛಮಾಡಲಾಯಿತು.

ಪೊರಕೆ ಹಿಡಿದ ಯುವಕರ ತಂಡ

ಪೊರಕೆ ಹಿಡಿದ ಯುವಕರ ತಂಡ

ಬೆಂಗಳೂರಿನ ಇಂದಿರಾ ನಗರದ ಡಿಫೆನ್ಸ್ ಕಾಲೋನಿಯನ್ನು ಸ್ವಚ್ಛಮಾಡಿದ ಯುವಕರ ತಂಡ.

ಕಸ ಕಡ್ಡಿಗಳಿಗೆ ಮುಕ್ತಿ

ಕಸ ಕಡ್ಡಿಗಳಿಗೆ ಮುಕ್ತಿ

ಕಂಡ ಕಂಡಲ್ಲಿ ಬೀಸಾಡಿದ್ದ ಪ್ಲಾಸ್ಟಿಕ್‌, ಕಾಗದ, ವೇಸ್ಟ್‌ಗಳನ್ನು ಕ್ಲೀನ್‌ ಮಾಡಿದ ಇಂದಿರಾನಗರದ ಯುವಕರು.

English summary
Inspired by Prime Minister Narendra's Modi's 'Swachh Bharat campaign' a group of youngsters in Bangalore decided to clean up their locality on Oct 2, thereby setting an example that all you need is your will to do a good deed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X